ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸತತ 2ನೇ ವರ್ಷವೂ ಶುಲ್ಕ ಏರಿಕೆ; ಪೋಷಕರ ಜೇಬಿಗೆ ಕತ್ತರಿ!

ರಾಜ್ಯ ಸರ್ಕಾರವು 2026-27ನೇ ಸಾಲಿನ ಎಂಜಿನಿಯರಿಂಗ್ ಶುಲ್ಕವನ್ನು ಶೇ 7.5 ರಷ್ಟು ಏರಿಕೆ ಮಾಡಿದೆ. ಸತತ ಎರಡನೇ ವರ್ಷವೂ ಶುಲ್ಕ ಹೆಚ್ಚಳವಾಗುತ್ತಿರುವುದರಿಂದ ಸಿಇಟಿ ಮೂಲಕ ಸೀಟು ಪಡೆಯುವ ವಿದ್ಯಾರ್ಥಿಗಳು ಹೆಚ್ಚಿನ ಹಣ ಪಾವತಿಸಬೇಕಿದ್ದು, ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶುಲ್ಕ ಹೆಚ್ಚಳದ ವಿವರ ಇಲ್ಲಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸತತ 2ನೇ ವರ್ಷವೂ ಶುಲ್ಕ ಏರಿಕೆ; ಪೋಷಕರ ಜೇಬಿಗೆ ಕತ್ತರಿ!
ಸಾಂದರ್ಭಿಕ ಚಿತ್ರ
Image Credit source: shutterstock.com
Edited By:

Updated on: Apr 14, 2026 | 6:19 AM

ಬೆಂಗಳೂರು, ಏಪ್ರಿಲ್ 14: ಕರ್ನಾಟಕದಲ್ಲಿ (Karnataka) ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ತಾಂತ್ರಿಕ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. 2026-27ನೇ ಸಾಲಿನ ಎಂಜಿನಿಯರಿಂಗ್ (Engineering) ಕೋರ್ಸ್‌ಗಳ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದ್ದು, ಮಧ್ಯಮ ವರ್ಗದ ಪೋಷಕರಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಶುಲ್ಕದ ಪಟ್ಟಿ ಹೀಗಿದೆ

ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ (CET) ಸೀಟು ಪಡೆಯುವ ವಿದ್ಯಾರ್ಥಿಗಳು ಇನ್ನು ಮುಂದೆ ಹೆಚ್ಚಿನ ಹಣ ಪಾವತಿಸಬೇಕಿದೆ.

  • ಟೈಪ್-1 ಕಾಲೇಜುಗಳು: ಪ್ರಸ್ತುತ ಇರುವ 81,800 ರೂ. ಶುಲ್ಕವು ಇನ್ನು ಮುಂದೆ 87,935 ರೂ. ಗೆ ಏರಿಕೆಯಾಗಲಿದೆ.
  • ಟೈಪ್-2 ಕಾಲೇಜುಗಳು: ಪ್ರಸ್ತುತ ಇರುವ 91,000 ರೂ. ಶುಲ್ಕವು ಇನ್ನು ಮುಂದೆ 97,825 ರೂ. ಗೆ ಏರಲಿದೆ.

ಸತತ ಏರಿಕೆಗೆ ವಿದ್ಯಾರ್ಥಿಗಳು, ಪೋಷಕರ ಆಕ್ರೋಶ

ಕಳೆದ 2025-26ನೇ ಸಾಲಿನಲ್ಲಿಯೂ ಸಹ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಸತತ ಎರಡನೇ ವರ್ಷವೂ ಶುಲ್ಕ ಏರಿಕೆಯಾಗುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿದ್ದೇವೆ. ಈಗ ಶಿಕ್ಷಣದ ಶುಲ್ಕವನ್ನೂ ಹೆಚ್ಚಿಸಿದರೆ ಉನ್ನತ ಶಿಕ್ಷಣ ಸಾಮಾನ್ಯರಿಗೆ ಗಗನಕುಸುಮವಾಗಲಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಪಿಯುಸಿ ನಂತರ ವೃತ್ತಿಜೀವನಕ್ಕೆ ಬಿ.ಟೆಕ್ ಅಥವಾ ಪಾಲಿಟೆಕ್ನಿಕ್, ಯಾವುದು ಉತ್ತಮ?

ಈ ವರ್ಷ ಪಿಯುಸಿ ಬಳಿಕ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಶುಲ್ಕ ಏರಿಕೆ ಮಾಡುವುದು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಹುದು. ಸರ್ಕಾರ ಕೂಡಲೇ ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us