KUWSDB: ದೂರ ಶಿಕ್ಷಣದ ಪದವಿ ಕಾರಣಕ್ಕೆ 5 ವರ್ಷ ಸೇವೆ ಸಲ್ಲಿಸಿದ ಬಳಿಕ, ಸರ್ಕಾರಿ ನೌಕರಿ ಕಳೆದುಕೊಂಡ ಎಂಜಿನಿಯರ್! ಮತ್ತೆ ಉದ್ಯೋಗ ಕೊಡಲು ಹೈಕೋರ್ಟ್ ಆದೇಶ

ನ್ಯಾ. ಆರ್. ದೇವದಾಸ್ ಅವರ ನ್ಯಾಯ ಪೀಠ, ಅರ್ಜಿದಾರರ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪರಿಗಣಿಸಿ ಮುಂದಿನ 2 ತಿಂಗಳಲ್ಲಿ ಕಿರಿಯ ಎಂಜಿನಿಯರ್ ಹುದ್ದೆಯ ಮರು ನೇಮಕಾತಿಗೆ ಪರಿಗಣಿಸಬೇಕು. ಮರು ನೇಮಕಾತಿಯು ಮೂಲ ನೇಮಕಾತಿಯಿಂದ ಪೂರ್ವಾನ್ವಯವಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಆದೇಶಿಸಿ ಮಾನವೀಯತೆ ಮೆರೆದಿದೆ.

KUWSDB: ದೂರ ಶಿಕ್ಷಣದ ಪದವಿ ಕಾರಣಕ್ಕೆ 5 ವರ್ಷ ಸೇವೆ ಸಲ್ಲಿಸಿದ ಬಳಿಕ, ಸರ್ಕಾರಿ ನೌಕರಿ ಕಳೆದುಕೊಂಡ ಎಂಜಿನಿಯರ್! ಮತ್ತೆ ಉದ್ಯೋಗ ಕೊಡಲು ಹೈಕೋರ್ಟ್ ಆದೇಶ
ದೂರ ಶಿಕ್ಷಣದ ಪದವಿ ಕಾರಣಕ್ಕೆ 5 ವರ್ಷ ಸೇವೆ ಸಲ್ಲಿಸಿದ ಬಳಿಕ, ಸರ್ಕಾರಿ ನೌಕರಿ ಕಳೆದುಕೊಂಡ ಎಂಜಿನಿಯರ್! ಮತ್ತೆ ಉದ್ಯೋಗ ಕೊಡಲು ಹೈಕೋರ್ಟ್ ಆದೇಶ
Follow us
| Edited By: ಸಾಧು ಶ್ರೀನಾಥ್​

Updated on:May 27, 2022 | 9:59 PM

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಪಡೆದ ಬಿ. ಟೆಕ್ ಪದವಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (Karnataka Urban Water Supply and Drainage Board -KUWSDB) ಅಸಿಸ್ಟೆಂಟ್ ಎಂಜಿನಿಯರ್ ನೌಕರಿ ಕಳೆದುಕೊಂಡಿದ್ದ ವ್ಯಕ್ತಿಗೆ ಮತ್ತೆ ಉದ್ಯೋಗ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.

ಚಿಕ್ಕಮಗಳೂರಿನ ಕಲ್ಯಾಣ ನಗರ ನಿವಾಸಿ ಕೆ.ಆರ್. ದೇವರಾಜು ಎಂಬುವರು ಕೆಎಸ್‌ಒಯು ನಿಂದ (KSOU) ಬಿ.ಟೆಕ್ ಪದವಿ ಪಡೆದು ಅದರ ಆಧಾರದ ಮೇಲೆ ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿ 5 ವರ್ಷ ಸೇವೆ ಸಲ್ಲಿಸಿದ್ದರು. ಆದರೆ. ಕೆಎಸ್‌ಒಯು ನೀಡಿದ್ದ ಬಿಟೆಕ್ ಪದವಿಗೆ ಎಐಸಿಟಿಇ ಮಾನ್ಯತೆ ನೀಡದ ಹಿನ್ನೆಲೆಯಲ್ಲಿ ಮಂಡಳಿ ಏಕಾಏಕಿ ಕೆಲಸದಿಂದ ತೆಗೆದು ಹಾಕಿತ್ತು. ಉದ್ಯೋಗಕ್ಕೆ ಕುತ್ತು ಬಂದ ಹಿನ್ನೆಲೆಯಲ್ಲಿ ದೇವರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರ ದೇವರಾಜು ಪರ ವಕೀಲರು, ಯುಜಿಸಿ 2015ರ ಜೂನ್ 16ರಂದು ಹೊರಡಿಸಿರುವ ಪ್ರಕಟಣೆಯಂತೆ ಕೆಎಸ್‌ಒಯು 2012-13ನೇ ಸಾಲಿನವರೆಗೆ ನೀಡಿರುವ ಪದವಿ ಪ್ರಮಾಣ ಪತ್ರಗಳು ಮಾನ್ಯತೆ ಹೊಂದಿಲ್ಲದಿರಬಹುದು. ಆದರೆ ವಿವಿ ನೀಡಿರುವ ಪದವಿ ಪ್ರಮಾಣ ಪತ್ರಗಳಿಗೆ ಸರ್ಕಾರ ಮಾನ್ಯತೆ ನೀಡಿದೆ. ಹಾಗೆಯೇ, ದೇವರಾಜ್ ಸಹಾಯಕ ಎಂಜಿನಿಯರ್ ಆಗಿ 5 ವರ್ಷ ಸೇವೆ ಸಲ್ಲಿಸಿದ್ದಾರೆ.

ಸದ್ಯ ಅವರು ಪಡೆದಿರುವ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾಗೆ ಮಾನ್ಯತೆ ಇದ್ದು, ಅದನ್ನು ಪರಿಗಣಿಸಿ ದೇವರಾಜ್ ಗೆ ಕಿರಿಯ ಎಂಜಿನಿಯರ್ ಹುದ್ದೆ ನೀಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು. ಅರ್ಜಿದಾರರ ವಾದವನ್ನು ಆಕ್ಷೇಪಿಸಿದ್ದ ಯುಜಿಸಿ, ಎಐಸಿಟಿಇ ಮತ್ತು ಮಂಡಳಿ ಪರ ವಕೀಲರು, ದೂರ ಶಿಕ್ಷಣದ ಮೂಲಕ ತಾಂತ್ರಿಕ ವಿಷಯಗಳಲ್ಲಿ ಪಡೆದಿರುವ ಪದವಿಗಳಿಗೆ ಮಾನ್ಯತೆ ಇಲ್ಲ. ಹಾಗೆಯೇ, ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪರಿಗಣಿಸಿ ಸಹಾಯಕ ಎಂಜಿನಿಯರ್ ಹುದ್ದೆ ಪಡೆಯಲು ಅರ್ಹತೆ ಇಲ್ಲ ಎಂದು ವಾದಿಸಿದ್ದರು.

ಮಾನವೀಯತೆ ಮೆರೆದ ಹೈಕೋರ್ಟ್:

ವಾದ-ಪ್ರತಿವಾದ ಆಲಿಸಿದ ನ್ಯಾ. ಆರ್. ದೇವದಾಸ್ ಅವರ ನ್ಯಾಯ ಪೀಠ, ಅರ್ಜಿದಾರರ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪರಿಗಣಿಸಿ ಮುಂದಿನ 2 ತಿಂಗಳಲ್ಲಿ ಕಿರಿಯ ಎಂಜಿನಿಯರ್ ಹುದ್ದೆಯ ಮರು ನೇಮಕಾತಿಗೆ ಪರಿಗಣಿಸಬೇಕು. ಮರು ನೇಮಕಾತಿಯು ಮೂಲ ನೇಮಕಾತಿಯಿಂದ ಪೂರ್ವಾನ್ವಯವಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಆದೇಶಿಸಿ ಮಾನವೀಯತೆ ಮೆರೆದಿದೆ.

ಏನಿದು ಪ್ರಕರಣ:

ಅರ್ಜಿದಾರ ಕೆ.ಆರ್. ದೇವರಾಜು, 2016ರ ಜುಲೈ ತಿಂಗಳಲ್ಲಿ ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್ (ಸಿವಿಲ್) ಹುದ್ದೆಗೆ ನೇಮಕಗೊಂಡಿದ್ದರು. ಆದರೆ, 2019ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಪಡೆದಿದ್ದ ಬಿ.ಟೆಕ್ ಪದವಿಗೆ ಎಐಸಿಟಿಇ ಅನುಮೋದನೆ ನೀಡಲು ನಿರಾಕರಿಸಿತ್ತು.

ಈ ಹಿನ್ನೆಲೆಯಲ್ಲಿ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು 2019ರ ಸೆಪ್ಟೆಂಬರ್ 6ರಂದು ದೇವರಾಜ್‌ಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸಿಗೆ ಉತ್ತರಿಸಿದ್ದ ದೇವರಾಜ್, ತಾವು 2012-2014ನೇ ಸಾಲಿನಲ್ಲಿ ಮುಕ್ತ ವಿವಿಯಿಂದ ಬಿ.ಟೆಕ್ ಪದವಿ ಪ್ರಮಾಣಪತ್ರ ಪಡೆದಿದ್ದೇನೆ. ನೇಮಕಾತಿಯಲ್ಲಿ ತಮ್ಮ ಯಾವುದೇ ಲೋಪವಿಲ್ಲ ಎಂದಿದ್ದರು. ವಿವರಣೆ ತಿರಸ್ಕರಿಸಿದ್ದ ಮಂಡಳಿ 2021ರ ಜುಲೈ 13ರಂದು ನೇಮಕಾತಿ ಆದೇಶ ರದ್ದುಪಡಿಸಿತ್ತು. ಇದನ್ನ ಪ್ರಶ್ನಿಸಿ ದೇವರಾಜ್ ‍ ಹೈಕೋರ್ಟ್ ಮೊರೆ ಹೋಗಿದ್ದರು.

(Source:  Karnataka HC reinstates assistant engineer after govt sacks him)

Published On - 9:53 pm, Fri, 27 May 22

ತಾಜಾ ಸುದ್ದಿ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ