ಕೃಷ್ಣಾ, ಘಟಪ್ರಭಾ ಹಿನ್ನೀರಿನಲ್ಲಿ ತಲೆ ಎತ್ತಲಿದೆ ಸುಂದರ ಪಕ್ಷಿಧಾಮ; ಹಲವು ವರ್ಷಗಳ ಬೇಡಿಕೆಗೆ ಸರ್ಕಾರದಿಂದ ಅನುಮೋದನೆ

ಕೃಷ್ಣಾ, ಘಟಪ್ರಭಾ ಹಿನ್ನೀರಿನಲ್ಲಿ ತಲೆ ಎತ್ತಲಿದೆ ಸುಂದರ ಪಕ್ಷಿಧಾಮ; ಹಲವು ವರ್ಷಗಳ ಬೇಡಿಕೆಗೆ ಸರ್ಕಾರದಿಂದ ಅನುಮೋದನೆ
ಕೃಷ್ಣಾ, ಘಟಪ್ರಭಾ ಹಿನ್ನೀರಿಲ್ಲಿ ಪಕ್ಷಿಗಳ ಕಲರವ

ಆಲಮಟ್ಟಿ ಹಿನ್ನೀರು ಸುಂದರ ರಮಣೀಯ ಸ್ಥಳಗಳಲ್ಲಿ ಒಂದು. ಚಳಿಗಾಲದಲ್ಲಿ ಈ ಹಿನ್ನೀರಿನ ಸುತ್ತಮುತ್ತ ಸಂಚರಿಸುವುದೇ ಒಂದು ಚೆಂದ. ಯಾಕೆಂದರೆ ಚಳಿಗಾಲದ ಸಮಯದಲ್ಲಿ ಆಲಮಟ್ಟಿ ಹಿನ್ನೀರಿನಲ್ಲಿ ಗಿಜುಗುಡುವ ಹಕ್ಕಿಗಳ‌ ಕಲರವೇ ಇದಕ್ಕೆ ಕಾರಣ. ದೇಶ ವಿದೇಶಗಳಿಂದ ನೂರಾರು ಪ್ರಬೇಧಗಳ ಹಕ್ಕಿಗಳು ಈ ಆಲಮಟ್ಟಿ ಹಿನ್ನೀರಿಗೆ ವಾಸಕ್ಕಾಗಿ ಬರುತ್ತವೆ‌.

sandhya thejappa

| Edited By: Ayesha Banu

Apr 16, 2021 | 7:33 AM


ಬಾಗಲಕೋಟೆ: ಚಳಿಗಾಲ ಬಂದರೆ ಸಾಕು, ದೇಶ ವಿದೇಶದಿಂದ ಸಾವಿರಾರು ಪಕ್ಷಿಗಳು ಜಿಲ್ಲೆಗೆ ವಲಸೆ ಬರುತ್ತವೆ‌. ಸಂತಾನೋತ್ಪತ್ತಿ ಹಾಗೂ ಆಹಾರ ಅರಸಿ ಬರುವ ಆ ಹಕ್ಕಿಗಳ ಕಲರವ ನೋಡೋದೆ ಕಣ್ಣಿಗೆ ಹಬ್ಬ. ಆಕಾಶದಲ್ಲಿ ಹಾರಾಡುವ, ನೀರಲ್ಲಿ ನಡೆಯುವ ಆ ಸುಂದರ ಹಕ್ಕಿಗಳ ಬಳಕುವ ವೈಯ್ಯಾರ ನೋಡಿದರೆ ನೋಡುತ್ತಲೇ ಇರಬೇಕು. ಆದರೆ ಇಷ್ಟೊಂದು ಹಕ್ಕಿಗಳ ಸೌಂದರ್ಯ ಇರುವ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಪಕ್ಷಿಧಾಮ ಬೇಕು ಎಂಬ ಬೇಡಿಕೆ ಹಲವು ದಶಕಗಳಿಂದಲೇ ಇತ್ತು. ಸದ್ಯ ಈ ಬೇಡಿಕೆಗೆ ಸರ್ಕಾರ ಅಸ್ತು ಅಂದಿದ್ದು, ಜಿಲ್ಲೆಯ ಜನರ ಬೇಡಿಕೆಗೆ ಕೊನೆಗೂ ಹಸಿರು ನಿಶಾನೆ ಸಿಕ್ಕಂತಾಗಿದೆ.

ಆಲಮಟ್ಟಿ ಹಿನ್ನೀರು ಸುಂದರ ರಮಣೀಯ ಸ್ಥಳಗಳಲ್ಲಿ ಒಂದು. ಚಳಿಗಾಲದಲ್ಲಿ ಈ ಹಿನ್ನೀರಿನ ಸುತ್ತಮುತ್ತ ಸಂಚರಿಸುವುದೇ ಒಂದು ಚೆಂದ. ಯಾಕೆಂದರೆ ಚಳಿಗಾಲದ ಸಮಯದಲ್ಲಿ ಆಲಮಟ್ಟಿ ಹಿನ್ನೀರಿನಲ್ಲಿ ಗಿಜುಗುಡುವ ಹಕ್ಕಿಗಳ‌ ಕಲರವವೇ ಇದಕ್ಕೆ ಕಾರಣ. ದೇಶ ವಿದೇಶಗಳಿಂದ ನೂರಾರು ಪ್ರಭೇದಗಳ ಹಕ್ಕಿಗಳು ಈ ಆಲಮಟ್ಟಿ ಹಿನ್ನೀರಿಗೆ ವಾಸಕ್ಕಾಗಿ ಬರುತ್ತವೆ‌. ಪ್ರಪಂಚದಲ್ಲೇ ಅತೀ ಹೆಚ್ಚು ವಲಸೆ ಹಕ್ಕಿಗಳು ಬರುವುದು ಇದೇ ಹಿನ್ನೀರಿಗೆ. ಪ್ರತಿ ವರ್ಷ ನವೆಂಬರ್​ನಿಂದ ಏಪ್ರಿಲ್ ವರೆಗೆ ಘಟಪ್ರಭಾ ನದಿ ದಡದಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಲ್ಲಿ ನೀರಿನ ಪ್ರಮಾಣ ಕಡಿಮೆಯಾಯಿತು ಎಂದರೆ ಹಕ್ಕಿಗಳಿಗೆ ಕ್ರಿಮಿಕೀಟಗಳ ಭರ್ಜರಿ ಭೂರಿ ಭೋಜನ ಸಿಗುತ್ತದೆ. ಇದರಿಂದ ಇಲ್ಲಿ ದೇಶ ವಿದೇಶದಿಂದ ಚೆಂದುಳ್ಳಿ ಹಕ್ಕಿಗಳು ವಲಸೆ ಬರುತ್ತವೆ. ಇವುಗಳ ಹಾರಾಟ, ನದಿಯಲ್ಲಿ ಅಂಕುಡೊಂಕಾಗಿ ಕಾಲಿಡುತ್ತಾ ಸಾಗುವ ಪರಿ.. ನೀರಿನಲ್ಲಿ ಇವುಗಳ ಈಜಾಟ, ಬಾನೆತ್ತರಕ್ಕೆ ಹಾರಾಡುತ್ತಿರುವ ಹಕ್ಕಿಗಳ ಗುಚ್ಚ ನೋಡೋದೆಂದರೆ ಕಣ್ಣಿಗೆ ಹಬ್ಬ. ಹೀಗಾಗಿ ಇಲ್ಲೊಂದು ಪಕ್ಷಿಧಾಮ ಮಾಡಬೇಕು ಎನ್ನುವುದು ಇಲ್ಲಿನ ಪರಿಸರ ಪ್ರೇಮಿಗಳ ಬಹು ವರ್ಷಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಈಡೇರುವ ಕಾಲ ಬಂದಿದೆ.

Bird Sanctuary

ಪಕ್ಷಿ

ಆಲಮಟ್ಟಿ ಹಿನ್ನೀರಿನ ವ್ಯಾಪ್ತಿಯಲ್ಲಿ ಪಕ್ಷಿಧಾಮ ನಿರ್ಮಿಸೋಕೆ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಈ ಭಾಗದಲ್ಲಿ ಪಕ್ಷಿಧಾಮ ನಿರ್ಮಿಸಬೇಕು ಅಂತ ಹಲವು ವರ್ಷಗಳಿಂದ ಪರಿಸರ ಪ್ರೇಮಿಗಳ ಆಗ್ರಹ ಆಗಿತ್ತು. ಅದರಂತೆ ಪಕ್ಷಿಧಾಮ ನಿರ್ಮಿಸುವುದಕ್ಕೆ ಸರ್ಕಾರದ ಅನುಮೋದನೆ ನೀಡಿದೆ. ಆದಷ್ಟು ಬೇಗ ಚಿಕ್ಕಸಂಗಮ ವ್ಯಾಪ್ತಿಯಲ್ಲಿ ಶೀಘ್ರ ಪಕ್ಷಿಧಾಮ ನಿರ್ಮಾಣ ಆಗಲಿದೆ ಎಂದರು.

206 ಕ್ಕೂ ಹೆಚ್ಚು ಪ್ರಭೇದದ ಪಕ್ಷಿ ಆಗಮನ
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಹಿಡಿದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಡ್ಯಾಂ ಹಿನ್ನೀರಿನವರೆಗೆ ಒಟ್ಟು 123 ಚದರ ಕಿ.ಮೀ ಇರಲಿದೆ.  ದೇಶ ಹಾಗೂ ವಿದೇಶದಿಂದ 206 ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಪ್ರತಿ ವರ್ಷ ಇಲ್ಲಿಗೆ ಬರುತ್ತವೆ. ಚಳಿಗಾಲದಲ್ಲಿ ಸಂತಾನೋತ್ಪತ್ತಿ, ಆಹಾರ ಅರಸಿ ಆಗಮಿಸುತ್ತವೆ. ಇದರಲ್ಲಿ 36 ವಿದೇಶಿ ಪ್ರಬೇಧಗಳು ಇದ್ದು, ಹಿನ್ನೀರ ಕೆಸರಿನಲ್ಲಿ ಸಿಗುವ ಹುಳು, ಸಣ್ಣ-ಸಣ್ಣ ಮೀನುಗಳೇ ಇವುಗಳಿಗೆ ಆಹಾರ. ಫ್ಲೆಮಿಂಗೋ, ರಿವರ್ ಟರ್ನ, ಕಾರ್ಮೊರೆಂಟ್, ಡಕ್ಸ, ಬಾರ್ ಹೆಡೆಡ್ ಗೀಸ್, ಸ್ನೇಕ್ ಬರ್ಡ್ಸ್, ಡಾಲ್ಟರ್, ಟಿಲ್ಸ ಸೇರಿದಂತೆ ನೂರಾರು ಜಾತಿಯ ಸಾವಿರಾರು ಪಕ್ಷಿಗಳ ಕಲರವ ಮತ್ತು ಅವುಗಳ ಸೊಬಗನ್ನು ಎಲ್ಲರೂ ಸವಿಯಲೇಬೇಕು. ವಿಶೇಷ ತಳಿಯ ಬಾತುಕೋಳಿಗಳು, ಕೊಕ್ಕರೆಗಳು, ನೀರುಕೋಳಿಗಳು ಗರಿಬಿಚ್ಚಿ ಹಾರೋದು ನೋಡುಗರ ಮನಸೂರೆಗೊಳ್ಳುತ್ತದೆ.

Bird Sanctuary

ಪಕ್ಷಿಗಳು

ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಪಕ್ಷಿಧಾಮ
ತಮ್ಮ ವಿಶಿಷ್ಟ ಬಣ್ಣ, ರೆಕ್ಕೆಗಳು, ಕೊಕ್ಕಿನಿಂದ ಆಹಾರ ತಿನ್ನುವ ವಿಧಾನ ಎಲ್ಲವೂ ವಿಶೇಷವಾಗಿರುತ್ತವೆ. ವಿದೇಶಿ ಹಕ್ಕಿಗಳನ್ನು ಹನಿಮೂನ್ ಬರ್ಡ್ಸ್ ಎಂದೆ ಕರೆಯಲಾಗುತ್ತದೆ. ಈ ಪಕ್ಷಿಗಳು ಇಲ್ಲಿ ಪ್ರತಿವರ್ಷ ನವೆಂಬರ್​ನಿಂದ ಮಾರ್ಚ್ ಏಪ್ರಿಲ್ ವರೆಗೂ ನೆಲೆ ನಿಂತಿರುತ್ತವೆ. ಆಸ್ಟ್ರೇಲಿಯಾ, ಸೈಬೀರಿಯಾ, ಮಂಗೋಲಿಯಾ, ರಷ್ಯಾದಿಂದ ಹಕ್ಕಿಗಳು ಬಂದು ಸಂತಾನೋತ್ಪತ್ತಿ ಮಾಡಿಕೊಂಡು ತಮ್ಮ ತವರೂರಿಗೆ ಹಾರಿ ಹೋಗುತ್ತವೆ. ಇಂತಹ ವಿಭಿನ್ನ ಹಕ್ಕಿಗಳ ತಾಣ ಹೆಚ್ಚು ಪರಿಚಯವಿಲ್ಲದೆ ಮರೆಮಾಚಿದ್ದು, ಸುಂದರ ಪಕ್ಷಿಧಾಮ ನಿರ್ಮಾಣಕ್ಕೆ ಸಜ್ಜಾಗಿದೆ. 123 ಚದರ ಕಿ.ಮೀ ವ್ಯಾಪ್ತಿಯಲ್ಲಿ ಪಕ್ಷಿಧಾಮ ನಿರ್ಮಾಣ ಆಗಲಿದೆ. ರೈತರ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಪಕ್ಷಿಧಾನ ನಿರ್ಮಾಣ ಆಗಲಿದೆ. ಒಂದೂವರೆ ಕೋಟಿ ವೆಚ್ಚದಲ್ಲಿ ಈ ಪಕ್ಷಿಧಾಮ ನಿರ್ಮಿಸಲಿದ್ದೇವೆ. ಯಾವುದೇ ಕಟ್ಟಡಗಳಿಲ್ಲದೇ ನೈಸರ್ಗಿಕವಾಗಿ ವಾಚ್ ಟವರ್, ಬೋಟಿಂಗ್ ಮೂಲಕ ಪಕ್ಷಿ ಪ್ರಿಯರಿಗೆ ನೋಡುವ ಭಾಗ್ಯ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ

ಮಲೇರಿಯಾ ನಿರ್ಮೂಲನೆಗೆ ಮಂಗಳೂರಿನಲ್ಲಿ ಕೈಗೊಂಡ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಜೈ ಹೋ…

ಕೊರೊನಾ ಆಘಾತ; ಶಂಕರಪುರ ಮಲ್ಲಿಗೆ ದರ ಕುಸಿತ, ಕೃಷಿಕರು ಕಂಗಾಲು

(Karnataka Govt. approved to build the beautiful bird sanctuary in the backwaters of Krishna and Ghataprabha river)

Follow us on

Related Stories

Most Read Stories

Click on your DTH Provider to Add TV9 Kannada