ಫೇರ್‌ನೆಸ್ ಕ್ರೀಮ್ ಬಳಸಿದ ಯುವತಿಗೆ ಕಿಡ್ನಿ ಸಮಸ್ಯೆ: ಕಠಿಣ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ

ಬಿಳಿ ಚರ್ಮದ ಆಸೆಗೆ ಫೇರ್‌ನೆಸ್ ಕ್ರೀಮ್ ಬಳಕೆ. ಆದ್ರೆ ಸೌಂದರ್ಯ ಹೆಚ್ಚಿಸಿಕೊಳ್ಳುವ ಆಸೆಯೇ ಕಿಡ್ನಿಗೆ ಕುತ್ತು ತಂದಿದೆ. ಸೋಶಿಯಲ್ ಮೀಡಿಯಾ ಜಾಹೀರಾತು ನಂಬಿ ಕ್ರೀಮ್ ಬಳಸಿದವರ ಆರೋಗ್ಯ ಹದಗೆಟ್ಟ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಬ್ಯೂಟಿ ಪಾರ್ಲರ್ ಹಾಗೂ ಸಲೂನ್‌ಗಳ ಸೇವೆಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾಗಿದೆ. ಏನಿದು ಹೊಸ ಎಚ್ಚರಿಕೆ.

ಫೇರ್‌ನೆಸ್ ಕ್ರೀಮ್ ಬಳಸಿದ ಯುವತಿಗೆ ಕಿಡ್ನಿ ಸಮಸ್ಯೆ: ಕಠಿಣ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ
Cosmetic Products
Edited By:

Updated on: Nov 26, 2026 | 10:21 PM

ಬೆಂಗಳೂರು, (ನವೆಂಬರ್ 26): ಸಡನ್ ಆಗಿ ಬಿಳಿಯಾಗಬೇಕು. ಮುಖದ ಕಲೆ ಮಾಯವಾಗಬೇಕು, ಗ್ಲೋ ಬರಲು ಇಂತಹ ಕ್ರೀಮ್ ಬಳಕೆ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತುಗಳದ್ದೇ ಕಾರುಬಾರು ಇನ್‌ಸ್ಟಾಗ್ರಾಂ ರೀಲ್ಸ್, ಇನ್‌ಫ್ಲುಯೆನ್ಸರ್‌ಗಳ ಪ್ರಚಾರ ನೋಡಿ ಫೇರ್‌ನೆಸ್ ಕ್ರೀಮ್ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಆದ್ರೆ ಸೌಂದರ್ಯದ ಆಸೆಗೆ ಬಳಸುವ ಇಂತಹ ಕ್ರೀಮ್‌ಗಳು ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಆತಂಕ ಎದುರಾಗಿದೆ. ಹೌದು.. ಸೋಶಿಯಲ್ ಮೀಡಿಯಾ ಜಾಹೀರಾತುಗಳನ್ನ ನಂಬಿ ಫೇರ್‌ನೆಸ್ ಕ್ರೀಮ್ ಬಳಸಿದ 17 ವರ್ಷದ ಯುವತಿ ಗಂಭೀರ ಕಿಡ್ನಿ ಸಮಸ್ಯೆಗೆ ತುತ್ತಾಗಿರುವ ಪ್ರಕರಣ ಆತಂಕ ಮೂಡಿಸಿದೆ. ಕಿಡ್ನಿ ಮೇಲೆ ಪರಿಣಾಮ ಬೀರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಸೌಂದರ್ಯವರ್ಧಕಗಳ ಹೆಸರಿನಲ್ಲಿ ಆರೋಗ್ಯದ ಜೊತೆ ಆಟವಾಡುವವರಿಗೆ ಕಡಿವಾಣ ಹಾಕಲು ಮುಂದಾಗಿದೆ.

ಸೌಂದರ್ಯ ವರ್ಧಕ ಕ್ರೀಮ್​​​​​​​​ನಿಂದ ಕಿಡ್ನಿ ಸಮಸ್ಯೆ

ಸ್ಟಿರಾಯ್ಡ್ ಹಾಗೂ ಅಪಾಯಕಾರಿ ಕೆಮಿಕಲ್ ಇರುವ ಕ್ರೀಮ್‌ಗಳ ಬಳಕೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸೋಶಿಯಲ್ ಮೀಡಿಯಾ ಜಾಹೀರಾತುಗಳನ್ನ ನಂಬಿ ಫೇರ್‌ನೆಸ್ ಕ್ರೀಮ್ ಬಳಸಿದ 17 ವರ್ಷದ ಯುವತಿ ಗಂಭೀರ ಕಿಡ್ನಿ ಸಮಸ್ಯೆಯಾಗಿದೆ. ಇದೇ ರೀತಿ ಖ್ಯಾತ ಮಾಪಿಳಪ್ಪಾಟ್ಟು ಗಾಯಕ ಸಲೀಂ ಕೋಡತ್ತೂರ್ ಕೂಡ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿಚಾರ ಕೇರಳದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಘಟನೆಗಳ ಬೆನ್ನಲ್ಲೇ ಸೌಂದರ್ಯವರ್ಧಕಗಳ ಬಳಕೆ ಹಾಗೂ ಮಾರಾಟದ ಮೇಲೆ ಆರೋಗ್ಯ ಇಲಾಖೆ ಕಣ್ಣಿಟ್ಟಿದೆ.

Loading...

ಇದನ್ನೂ ಓದಿ: ತ್ವಚೆಯ ಕಾಂತಿ, ತೂಕ ಇಳಿಕೆ ಹೆಸರಲ್ಲಿ ಬರುವ ಜಾಹೀರಾತು ನಂಬುವ ಮುನ್ನ ಎಚ್ಚರ: ಶೇ.95ರಲ್ಲಿ ನಿಯಮ ಉಲ್ಲಂಘನೆ ಪತ್ತೆ!

ಕಾಸ್ಮೆಟಿಕ್ ಸೇವೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಚಿಂತನೆ

ಬ್ಯೂಟಿ ಪಾರ್ಲರ್ ಮತ್ತು ಸಲೂನ್ ಸೆಂಟರ್‌ಗಳಲ್ಲಿ ಯಾವ ಸೇವೆ ನೀಡಬೇಕು? ಯಾವ ಸೇವೆ ನೀಡಬಾರದು? ಬಳಸುವ ಕ್ರೀಮ್ ಹಾಗೂ ಕೆಮಿಕಲ್‌ಗಳು ಸುರಕ್ಷಿತವಾಗಿರಬೇಕೇ? ಇವೆಲ್ಲದರ ಬಗ್ಗೆ ಸ್ಪಷ್ಟ ಮಾರ್ಗಸೂಚಿ ರೂಪಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಇನ್‌ಸ್ಟಾಗ್ರಾಂನಲ್ಲಿ ಕಾಣುವ ಪ್ರತಿಯೊಂದು ಜಾಹೀರಾತು ನಂಬಿಕೆಗೆ ಅರ್ಹವಲ್ಲ. ಸಡನ್ ಸ್ಕಿನ್ ವೈಟ್ನಿಂಗ್, ತಕ್ಷಣ ಬಿಳಿಯಾಗುವ ಭರವಸೆ ನೀಡುವ ಕ್ರೀಮ್‌ಗಳ ಹಿಂದೆ ಅಪಾಯಕಾರಿ ರಾಸಾಯನಿಕಗಳಿರುವ ಸಾಧ್ಯತೆ ಇದೆ. ಇಂತಹ ಉತ್ಪನ್ನಗಳ ಬಳಕೆ ಚರ್ಮದ ಸಮಸ್ಯೆ ಮಾತ್ರವಲ್ಲದೆ ದೇಹದ ಆಂತರಿಕ ಅಂಗಗಳ ಮೇಲೂ ಪರಿಣಾಮ ಬೀರುವ ಆತಂಕವಿದೆ. ಹೀಗಾಗಿ ಬ್ಯೂಟಿ ಪಾರ್ಲರ್‌ಗಳಲ್ಲಿ ನಡೆಯುವ ಕಾಸ್ಮೆಟಿಕ್ ಸೇವೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

ಸಲೂನ್ ಹಾಗೂ ಬ್ಯೂಟಿ ಪಾರ್ಲರ್‌ಗಳಿಗೆ ಮಾರ್ಗಸೂಚಿ ನೀಡುವ ಮೂಲಕ ಅಪಾಯಕಾರಿ ಕ್ರೀಮ್‌ಗಳ ಬಳಕೆ, ನಿಯಮಬಾಹಿರ ಸೌಂದರ್ಯ ಚಿಕಿತ್ಸೆಗಳು ಹಾಗೂ ಆರೋಗ್ಯಕ್ಕೆ ಹಾನಿಕಾರಕ ಸೇವೆಗಳ ಮೇಲೆ ನಿಯಂತ್ರಣ ಹೇರಲು ಸಿದ್ಧತೆ ನಡೆಸಿದೆ.

ಬಿಳಿಯಾಗುವ ಆಸೆಗೆ ಆರೋಗ್ಯವನ್ನೇ ಬಲಿ ಕೊಡಬೇಡಿ. ಸೋಶಿಯಲ್ ಮೀಡಿಯಾ ಜಾಹೀರಾತು ನೋಡಿ ಕ್ರೀಮ್ ಬಳಸುವ ಮುನ್ನ ಎಚ್ಚರ ವಹಿಸಿ. ಸೌಂದರ್ಯಕ್ಕಿಂತ ಆರೋಗ್ಯವೇ ಮುಖ್ಯ. ಅಪಾಯಕಾರಿ ಕ್ರೀಮ್‌ಗಳ ಬಳಕೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದ್ದು, ಇದರೊಂದಿಗೆ ಬ್ಯೂಟಿ ಟ್ರೆಂಡ್‌ಗಳ ಹೆಸರಿನಲ್ಲಿ ಆರೋಗ್ಯದ ಜೊತೆ ಆಟವಾಡುವವರಿಗೆ ಬ್ರೇಕ್ ಹಾಕಲು ಸರ್ಕಾರ ಸಜ್ಜಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us