Sugarcane Farmers ಕಬ್ಬು ಬೆಳೆಗಾರರಿಗೆ ಮತ್ತೊಂದು ಬಂಪರ್ ಗಿಫ್ಟ್: ಪ್ರತಿ ಮೆಟ್ರಿಕ್ ಟನ್‌ಗೆ 100 ರೂ, ನೀಡುವಂತೆ ಸರ್ಕಾರ ಆದೇಶ

Molasses Profit To Farmers ಎಥೆನಾಲ್‌ನಿಂದ ಬರುವ ಲಾಭಾಂಶದಲ್ಲಿ ಕಬ್ಬು ಬೆಳೆಗಾರರಿಗೆ 50 ರೂ. ನೀಡುವಂತೆ ಆದೇಶಿಸಿದ ಬೆನ್ನಲ್ಲೇ ಇದೀಗ ಸರ್ಕಾರ ಆದೇಶ ಮತ್ತೊಂದು ಬಂಪರ್ ಗಿಫ್ಟ್ ನೀಡಿದೆ.

Sugarcane Farmers ಕಬ್ಬು ಬೆಳೆಗಾರರಿಗೆ ಮತ್ತೊಂದು ಬಂಪರ್ ಗಿಫ್ಟ್: ಪ್ರತಿ ಮೆಟ್ರಿಕ್ ಟನ್‌ಗೆ 100 ರೂ, ನೀಡುವಂತೆ ಸರ್ಕಾರ ಆದೇಶ
ಕಬ್ಬು ಬೆಳೆಗಾರರಿಗೆ ಮತ್ತೊಂದು ಬಂಪರ್ ಗಿಫ್ಟ್Image Credit source: Sugarcane
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 29, 2022 | 10:13 PM

ಬೆಂಗಳೂರು: ಎಥೆನಾಲ್‌ನಿಂದ ಬರುವ ಲಾಭಾಂಶದಲ್ಲಿ 50 ರೂ.ಗಳಂತೆ ಒಟ್ಟು ಎಥೆನಾಲ್‌ನಿಂದ 204 ಕೋಟಿ ರೂ. ಪಾವತಿಸಲು ಸರ್ಕಾರ ಆದೇಶಿಸಿತ್ತು. ಇದರ ಬೆನ್ನಲ್ಲೇ ಕಬ್ಬು ಬೆಳೆಗಾರರಿಗೆ (Sugarcane Farmers) ಬೊಮ್ಮಾಯಿ ಸರ್ಕಾರ ಇದೀಗ ಮತ್ತೊಂದು ಬಂಪರ್ ಕೊಡುಗೆ ಘೋಷಿಸಿದ್ದು, ಮೊಲ್ಯಾಸಿಸ್​ನಿಂದ ಬರುವ ಲಾಭಾಂಶದಲ್ಲಿ ರೈತರಿಗೆ ಪ್ರತಿ ಮೆಟ್ರಿಕ್ ಟನ್‌ಗೆ 100 ರೂಪಾಯಿ ಹೆಚ್ಚು ಪಾವತಿಸಲು ಆದೇಶಿಸಿದೆ. ಈ ಮೂಲಕ ಕಬ್ಬು ಬೆಳೆಗಾರರಿಗೆ ಸರ್ಕಾರ ಹೊಸ ವರ್ಷದ ಗಿಫ್ಟ್ ನೀಡಿದೆ.

ಇದನ್ನೂ ಓದಿ: Sugercane Crop: ಕಬ್ಬು ಬೆಳೆಗಾರರಿಗೆ ಬಂಪರ್​ ಗಿಫ್ಟ್​​​: ರಾಜ್ಯ ಸರ್ಕಾರಿಂದ 204.47 ಕೋಟಿ ರೂ ಬಿಡುಗಡೆ

ಹೌದು.. ಮೊಲ್ಯಾಸಿಸ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶವನ್ನು ರೈತರಿಗೆ ವರ್ಗಾಯಿಸಲು ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ಇಂದು(ಡಿಸೆಂಬರ್ 29) ಆದೇಶ ಹೊರಡಿಸಿದೆ. ಕಬ್ಬಿನ ಉಪ ಉತ್ಪನ್ನಗಳಾದ ಎಥೆನಾಲ್ ಮತ್ತು ಮೊಲ್ಯಾಸಿಸ್ ಮೂಲಕ ಒಟ್ಟಾರೆ ಈ ಸಾಲಿನಲ್ಲಿ ಎಫ್‌ಆರ್‌ಪಿ ದರ ಹೊರತುಪಡಿಸಿ, ಕಬ್ಬು ಬೆಳೆಗಾರರಿಗೆ ಒಟ್ಟು 804 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಈವರೆಗೆ ಆದೇಶಿಸಲಾಗಿದೆ.

ಎಫ್‌ಆರ್‌ಪಿ ದರ ಹೊರತುಪಡಿಸಿ, ಪ್ರತಿ ಮೆಟ್ರಿಕ್ ಟನ್‌ಗೆ 100 ರೂಪಾಯಿ ಹೆಚ್ಚು ಪಾವತಿಸಲು ಕಾರ್ಖಾನೆಗಳಿಗೆ ಆದೇಶಿಸಲಾಗಿದೆ. ಈ ಮೂಲಕ ರಾಜ್ಯದ ಕಬ್ಬು ಬೆಳೆಗಾರರಿಗೆ 622 ಕೋಟಿ ರೂ. ಹೆಚ್ಚುವರಿಯಾಗಿ ಸಂದಾಯವಾಗಲಿದೆ.

ಎಥೆನಾಲ್‌ ಲಾಭಾಂಶ ರೈತರಿಗೆ

ಈ ಹಿಂದೆ ರಾಜ್ಯ ಸರ್ಕಾರ ಎಥೆನಾಲ್‌ನಿಂದ ಬರುವ ಲಾಭಾಂಶದಲ್ಲಿ 50 ರೂ.ಗಳಂತೆ ಒಟ್ಟು ಎಥೆನಾಲ್‌ನಿಂದ 204 ಕೋಟಿ ರೂ. ಪಾವತಿಸಲು ಸರ್ಕಾರ ಆದೇಶಿಸಿತ್ತು. ಕಬ್ಬಿನ ಉಪ ಉತ್ಪನ್ನಗಳಾದ ಎಥೆನಾಲ್ ಮತ್ತು ಮೊಲ್ಯಾಸಿಸ್ ಮೂಲಕ ಒಟ್ಟಾರೆ ಈ ಸಾಲಿನಲ್ಲಿ ಎಫ್‌ಆರ್‌ಪಿ ದರ ಹೊರತುಪಡಿಸಿ, ಕಬ್ಬು ಬೆಳೆಗಾರರಿಗೆ ಒಟ್ಟು 804 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಈವರೆಗೆ ಆದೇಶಿಸಲಾಗಿದೆ.

ಪ್ರತಿಭಟನೆ ಮಾಡಿದ್ದ ರೈತರು

ಕಳೆದ ಮೂರು ವರ್ಷದಿಂದ ಆ ರೈತರು ಪ್ರವಾಹಕ್ಕೆ ಸಿಲುಕಿ ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ‌. ಈ ವರ್ಷ ಇನ್ನೇನು ಸುಧಾರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಅಕಾಲಿಕ ಮಳೆಯಿಂದ ಕೃಷಿ ಹಾನಿಯಾಗಿ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ವಾಣಿಜ್ಯ ಬೆಳೆ ಕಬ್ಬು ಕೈ ಕೊಡುತ್ತಿದೆ. ಕಬ್ಬಿಗೆ ಬಂದಿರುವ ಮುಪ್ಪು ಕಾಯಿಲೆ ಆತಂಕಕ್ಕೆ ದೂಡಿತ್ತು. ಈ ಹಿನ್ನೆಲೆಯಲ್ಲಿ ಕಬ್ಬಿಗೆ ಬೆಂಬಲ ಬೆಲೆ, ಉಪ ಉತ್ಪನ್ನಗಳ ಲಾಭಾಂಶ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಹೋರಾಟ ರೈತರು ಪ್ರತಿಭಟನೆ ಮಾಡಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ