KEA ವೆಬ್ ಸೈಟ್ ಹ್ಯಾಕ್..! ವಿದ್ಯಾರ್ಥಿಗಳ ದತ್ತಾಂಶ ಕಳವು

  • TV9 Web Team
  • Published On - 9:07 AM, 24 Nov 2019
KEA ವೆಬ್ ಸೈಟ್ ಹ್ಯಾಕ್..! ವಿದ್ಯಾರ್ಥಿಗಳ ದತ್ತಾಂಶ ಕಳವು

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿಗೆ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ದತ್ತಾಂಶ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶೈಕ್ಷಣಿಕ ದತ್ತಾಂಶವನ್ನು ಕದ್ದಿರುವ ಆತಂಕಕಾರಿ ಸಂಗತಿ ಬಯಲಾಗಿದ್ದು, ವೃತ್ತಿಪರ ಕೋರ್ಸ್‌ಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೆಇಎ ವೆಬ್ ಸೈಟ್ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿಗೆ ದತ್ತಾಂಶ ಮಾರಾಟ ಮಾಡಲಾಗಿದೆ.

ಸೈಬರ್ ಕ್ರೈಂ ವಂಚಕರಿಂದ ಸಾವಿರಾರು ವಿದ್ಯಾರ್ಥಿಗಳ ವೈಯುಕ್ತಿಕ ವಿವರ ಕಳವಾಗಿದೆ ಎಂದು ಕೆಇಎ ಆಡಳಿತಾಧಿಕಾರಿ ಶಿಲ್ಪಾ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ. ಲಿಡ್‌ಟ್ಯಾಪ್ ಮಿಡಿಯಾ ಆ್ಯಂಡ್ ಮಾರ್ಕೇಟಿಂಗ್ ಹೆಸರಿನ ಸಂಸ್ಥೆಯಿಂದ ಈ ಕೃತ್ಯ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಿಲ್ಪಾ ಒತ್ತಾಯಿಸಿದ್ದಾರೆ. ಕರ್ನಾಟಕ ಸೇರಿದಂತೆ ತೆಲಂಗಾಣ, ಒಡಿಶಾ ಇತರೆ ರಾಜ್ಯಗಳ ವಿದ್ಯಾರ್ಥಿಗಳ ದತ್ತಾಂಶವೆಲ್ಲ ಜಾಲತಾಣದಲ್ಲಿ ಕಳವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.