
ಬೆಂಗಳೂರು, (ನವೆಂಬರ್.28): 1500 ರೂ.ವೇತನ ನೀಡುವಂತೆ ಕಳೆದ 12 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಮನವೊಲಿಸುವಲ್ಲಿ ಸಿಎಂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಗೃಹ ಕಚೇರಿಯಲ್ಲಿ ನಡೆದ ಆಶಾ ಕಾರ್ಯಕರ್ತೆಯರೊಂದಿಗಿನ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು 2 ಸಾವಿರ ರೂಪಾಯಿ ಹೆಚ್ಚಳ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದ್ರೆ, ಇದಕ್ಕೆ ಆರಂಭದಲ್ಲಿ ಆಶಾ ಕಾರ್ಯಕರ್ತೆಯರು ಒಪ್ಪಲಿಲ್ಲವಾದರೂ, ಸಿಎಂ ಎಲ್ಲವನ್ನೂ ತಿಳಿ ಹೇಳಿ ಮನವೊಲಿಸಿದ್ದು, ಅಂತಿಮವಾಗಿ ಆಶಾ ಕಾರ್ಯಕರ್ತೆಯರು 2 ಸಾವಿರ ರೂಪಾಯಿಗೆ ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ ಆಶಾ ಕಾರ್ಯಕರ್ತೆಯರ ಜೊತೆಗಿನ ಸಿಎಂ ಸಂಧಾನ ಸಕ್ಸಸ್ ಆಗಿದೆ.
ಬೆಳಗ್ಗೆ ಆರೋಗ್ಯ ಸಚಿವ ಯುಟಿ ಖಾದರ್ ಸಹ ಆಶಾ ಕಾರ್ಯಕರ್ತೆಯರ ಜೊತೆ ಸಭೆ ಮಾಡಿದ್ದು, 2000 ರೂಪಾಯಿ ಹೆಚ್ಚಳ ಮಾಡುತ್ತೇವೆ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದ್ದರು. ಆದ್ರೆ, ಆಶಾ ಕಾರ್ಯಕರ್ತೆಯರು ಒಪ್ಪಿರಲಿಲ್ಲ. ಈಗ ಅಂತಿಮವಾಗಿ ಸಿಎಂ ಡಿಕೆ ಶಿವಕುಮಾರ್ ಮಾತಿಗೆ ಆಶಾ ಕಾರ್ಯಕರ್ತೆಯರು 2000 ರೂಪಾಯಿಗೆ ಒಪ್ಪಿಕೊಂಡಿದ್ದಾರೆ.
ಸಂಧಾನ ಸಭೆ ಯಶಸ್ವಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಗೌರವಧನ ಹೆಚ್ಚಳಕ್ಕೆ ಆಶಾ ಕಾರ್ಯಕರ್ತೆಯರು ಹೋರಾಟ ಮಾಡಿದ್ರು. ಅವರಿಗೆ ಎರಡು ಸಾವಿರ ರೂ. ಹೆಚ್ಚಳ ಮಾಡಿದ್ದೇವೆ. ಜೊತೆಗೆ ಅವರ ಕೆಲಸಕ್ಕೆ ಅನುಗುಣವಾಗಿ ಪ್ರೋತ್ಸಾಹಧನ ಸಿಗಲಿದೆ. ಆಶಾ ಕಾರ್ಯಕರ್ತೆಯರಿಗೆ ಜನವರಿಗೆ 1ರಿಂದ ಹೆಚ್ಚುವರಿ 2,000 ರೂ. ಸಿಗಲಿದ್ದು, ಇನ್ನುಳಿದ ಹೆಚ್ಚುವರಿ 2,000 ರೂ. ಬಗ್ಗೆ ಮುಂದಿನ ಬಜೆಟ್ನಲ್ಲಿ ಘೋಷಿಸುತ್ತೇವೆ ಎಂದು ಭರವಸೆ ನೀಡಿದರು.
ಗೌರವಧನ ಹೆಚ್ಚಳಕ್ಕೆ ಆಶಾ ಕಾರ್ಯಕರ್ತೆಯರು ಹೋರಾಟ ಮಾಡಿದ್ರು. ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಎರಡು ಸಾವಿರ ರೂ. ಕೊಡ್ತಿದೆ. ರಾಜ್ಯ ಸರ್ಕಾರ 5 ಸಾವಿರ ರೂಪಾಯಿಯನ್ನ ನೀಡುತ್ತಿದೆ. ಕಳೆದ 2-3 ವರ್ಷದಿಂದ ಗೌರವಧನ ಹೆಚ್ಚಳ ಮಾಡಿಲ್ಲ ಅಂತ ಹೇಳುತ್ತಿದ್ರು. ಸಿದ್ದರಾಮಯ್ಯನವರು ಗೌರವಧನ ಹೆಚ್ಚಳದ ಬಗ್ಗೆ ಮಾತು ಕೊಟ್ಟಿದ್ರು ಅಂದ್ರು. ಕೊಟ್ಟ ಮಾತು ನಾವು ಉಳಿಸಿಕೊಳ್ಳಬೇಕಿದ್ದು, ಇಂದು ಸುದೀರ್ಘವಾದ ಚರ್ಚೆ ನಡೆದಿದೆ. ನನ್ನ ಮನಸ್ಸು ಸೆಳೆದಿದ್ದಾರೆ. ಆಶಾ ಕಾರ್ಯಕರ್ತೆಯರು ನಮ್ಮ ಆಸ್ತಿ ಎಂದರು.
Published On - 5:47 pm, Sat, 28 November 26