AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತದಿಂದ ಸಾವಿಗೀಡಾಗುವುದನ್ನು ತಡೆಯಲು ಆಪದ್ಭಾಂಧವ ಆಂಬುಲೆನ್ಸ್ ಸೇವೆ

ಬೆಂಗಳೂರು ಸೇರಿದ್ದಂತೆ ಕರ್ನಾಟಕದಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ವಾಹನಗಳ ಸಂಖ್ಯೆ ಜಾಸ್ತಿಯಾದಷ್ಟು ಅಪಘಾತ ಹೆಚ್ಚಾಗಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಿಂದ ಸಾವಿಗೀಡಾಗುವುದನ್ನು ತಪ್ಪಿಸಲು ರಾಜ್ಯದಲ್ಲಿ ಆಪದ್ಬಾಂಧವ ಬರಲಿದ್ದಾನೆ. ಅಷ್ಟಕ್ಕೂ ಯಾರು ಈ ಆಪದ್ಬಾಂಧವ ಈ ಸ್ಟೋರಿ ಓದಿ.

ಅಪಘಾತದಿಂದ ಸಾವಿಗೀಡಾಗುವುದನ್ನು ತಡೆಯಲು ಆಪದ್ಭಾಂಧವ ಆಂಬುಲೆನ್ಸ್ ಸೇವೆ
ಆಪದ್ಭಾಂಧವ ಆಂಬುಲೆನ್ಸ್
Vinay Kashappanavar
| Edited By: |

Updated on:Sep 23, 2024 | 8:21 AM

Share

ಬೆಂಗಳೂರು, ಸೆಪ್ಟೆಂಬರ್​ 23: ಅಪಘಾತದಿಂದ (Accident) ಸಾವಿಗೀಡಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ (Karnataka Government) ಆಪದ್ಭಾಂಧವ ಆಂಬುಲೆನ್ಸ್ (Apathbandava Ambulance)​​ ಆರಂಭಿಸಲಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಶೀಘ್ರದಲ್ಲಿ ಚಿಕಿತ್ಸೆ ಸಿಗದೆ ಅನೇಕರು ಸಾವಿಗೀಡಾಗಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ರಾಜ್ಯಾದ್ಯಂತ 65 ಸ್ಥಳಗಳಲ್ಲಿ ಆಪದ್ಭಾಂಧವ ಆಂಬುಲೆನ್ಸ್​​ ಇರುತ್ತದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತ ಸಂಭವಿಸುವ 65 ಸ್ಥಳಗಳನ್ನು ಪೊಲೀಸ್​ ಇಲಾಖೆ ಗುರುತಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ತುಮಕೂರು ಹೆದ್ದಾರಿ ಸೇರಿದಂತೆ ಹೆಚ್ಚು ಅಪಘಾತವಾಗುವ ಸ್ಥಳದಲ್ಲಿ ಆಪದ್ಭಾಂಧವ ಆಂಬುಲೆನ್ಸ್ ಸಂಚರಿಸಲಿದೆ.

ಇದನ್ನೂ ಓದಿ: ಅಂಗಾಂಗ ರವಾನೆ ವೇಳೆ ಆಂಬುಲೆನ್ಸ್ ಅಪಘಾತ; ಸ್ವಂತ ಗಾಯ ಲೆಕ್ಕಿಸದೆ ರೋಗಿಗೆ ಶ್ವಾಸಕೋಶ ಕಸಿ ಶಸ್ತ್ರಕ್ರಿಯೆ ನಡೆಸಿದ ವೈದ್ಯ

ಈ 65 ಸ್ಥಳಗಳಲ್ಲಿ ಆಪದ್ಭಾಂಧವ ಆಂಬುಲೆನ್ಸ್​ನ್ನು ಆರೋಗ್ಯ ಇಲಾಖೆ ನಿಯೋಜನೆ ಮಾಡುತ್ತದೆ. ಆಪದ್ಭಾಂಧವ ಆಂಬುಲೆನ್ಸ್​​ನಲ್ಲಿ ಚಿಕಿತ್ಸೆ ನೀಡಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಆಪದ್ಭಾಂಧವ ಆಂಬುಲೆನ್ಸ್​​ ಸ್ಥಳಕ್ಕೆ ತೆರಳುತ್ತದೆ. ಅಲ್ಲಿ ಗಾಯಾಳುಗೆ ಬೇಕಾದ ತುರ್ತು ಚಿಕಿತ್ಸೆ ನೀಡಿ, ಸನಿಹದ ಆಸ್ಪತ್ರೆಗೆ ಕೊಂಡೊಯ್ಯುತ್ತದೆ. ಈ ಮೂಲಕ ಅಪಘಾತಕ್ಕೊಳಗಾದವರಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡುವುದು ಇದರ ಉದ್ದೇಶವಾಗಿದೆ. ಅಪಘಾತದಿಂದ ಜೀವ ಕಳೆದುಕೊಳ್ಳವರ ಪಾಲಿಗೆ ಈ ಸೇವೆ ಆಪದ್ಬಾಂಧವವಾಗಲಿದೆ.

ಬೆಂಗಳೂರು ರಸ್ತೆ ಅಪಘಾತಗಳ ಸಂಖ್ಯೆ

2023ರಲ್ಲಿ ಸಂಭವಿಸಿದ 882 ಮಾರಣಾಂತಿಕ ಅಪಘಾತಗಳಲ್ಲಿ 910 ಜನರು ಮೃತಪಟ್ಟಿದ್ದಾರೆ. 4191 ಜನರು ಗಾಯಗೊಂಡಿದ್ದಾರೆ. 2024ರಲ್ಲಿ ಮೇ ಅಂತ್ಯದವರೆಗೆ ಸಂಭವಿಸಿದ 368 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. 376 ಜನರು ಮೃತಪಟ್ಟಿದ್ದಾರೆ. 2040 ಜನರು ಗಾಯಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:32 am, Mon, 23 September 24