ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ತೀವ್ರ ಔಷಧ ಕೊರತೆ: ಸಿಎಜಿ ವರದಿಯಲ್ಲಿ ಆತಂಕಕಾರಿ ಮಾಹಿತಿ

ಕರ್ನಾಟಕದ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆಯಿರುವುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. 2017-22ರ ನಡುವೆ ಕೆಎಸ್ಎಂಎಸ್ಸಿಎಲ್ ಅಗತ್ಯ ಔಷಧಿಗಳನ್ನು ಸೂಕ್ತ ಪ್ರಮಾಣದಲ್ಲಿ ಖರೀದಿಸಿಲ್ಲ. ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಶೇಕಡಾ 57 ರಿಂದ 61 ರಷ್ಟಿದೆ. ಸ್ಥಳೀಯ ಖರೀದಿಯಿಂದ ವೆಚ್ಚ ಹೆಚ್ಚಾಗಿದೆ ಎಂದೂ ವರದಿ ತಿಳಿಸಿದೆ.

ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ತೀವ್ರ ಔಷಧ ಕೊರತೆ: ಸಿಎಜಿ ವರದಿಯಲ್ಲಿ ಆತಂಕಕಾರಿ ಮಾಹಿತಿ
ಅಗತ್ಯ ಔಷಧಿಗಳು (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on: Dec 18, 2024 | 7:15 AM

ಬೆಂಗಳೂರು, ಡಿಸೆಂಬರ್ 18: ಕರ್ನಾಟಕದ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ. ಇದು ಎಷ್ಟರ ಮಟ್ಟಿಗೆ ಎಂದರೆ, ಭಾರತೀಯ ಸಾರ್ವಜನಿಕ ಆರೋಗ್ಯ ಗುಣಮಟ್ಟ (ಐಪಿಎಚ್‌ಎಸ್) ಮಾನದಂಡಗಳಿಗಿಂತ ತೀರಾ ಕಡಿಮೆ ಎಂಬುದು ಭಾರತೀಯ ಮಹಾ ಲೆಕ್ಕಪರಿಶೋಧಕ (ಸಿಎಜಿ) ವರದಿಯಿಂದ ತಿಳಿದುಬಂದಿದೆ. ವರದಿಯ ಪ್ರಕಾರ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) 2017-18 ಮತ್ತು 2021-22 ರ ನಡುವೆ ರಾಜ್ಯಾದ್ಯಂತ ಆರೋಗ್ಯ ಸಂಸ್ಥೆಗಳು ಮನವಿ ಸಲ್ಲಿಸಿದ ಪ್ರಮಾಣದಲ್ಲಿ ಅಗತ್ಯ ಔಷಧಿಗಳನ್ನು ಖರೀದಿಸಿಯೇ ಇಲ್ಲ.

2020-21ರಲ್ಲಿ ರಾಜ್ಯದ ಆರೋಗ್ಯ ಸಂಸ್ಥೆಗಳು ನಿಗಮಕ್ಕೆ 761 ಅಗತ್ಯ ಔಷಧಗಳ ಖರೀದಿಗೆ ಮನವಿ ಸಲ್ಲಿಸಿದ್ದವು. ಆದರೆ, ಆ ಪೈಕಿ 238 ಔಷಧಗಳನ್ನು ಮಾತ್ರ ಖರೀದಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಉಳಿದಂತೆ ಸ್ಥಳೀಯವಾಗಿ ಖರೀದಿಸಲು ಸಂಸ್ಥೆಗಳಿಗೆ ಅನುಮತಿ ನೀಡಲಾಗಿತ್ತು.

ಜಿಲ್ಲೆ, ತಾಲೂಕು ಆಸ್ಪತ್ರೆಗಳ ಸ್ಥಿತಿ ಚಿಂತಾಜನಕ

ಜಿಲ್ಲಾ ಆಸ್ಪತ್ರೆಗಳಲ್ಲಿ ಸುಮಾರು 128 ರಷ್ಟು ಔಷಧಗಳ ಅಗತ್ಯವಿದ್ದರೆ, 50 ಕ್ಕಿಂತಲೂ ಕಡಿಮೆ ಅಗತ್ಯ ಔಷಧಿಗಳ ದಾಸ್ತಾನು ಮಾತ್ರ ಇರುವುದು ಗೊತ್ತಾಗಿದೆ. ಅಂದರೆ, ಶೇ 61 ರಷ್ಟು ಕೊರತೆಯಿದೆ ಎಂದು ಸಿಎಜಿ ವರದಿ ತಿಳಿಸಿದೆ.

ತಾಲೂಕು ಆಸ್ಪತ್ರೆಗಳಲ್ಲಿ 81 ರಷ್ಟು ಔಷಧಗಳ ಅಗತ್ಯವಿದ್ದರೆ, ಕೇವಲ 35 ಅಥವಾ ಅದಕ್ಕಿಂತ ಕಡಿಮೆ ದಾಸ್ತಾನಿವೆ. ಅಂದರೆ, ಶೇಕಡಾ 57 ರಷ್ಟು ಕೊರತೆಯಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಸಿಎಚ್‌ಸಿ) ಕೇವಲ 25 ಅಥವಾ ಅದಕ್ಕಿಂತ ಕಡಿಮೆ ಅಗತ್ಯ ಔಷಧಗಳ ದಾಸ್ತಾನಿವೆ. ಇವುಗಳಲ್ಲಿ ಸದ್ಯ 64 ಅಗತ್ಯ ಔಷಧಗಳ ಬೇಡಿಕೆ ಇವೆ.

ಅಗತ್ಯ ಔಷಧ ಪೂರೈಕೆ ಅತಿ ಕಡಿಮೆ: ಸಿಎಜಿ ವರದಿ

2016-22ರಲ್ಲಿ ತಪಾಸಣೆ ನಡೆಸಿದ ಎಲ್ಲಾ ಐದು ಜಿಲ್ಲೆಗಳಲ್ಲಿ (ಬಳ್ಳಾರಿ, ಬೆಂಗಳೂರು ನಗರ, ಧಾರವಾಡ, ಕೋಲಾರ ಮತ್ತು ಮೈಸೂರು) ಅಗತ್ಯ ಔಷಧಿ ಪೂರೈಕೆಯ ಒಟ್ಟಾರೆ ಶೇಕಡಾವಾರು ಪ್ರಮಾಣ ಸ್ಥಿರವಾಗಿ ಶೇಕಡಾ 35 ಕ್ಕಿಂತ ಕಡಿಮೆಯಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಇದನ್ನೂ ಓದಿ: ಅನಗತ್ಯ ಸಿಸೇರಿಯನ್ ಹೆರಿಗೆ ತಡೆಗೆ ಹೊಸ ಯೋಜನೆ: ದಿನೇಶ್ ಗುಂಡೂರಾವ್ ಘೋಷಣೆ

ಆರೋಗ್ಯ ಸಂಸ್ಥೆಗಳು ಸ್ಥಳೀಯವಾಗಿ ಕೆಲವು ಔಷಧಿಗಳನ್ನು ಖರೀದಿಸುವುದರಿಂದ ವೆಚ್ಚದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಸಿಎಜಿ ವರದಿ ತಿಳಿಸಿದ್ದು, ಆ ಕುರಿತ ವಿವರವನ್ನೂ ಒದಗಿಸಿದೆ. ವಿವರಣಾತ್ಮಕ ಪ್ರಕರಣಗಳನ್ನು ವರದಿಯು ಒದಗಿಸಿದೆ, 2019-20 ರಲ್ಲಿ ನೋವಿನ ಔಷಧಿಗೆ ಶೇ 783.7 ರಷ್ಟು ಹೆಚ್ಚು ವೆಚ್ಚವಾಗಿದೆ. ಏಕೆಂದರೆ, ಈ ಔಷಧದ ಪ್ರತಿ ಯೂನಿಟ್ ದರವು ಕೆಎಸ್​ಎಂಎಸ್​ಸಿಎಲ್​ನಲ್ಲಿ 2.15 ರೂ. ಆಗಿದ್ದರೆ, ಸ್ಥಳೀಯ ಪೂರೈಕೆದಾರರಿಂದ ಖರೀದಿಸಲು 19 ರೂ. ತೆರಬೇಕಾಗಿತ್ತು ಎಂದು ವರದಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ