AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

34 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಕೆಲ ಬದಲಾವಣೆಯೊಂದಿಗೆ ಸರ್ಕಾರ ಹೊರಡಿಸಿದ ಅಧಿಕೃತ ಪಟ್ಟಿ ಇಲ್ಲಿದೆ

ಕರ್ನಾಟದ 34 ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿಗಮ, ಮಂಡಳಿಗಳು (Corporation, Boards) ಅಧ್ಯಕ್ಷ ಸ್ಥಾನ ಪಟ್ಟಿ ಬಿಡುಗಡೆ ಬಳಿಕ ಗೊಂದಲ ಏರ್ಪಟ್ಟಿತ್ತು. ಎಐಸಿಸಿ ರವಾನಿಸಿದ್ದ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೊಂಚ ಮಾರ್ಪಾಡು ಮಾಡಿ ಅಧಿಕೃತ ಮುದ್ರೆ ಹಾಕಿದ್ದಾರೆ. ಹಾಗಾದ್ರೆ, ಯಾರಿಗೆ ಯಾವ ಹುದ್ದೆ ಎನ್ನುವ ವಿವರ ಇಲ್ಲಿದೆ.

34 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಕೆಲ ಬದಲಾವಣೆಯೊಂದಿಗೆ ಸರ್ಕಾರ ಹೊರಡಿಸಿದ ಅಧಿಕೃತ ಪಟ್ಟಿ ಇಲ್ಲಿದೆ
ವಿಧಾನಸೌಧ
ರಮೇಶ್ ಬಿ. ಜವಳಗೇರಾ
|

Updated on: Sep 26, 2025 | 10:09 PM

Share

ಬೆಂಗಳೂರು, (ಸೆಪ್ಟೆಂಬರ್ 26): ಕರ್ನಾಟದ 34 ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ (boards and corporations) ನೂತನ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ (Karnataka Government )ಆದೇಶ ಹೊರಡಿಸಿದೆ. ನೂತನ ಅಧ್ಯಕ್ಷರನ್ನು ನೇಮಕಗೊಂಡ ದಿನಾಂಕದಿಂದ ಮುಂದಿನ ಎರಡು ವರ್ಷಗಳ ಅವಧಿಯವರೆಗೆ ನೇಮಿಸಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಸ್ಥಾನದ ಗೊಂದಲ ಬಗೆಹರಿದಿದ್ದು, ರಾಜೂ ಕಾಗೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಇನ್ನು ಹೈಕಮಾಂಡ್ ಕಳುಹಿಸಿದ್ದ ಪಟ್ಟಿಯಲ್ಲಿ ಇಲ್ಲದಿದ್ದರೂ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯನವರು (Siddaramaiah) ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಅವರನ್ನ ಬಿಎಂಟಿಸಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಎಐಸಿಸಿಯಿಂದ ಒಟ್ಟು 39 ಹೆಸರಿನ ಬದಲಿಗೆ ಸಿಎಂ ಸಿದ್ದರಾಮಯ್ಯ ಅವರು 34 ಮಂದಿಗೆ ಅಧ್ಯಕ್ಷರ ಪಟ್ಟಿಗೆ ಅಂಕಿತ ಹಾಕಿದ್ದಾರೆ. ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಇಲಾಖೆಗಳಿಗೆ ಪಟ್ಟಿ ರವಾನೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಸ್ಥಾನದ ಗೊಂದಲ ವಿಚಾರಕ್ಕೆ ಸಂಬಂಧ ಪಟ್ಟಂತೆ ರಾಜೂ ಕಾಗೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಇದರೊಂದಿಗೆ ಕಾಗೆ ಹಾಗೂ ನಿಕೇತ್ ರಾಜ್ ಮೌರ್ಯ ಕೊನೆ ಕ್ಷಣದಲ್ಲಿ ಜಾಕ್​​ಪಾಟ್ ಹೊಡೆದಿದೆ.

ಇದನ್ನೂ ಓದಿ: ನನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿಗೆ ಕೊನೆಗೂ ನೇಮಕ: ಜೈಲಿನಲ್ಲಿರುವ ಶಾಸಕನ ಪತ್ನಿಗೂ ಜಾಕ್‌ಪಾಟ್

ಇನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರಾಗಿ ಅರುಣ್ ಕುಮಾರ್ ಪಾಟೀಲ್ ನೇಮಕವಾಗಿದ್ದಾರೆ. ಆದರೆ ಇದು ಎಐಸಿಸಿ ಪಟ್ಟಿಯಲ್ಲಿ ನೀಲಕಂಠ ಮುಳಗೆಗೆ ಹಂಚಿಕೆಯಾಗಿತ್ತು. ಈಗ ನೀಲಕಂಠ ಬದಲು ಅರುಣ್‌ ಕುಮಾರ್ ಪಾಟೀಲ್​ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೀಡಲಾಗಿದೆ.

ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ಅಧಿಕೃತ ಪಟ್ಟಿ

  1. ಪಿ.ರಘು – ಸಫಾಯಿ ಕರ್ಮಚಾರಿ ಆಯೋಗ.
  2. ಶಿವಲೀಲಾ ವಿನಯ್‌ ಕುಲಕರ್ಣಿ – ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
  3. ವಡ್ನಾಳ್‌ ಜಗದೀಶ್‌ – ಜೀವವೈವಿಧ್ಯ ಮಂಡಳಿ
  4. ಮುರಳಿ ಅಶೋಕ್‌ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
  5. ಡಾ.ಮೂರ್ತಿ – ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ
  6. ಕರ್ನಲ್ ಮಲ್ಲಿಕಾರ್ಜುನ್‌ – ಮಾಜಿ ಸೈನಿಕರ ಕಲ್ಯಾಣ ಮಂಡಳಿ
  7. ಡಾ.ಬಿ.ಸಿ.ಮುದ್ದುಗಂಗಾಧರ್‌ – ಮಾವು ಅಭಿವೃದ್ಧಿ ನಿಗಮ
  8.  ಶಾಲೆಟ್‌ ಪಿಂಟೋ – ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
  9.  ಜಿ.ಎಚ್. ಮರಿಯೋಜಿ ರಾವ್‌ – ಮರಾಠ ಅಭಿವೃದ್ಧಿ ನಿಗಮ
  10. ಎಂ.ಎ.ಗಫೂರ್‌ – ಕರಾವಳಿ ಅಭಿವೃದ್ಧಿ ಪ್ರಾಧಿಕಾರ
  11. ಕೆ. ಹರೀಶ್‌ ಕುಮಾರ್‌ – ಮೆಸ್ಕಾಂ
  12.  ಎನ್‌. ಸಂಪಂಗಿ – ಕರ್ನಾಟಕ ರಾಜ್ಯ ಉಗ್ರಾಣ ನಿಗಮ
  13. ವೈ. ಸಯೀದ್‌ ಅಹ್ಮದ್‌ -ದೇವರಾಜ ಅರಸು ಟ್ರಕ್‌ ಟರ್ಮಿನಲ್‌
  14.  ಮಹೇಶ್‌ ಎಂ. – ಕಾಡುಗೊಲ್ಲಅಭಿವೃದ್ಧಿ ನಿಗಮ
  15.  ಎಚ್‌.ಬಿ. ಮಂಜಪ್ಪ – ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ
  16.  ಭರಮಣ್ಣ ಉಪ್ಪಾರ – ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
  17. ಅಗಾ ಸುಲ್ತಾನ್‌ – ಕೇಂದ್ರ ಪರಿಹಾರ ಸಮಿತಿ
  18. ಎಸ್‌.ಜಿ. ನಂಜಯ್ಯನಮಠ – ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
  19.  ಅರುಣ್‌ ಕುಮಾರ್‌ ಪಾಟೀಲ್‌-ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
  20.  ಬಾಬು ಹೊನ್ನಾ ನಾಯ್ಕ್‌ – ಕಾಡಾ, ಭೀಮರಾಯನಗುಡಿ, ಕಲಬುರಗಿ
  21.  ಯುವರಾಜ್‌ ಕದಮ್‌ – ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ, ಬೆಳಗಾವಿ
  22.  ಪ್ರವೀಣ್‌ ಕುಮಾರ್‌ ಪಾಟೀಲ್‌- ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ
  23.  ಮಂಜುನಾಥ ಪೂಜಾರಿ – ನಾರಾಯಣ ಗುರು ಅಭಿವೃದ್ಧಿ ನಿಗಮ
  24.  ಎಂ.ಎಸ್‌. ಮುತ್ತುರಾಜ್‌ – ಸವಿತಾ ಸಮಾಜ ಅಭಿವೃದ್ಧಿ ನಿಗಮ
  25.  ನಂಜಪ್ಪ – ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
  26.  ವಿಶ್ವಾಸ್‌ ಕುಮಾರ್‌ ದಾಸ್‌ – ಗಾಣಿಗ ಅಭಿವೃದ್ಧಿ ನಿಗಮ
  27.  ಎಸ್‌. ಗಂಗಾಧರ್‌ – ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್‌
  28.  ಪಟೇಲ್‌ ಶಿವಣ್ಣ -ಹಾಸನ ನಗರಾಭಿವೃದ್ಧಿ ಪ್ರಾಧಿಕಾರ
  29.  ಡಾ. ಶ್ರೀನಿವಾಸನ್‌ ವೇಲು – ಕುಂಬಾರ ಅಭಿವೃದ್ಧಿ ನಿಗಮ
  30. . ಟಿ.ಎಂ. ಶಹೀದ್‌ ತೆಕ್ಕಿಲ್‌ – ರಾಜ್ಯ ಕನಿಷ್ಠ ವೇತನ ಮಂಡಳಿ
  31.  ಚೇತನ್‌ ಕೆ. ಗೌಡ – ರಾಜ್ಯ ಜವಳಿ, ಮೂಲ ಸೌಕರ್ಯ ಅಭಿವೃದ್ಧಿ ನಿಮ
  32.  ಲಾವಣ್ಯ ಬಲ್ಲಾಳ್‌ ಜೈನ್‌ -ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆ
  33.  ಎಚ್‌.ಡಿ.ಗಣೇಶ್‌-ಮೈಸೂರು ಪೇಂಟ್ಸ್‌, ವಾರ್ನಿಷ್‌ ಲಿಮಿಟೆಡ್‌
  34.  ನಿಕೇತ್‌ ರಾಜ್‌- ಬಿಎಂಟಿಸಿ.