ಕರ್ನಾಟಕ ನಕಲಿ ಔಷಧ ಜಾಲಕ್ಕಿತ್ತು ವಿದೇಶಿ ನಂಟು! ಕಿಂಗ್​ಪಿನ್ ಪ್ರಶಾಂತ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ

ನಕಲಿ ಔಷಧಿ ಜಾಲದ ಕಿಂಗ್‌ಪಿನ್ ಪ್ರಶಾಂತ್‌ನ ಬಂಧನದಿಂದ ಎಸ್‌ಐಟಿ ತನಿಖೆ ಚುರುಕುಗೊಂಡಿದೆ. ಆತನ ವಿಚಾರಣೆಯಲ್ಲಿ ಅಜರ್‌ಬೈಜಾನ್ ಮತ್ತು ಟರ್ಕಿ ದೇಶಗಳೊಂದಿಗಿನ ಸಂಪರ್ಕ, ನಕಲಿ ಔಷಧಿಯ ಪ್ಯಾಕಿಂಗ್ ಸಾಮಗ್ರಿಗಳ ಸ್ಮಗ್ಲಿಂಗ್ ಯತ್ನದ ಕುರಿತು ಸ್ಫೋಟಕ ಸಂಗತಿಗಳು ಬಯಲಾಗಿವೆ. ಎಸ್‌ಐಟಿ ಈಗ ಮತ್ತೊಬ್ಬ ಆರೋಪಿ ವೀರೇಶ್‌ನೊಂದಿಗೆ ಪ್ರಶಾಂತ್‌ನನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸಿದೆ.

ಕರ್ನಾಟಕ ನಕಲಿ ಔಷಧ ಜಾಲಕ್ಕಿತ್ತು ವಿದೇಶಿ ನಂಟು! ಕಿಂಗ್​ಪಿನ್ ಪ್ರಶಾಂತ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ
ಕರ್ನಾಟಕ ನಕಲಿ ಔಷಧ ಜಾಲಕ್ಕಿತ್ತು ವಿದೇಶಿ ನಂಟು!
Image Credit source: tv9
Edited By:

Updated on: Sep 29, 2026 | 11:13 AM

ಬೆಂಗಳೂರು, ಸೆಪ್ಟೆಂಬರ್ 29: ನಕಲಿ ಔಷಧಿ ಜಾಲಕ್ಕೆ ಸಂಬಂಧಿಸಿದಂತೆ ಕಿಂಗ್​ಪಿನ್ ಪ್ರಶಾಂತ್ ರಂಜನ್​ ಬಾಬು ಬಂಧನದ ಬೆನ್ನಲ್ಲೇ ಎಸ್‌ಐಟಿ ತನಿಖೆ ಚುರುಕುಗೊಂಡಿದೆ. ಪ್ರಶಾಂತ್ ಬಂಧನದ ನಂತರ ಹಲವು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಶಾಂತ್‌ನ ವಿಚಾರಣೆಯು ಈ ಜಾಲವು ಕೇವಲ ದೇಶೀಯವಾಗಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಸಂಪರ್ಕವನ್ನೂ ಹೊಂದಿರುವುದನ್ನು ಬಯಲು ಮಾಡಿದೆ. ಕಿಂಗ್​ಪಿನ್ ಪ್ರಶಾಂತ್ ಭಾರತಕ್ಕೆ ಬಂದ ಕೂಡಲೇ ಸೋಮವಾರ ಬೆಳಗ್ಗೆ ಎಸ್‌ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆಯ ಸಂದರ್ಭದಲ್ಲಿ, ನಕಲಿ ಔಷಧಿ ಜಾಲದ ಸಂಪರ್ಕವು ಅಜರ್‌ಬೈಜಾನ್ ಮತ್ತು ಟರ್ಕಿ ದೇಶಗಳವರೆಗೆ ವಿಸ್ತರಿಸಿದೆ ಎಂಬ ಆಘಾತಕಾರಿ ವಿಚಾರ ತಿಳಿದುಬಂದಿದೆ. ಪ್ರಶಾಂತ್ ಟರ್ಕಿ ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ.

ನಕಲಿ ಔಷಧ ಪ್ಯಾಕಿಂಗ್​ಗೆ ಕಚ್ಚಾ ವಸ್ತು ವಿದೇಶದಿಂದ ಕಳ್ಳಸಾಗಣೆಗೆ ಯತ್ನ

ನಕಲಿ ಔಷಧಿಗಳನ್ನು ತಯಾರಿಸಲು ಅಗತ್ಯವಾದ ಪ್ಯಾಕಿಂಗ್ ಸಾಮಗ್ರಿಗಳಾದ ಬಾಟಲಿಗಳು, ಸ್ಟಿಕ್ಕರ್‌ಗಳು ಮತ್ತು ಪ್ರಿಂಟಿಂಗ್ ಸಾಮಗ್ರಿಗಳನ್ನು ವಿದೇಶದಿಂದ ಕಳ್ಳಸಾಗಣೆ ಮಾಡಲು ಈ ಜಾಲ ಪ್ರಯತ್ನಿಸುತ್ತಿತ್ತು. ಅಜರ್‌ಬೈಜಾನ್ ಮೂಲಕ ಈ ಸಾಮಗ್ರಿಗಳನ್ನು ಭಾರತಕ್ಕೆ ತರಲು ಸಂಚು ರೂಪಿಸಲಾಗಿತ್ತು. ವಿದೇಶದಿಂದಲೇ ನಕಲಿ ಔಷಧಿ ತಯಾರಿಕೆಗೆ ಅಗತ್ಯವಾದ ಕಚ್ಚಾ ಸಾಮಗ್ರಿಗಳು ಮತ್ತು ಪ್ಯಾಕಿಂಗ್ ವಸ್ತುಗಳನ್ನು ಪೂರೈಸಲಾಗುತ್ತಿತ್ತು ಎಂಬುದು ಈಗ ಸ್ಪಷ್ಟವಾಗಿದೆ.

ಇದುವರೆಗೆ ತಯಾರಿಸಲಾದ ನಕಲಿ ಔಷಧಿಗಳು ಯಾವುವು, ಅವುಗಳನ್ನು ಎಲ್ಲಿಗೆ ಕಳುಹಿಸಿಕೊಡಲಾಗಿದೆ ಮತ್ತು ದೇಶದ ಹೊರಗೂ ನಕಲಿ ಔಷಧಿಗಳನ್ನು ರಫ್ತು ಮಾಡಲಾಗಿದೆಯೇ ಎಂಬುದರ ಕುರಿತು ಎಸ್‌ಐಟಿ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ವಿದೇಶಿ ಸಂಪರ್ಕದ ಎಲ್ಲಾ ಆಯಾಮಗಳನ್ನು ಪರೀಕ್ಷಿಸಲಾಗುತ್ತಿದೆ.

ವಿದೇಶಿ ಸಂಪರ್ಕದ ಎಲ್ಲ ಆಯಾಮಗಳ ಬಗ್ಗೆ ತನಿಖೆ
Fake Medicine Racket: Another Network Exposed During SIT Probe, Kingpin Reveals Foreign Links

ಪ್ರಶಾಂತ್‌ನ ವಿಚಾರಣೆಯಲ್ಲಿ ಈಗಾಗಲೇ ಹಲವು ಮಾಹಿತಿ ಹೊರಬಂದಿದ್ದರೂ, ಮತ್ತಷ್ಟು ವಿಚಾರಗಳನ್ನು ಬಯಲಿಗೆಳೆಯಲು ಎಸ್‌ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕಾಗಿ, ಮತ್ತೊಬ್ಬ ಆರೋಪಿ ವೀರೇಶ್‌ನೊಂದಿಗೆ ಪ್ರಶಾಂತ್‌ನನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಇಬ್ಬರ ಹೇಳಿಕೆಗಳನ್ನು ತಾಳೆ ಮಾಡಿ ನೋಡುವ ಮೂಲಕ ಜಾಲದ ಸಂಪೂರ್ಣ ಸ್ವರೂಪ, ಅವರ ಕಾರ್ಯತಂತ್ರ ಮತ್ತು ಪಾಲುದಾರರನ್ನು ಗುರುತಿಸಲು ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ. ಇಬ್ಬರ ಹೇಳಿಕೆಗಳು ತಾಳೆ ಆಗುತ್ತವೆಯೇ ಅಥವಾ ಮತ್ತಷ್ಟು ಸ್ಫೋಟಕ ವಿಚಾರಗಳು ಹೊರಬರುತ್ತವೆಯೇ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ನಕಲಿ ಔಷಧ ದಂಧೆಯ ಕಿಂಗ್​ಪಿನ್ ಕೊನೆಗೂ ಸೆರೆ: ಅಜರ್ ಬೈಜಾನ್​ನಿಂದ ವಾಪಸಾದ ವೇಳೆ ಏರ್​ಪೋರ್ಟ್​ನಲ್ಲಿ ಪ್ರಶಾಂತ್ ರಂಜನ್​ ಬಾಬು ಬಂಧನ

ಈ ನಕಲಿ ಔಷಧಿ ಜಾಲದವರು ಬೇರೆ ಬೇರೆ ರಾಜ್ಯಗಳಿಂದಲೂ ಔಷಧಿಗಳನ್ನು ತರಿಸಿಕೊಂಡು, ತಮ್ಮದೇ ಲೇಬಲ್ ಹಾಕಿ ಕಂಪನಿಗಳಿಗೆ ಪೂರೈಸುತ್ತಿದ್ದರು ಎಂಬುದು ರೇಡ್‌ಗಳ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಆದರೆ, ಇದು ಕೇವಲ ರಾಜ್ಯಗಳ ನಡುವಿನ ಸಂಪರ್ಕಕ್ಕೆ ಸೀಮಿತವಾಗಿರದೆ, ವಿದೇಶಿ ಲಿಂಕ್‌ಗಳನ್ನು ಹೊಂದಿರುವುದು ಈ ತನಿಖೆಯ ಪ್ರಮುಖ ತಿರುವಾಗಿದೆ. ಅಜರ್‌ಬೈಜಾನ್ ಮಾರ್ಗದ ಮೂಲಕ ಸಾಮಗ್ರಿಗಳನ್ನು ಭಾರತಕ್ಕೆ ತರುವ ಸಂಚು ರೂಪಿಸಲಾಗಿತ್ತು ಎಂದು ಪ್ರಶಾಂತ್ ವಿಚಾರಣೆಯಿಂದ ಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Loading...
Unable to load recommendations.
Follow Us