ಲೋಕಾಯುಕ್ತ ಬೇಟೆ: ಒಂದೇ ದಿನ 3 ಜಿಲ್ಲೆಗಳಲ್ಲಿ ಐವರು ಲಂಚಕೋರ ಅಧಿಕಾರಿಗಳು ಬಲೆಗೆ

ಗದಗ, ಯಾದಗಿರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ರೋಣದಲ್ಲಿ ಹೆಸ್ಕಾಂ ಸೆಕ್ಷನ್ ಆಫೀಸರ್ ವಿದ್ಯುತ್ ಸಂಪರ್ಕಕ್ಕಾಗಿ ಲಂಚ ಪಡೆಯುವಾಗ ಸಿಕ್ಕಿಬಿದ್ದರೆ, ಸುರಪುರದಲ್ಲಿ ಜೆಸ್ಕಾಂ ಕಿರಿಯ ಇಂಜಿನಿಯರ್‌ಗಳು ಬಿಲ್ ಅನುಮೋದನೆಗೆ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ಧಿದ್ದಾರೆ. ಕಾರವಾರದಲ್ಲಿ ಗುತ್ತಿಗೆ ಬಿಲ್ ಮಂಜೂರು ಮಾಡುವುದಕ್ಕೆ ಲಂಚ ಸ್ವೀಕರಿಸುವಾಗ ಸಿಕ್ಕಿಬಿದಿದ್ದಾರೆ.

ಲೋಕಾಯುಕ್ತ ಬೇಟೆ: ಒಂದೇ ದಿನ 3 ಜಿಲ್ಲೆಗಳಲ್ಲಿ ಐವರು ಲಂಚಕೋರ ಅಧಿಕಾರಿಗಳು ಬಲೆಗೆ
ಲೋಕಾಯುಕ್ತ ದಾಳಿ
Image Credit source: tv9 kannada
Edited By:

Updated on: Oct 14, 2026 | 9:04 PM

ಮುಖ್ಯಾಂಶಗಳು

  • ರಾಜ್ಯದ ಕೆಲ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ
  • ರೆಡ್​ಹ್ಯಾಂಡ್​ ಆಗಿ ಲೋಕಾ ಬಲೆಗೆ ಬಿದ್ದ ಅಧಿಕಾರಿಗಳು
  • ವಶಕ್ಕೆ ಪಡೆದ ವಿಚಾರಣೆ ಮಾಡುತ್ತಿರುವ ಲೋಕಾ

ಗದಗ, ಅಕ್ಟೋಬರ್​​ 14: ಲಂಚ ಸ್ವೀಕರಿಸುತ್ತಿದ್ದ ಹೆಸ್ಕಾಂ ಅಧಿಕಾರಿ ಲೋಕಾ ಬಲೆಗೆ ಬಿದ್ದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ಹೆಸ್ಕಾಂ ಸೆಕ್ಷನ್​ ಆಫೀಸರ್​​ ಮೇಘಯ್ಯ ಹಿರೇಮಠ ಬಲೆಗೆ ಬಿದ್ದ ಸೆಕ್ಷನ್ ಅಧಿಕಾರಿ. ಪಶು ಸಾಕಣೆ ಶೆಡ್​ಗೆ ವಿದ್ಯುತ್ ಸಂಪರ್ಕ ನೀಡಲು 20 ಸಾವಿರ ರೂ ಲಂಚಕ್ಕೆ ಮೇಘಯ್ಯ ಹಿರೇಮಠ ಬೇಡಿಕೆಯಿಟ್ಟದ್ದರು. ಅ.1ರಂದು ಪೋನ್ ಪೇ ಮೂಲಕ 5000 ರೂ ಲಂಚ ಪಡೆದಿದ್ದು, ಇಂದು 10 ಸಾವಿರ ರೂ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದಿದ್ದಾರೆ. ಲೋಕಾಯುಕ್ತ ಡಿಎಸ್​ಪಿ ಲೋಕೇಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಸೆಕ್ಷನ್ ಆಫೀಸರ್ ಮಾಬುಸಾಬ್ ಆಡಿನ್, ವಿದ್ಯುತ್ ಗುತ್ತಿಗೆದಾರ ಮಹಾದೇವ ಸಜ್ಜನರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

10 ಸಾವಿರ ರೂ ಲಂಚ ಪಡೆಯುವಾಗಲೇ ಲೋಕಾ ಬಲೆಗೆ ಬಿದ್ದ ಲೆಕ್ಕ ಪರಿಶೋಧಕ

ಉತ್ತರ ಕನ್ನಡ ಶಿರಸಿ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಮೇಲೆ ಕೂಡ ಲೋಕಾಯುಕ್ತ ದಾಳಿ ಮಾಡಲಾಗಿದೆ. 10 ಸಾವಿರ ರೂ ಲಂಚ ಪಡೆಯುವಾಗಲೇ ಲೋಕಾಯುಕ್ತ ದಾಳಿ ಮಾಡಿದ್ದು, ಲೆಕ್ಕ ಪರಿಶೋಧಕ ಮಲ್ಲಿಕಾರ್ಜುನ್​​ ಪಾಟೀಲ್ ಬಲೆಗೆ ಬಿದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 4 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌

ಗುತ್ತಿಗೆ ಬಿಲ್ ಮಂಜೂರು ಮಾಡುವುದಕ್ಕೆ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಗುತ್ತಿಗೆದಾರ ನಾಗರಾಜ ಕಟ್ಟಿಮನೆ ದೂರಿನನ್ವಯ ರೇಡ್ ಮಾಡಲಾಗಿದೆ. ಲೋಕಾಯುಕ್ತ ಡಿವೈಎಸ್​​ಪಿ ಧನ್ಯಾ ನಾಯಕ್, ಸಿಪಿಐ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಪ್ರಕರಣ ಕುರಿತು ಲೋಕಾಯುಕ್ತ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಲಂಚ ಸ್ವೀಕರಿಸುವಾಗ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಇನ್ನು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಕೂಡ ಲೋಕಾ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಲಂಚ ಸ್ವೀಕರಿಸುವಾಗ ಇಬ್ಬರು ಅಧಿಕಾರಿಗಳು ರೆಡ್​ಹ್ಯಾಂಡ್​ ಆಗಿ ಬಲೆಗೆ ಬಿದಿದ್ದಾರೆ. ಸುರಪುರ ವಿಭಾಗದ ಜೆಸ್ಕಾಂ ಜೆಇಗಳಾದ ಸಚಿನ್ ಯಡಕೆ ಮತ್ತು ಶ್ರೀಶೈಲ್ ತಮ್ಮದಡ್ಡಿ ಲೋಕಾ ಬಲೆಗೆ ಬಿದ್ದ ಅಧಿಕಾರಿಗಳು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ: ಬಂಟ್ವಾಳದ ಪುದು, ಮಾಣಿ ಸೇರಿದಂತೆ 7 ಗ್ರಾಮ ಪಂಚಾಯತ್‌ಗಳ ಮೇಲೆ ಏಕಕಾಲಕ್ಕೆ ದಾಳಿ

ದೂರುದಾರ ಭೈರಣ್ಣ ಅಂಬಿಗೇರ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿಬಂದಿದೆ. 8 ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿತ್ತು. 3.63 ಲಕ್ಷ ರೂ ಮೊತ್ತದ ಬಿಲ್ ಮಂಜೂರು ಮಾಡಲು 9 ಸಾವಿರ ರೂ ಲಂಚಕ್ಕೆ ಇಂಜಿನಿಯರ್ಸ್ ಬೇಡಿಕೆ ಇಟ್ಟಿದ್ದರು. ಈ ವೇಳೆ ಲೋಕಾಯುಕ್ತ ಇನ್ಸ್​ಪೆಕ್ಟರ್​ ಪ್ರದೀಪ್ ತಾಳಿಕೇರಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಬಾಕಿ 3 ಸಾವಿರ ರೂ. ಲಂಚ ಸ್ವೀಕರಿಸುವಾಗ ಬಲೆಗೆ ಬಿದಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Loading...
Unable to load recommendations.
Follow Us