ರಾಜ್ಯದ ಬಹುತೇಕ ಜಲಾಶಯಗಳಲ್ಲಿನ ನೀರಿನ ಮಟ್ಟ ಇಳಿಕೆ: ಬತ್ತುತ್ತಿರುವ ಡ್ಯಾಂಗಳು
ರಾಜ್ಯಾದ್ಯಂತ ಜಲಾಶಯಗಳಲ್ಲಿ ನೀರಿನ ಮಟ್ಟ ಆಂತಕಾರಿಯಾಗಿ ಕಡಿಮೆಯಾಗುತ್ತಿದೆ. ಏಪ್ರಿಲ್ 29ರ ವರೆಗೆ ರಾಜ್ಯದ 13 ಜಲಾಶಯಗಳಲ್ಲಿ ಸರಾಸರಿ ನೀರಿನ ಮಟ್ಟವು ಶೇ 27 ರಷ್ಟು ಮಾತ್ರ ಇತ್ತು.
ಬೆಂಗಳೂರು: ರಾಜ್ಯದಲ್ಲಿ ಸುಡುವ ಬಿಸಿಲಿನ ಮಧ್ಯೆ ಮಳೆ ಬಂದು ತಂಪೆರದಿದೆ. ಆದರೆ ಆತಂಕಕಾರಿ ವಿಷಯವೊಂದು ಬಹಿರಂಗಗೊಂಡಿದೆ. ಸುಡುವ ಬೇಸಿಗೆಯಿಂದಾಗಿ ರಾಜ್ಯಾದ್ಯಂತ ಜಲಾಶಯಗಳಲ್ಲಿ ನೀರಿನ ಮಟ್ಟ ಆಂತಕಾರಿಯಾಗಿ ಕಡಿಮೆಯಾಗುತ್ತಿದೆ. ಹೌದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ವರದಿಯ ಪ್ರಕಾರ, ಏಪ್ರಿಲ್ 29ರ ವರೆಗೆ ರಾಜ್ಯದ 13 ಜಲಾಶಯಗಳಲ್ಲಿ (Dams) ಸರಾಸರಿ ನೀರಿನ ಮಟ್ಟವು ಶೇ 27 ರಷ್ಟು ಮಾತ್ರ ಇತ್ತು. ಮುಂಗಾರುಕ್ಕಿಂತ ಮೊದಲು ಜನವರಿ 1 ರಿಂದ ಮೇ 31, 2023ರವರೆಗೆ ಸಾಮಾನ್ಯವಾಗಿ 129 ಮಿಮೀ ಮಳೆಯಾಗಬೇಕಿತ್ತು ಆದರೆ ಈ ಬಾರಿ ರಾಜ್ಯದಲ್ಲಿ 40 ಮಿಮೀ ಮಳೆಯಾಗಿದೆ ಎಂದು ತಿಳಿಸಿದೆ.
ತುಂಗಭದ್ರಾ ಜಲಾಶಯದಲ್ಲಿ ಸದ್ಯ 2.81 ಟಿಎಂಸಿ ಅಡಿ ನೀರು ಇದ್ದು, ಒಟ್ಟು ಸಂಗ್ರಹ ಸಾಮರ್ಥ್ಯ 105.79 ಟಿಎಂಸಿ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8.87 ಟಿಎಂಸಿ ನೀರಿತ್ತು. ವರಾಹಿಯಲ್ಲಿ ಪ್ರಸ್ತುತ ಜಲಾಶಯವು 4.08 ಟಿಎಂಸಿ ನೀರಿದ್ದು, ಒಟ್ಟು ಸಂಗ್ರಹ ಸಾಮರ್ಥ್ಯ 31.10 ಟಿಎಂಸಿಯಾಗಿದೆ. ಸೂಪಾದಲ್ಲಿ ಶೇ.21, ಹಾರಂಗಿಯಲ್ಲಿ ಶೇ.32, ಆಲಮಟ್ಟಿಯಲ್ಲಿ ಶೇ.22 ಮತ್ತು ಘಟಪ್ರಭಾದಲ್ಲಿ ಶೇ.20ರಷ್ಟು ನೀರಿದೆ. ವರದಿಯ ಪ್ರಕಾರ, ರಾಜ್ಯದ ಜಲಾಶಯಗಳಲ್ಲಿ ಶೇ 28ರಷ್ಟು ಮಾತ್ರ, ಜಲವಿದ್ಯುತ್ ಉತ್ಪಾದನೆಯಾಗುತ್ತಿದೆ.
ಮತ್ತಷ್ಟು ಓದಿ: Karnataka Weather: ಕರ್ನಾಟಕದ ದಕ್ಷಿಣ, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
ಜಲಾಶಯಗಳಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 83.55 ಟಿಎಂಸಿಯಿಂದ 90.41 ಟಿಎಂಸಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ಕಾವೇರಿ ಜಲಾಶಯಗಳಲ್ಲಿ ಶೇ 36 ರಷ್ಟು ಅಂದರೇ 40.74 ಟಿಎಂಸಿ ನೀರು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 57.32 ಟಿಎಂಸಿ ನೀರು ಇತ್ತು. ಕೃಷ್ಣಾ ಜಲಾಶಯದಲ್ಲಿ ಪ್ರದೇಶದಲ್ಲಿ ಕಳೆದ ವರ್ಷ 132.98 ಟಿಎಂಸಿ ನೀರು ಇತ್ತು. ಆದರೆ ಈ ಬಾರಿ ಶೇ.23 ರಷ್ಟು ಅಂದರೇ 99.09 ಟಿಎಂಸಿ ನೀರು ಇದೆ. ರಾಜ್ಯದಲ್ಲಿ ಸರಿಯಾದ ಸಮಯದಲ್ಲಿ ಮಳೆ ಬಾರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗಬಹುದು. ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಬಳಸಿಕೊಂಡರೆ ಒಂದು ವಾರದವರೆಗೆ ಮಾತ್ರ ಆಗುತ್ತದೆ. ಏಪ್ರಿಲ್ 29 ರಂದು 8 ಜಲಾಶಯಗಳ ಒಳಹರಿವು ಶೂನ್ಯ ಕ್ಯೂಸೆಕ್ ಆಗಿತ್ತು.
ಜಲಾಶಯಗಳಲ್ಲಿ ನೀರಿನ ಮಟ್ಟ ಕ್ರಮೇಣ ಇಳಿಮುಖವಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ