ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಅಕ್ಟೋಬರ್ 27) ಹೊಸದಾಗಿ 282 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,86,835 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,40,339 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 13 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,037 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 8,430 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 142 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,51,155 ಕ್ಕೆ ಏರಿಕೆಯಾಗಿದೆ. 12,51,155 ಸೋಂಕಿತರ ಪೈಕಿ 12,28,469 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 6 ಮಂದಿ ಸಾವನ್ನಪ್ಪಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,259 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 6,426 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ
ಬಾಗಲಕೋಟೆ 0, ಬಳ್ಳಾರಿ 2, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 142, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 4, ಚಿತ್ರದುರ್ಗ 3, ದಕ್ಷಿಣ ಕನ್ನಡ 28, ದಾವಣಗೆರೆ 1, ಧಾರವಾಡ 1, ಗದಗ 0, ಹಾಸನ 18, ಹಾವೇರಿ 0, ಕಲಬುರಗಿ 0, ಕೊಡಗು 31, ಕೋಲಾರ 1, ಕೊಪ್ಪಳ 0, ಮಂಡ್ಯ 5, ಮೈಸೂರು 18, ರಾಯಚೂರು 1, ರಾಮನಗರ 3, ಶಿವಮೊಗ್ಗ 2, ತುಮಕೂರು 9, ಉಡುಪಿ 2, ಉತ್ತರ ಕನ್ನಡ 4, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
ಇಂದಿನ 27/10/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/HAfWQCDEUn @cmofKarnataka @mla_sudhakar @Comm_dhfwka @HubballiRailway@KodaguConnect @IChangeMyCity@WeAreBangalore @bangalore@Belagavi_infra @PIBBengaluru @KarnatakaVarthe pic.twitter.com/EKdwftXVWR
— K’taka Health Dept (@DHFWKA) October 27, 2021
ಕೊರೊನಾದಿಂದ ಮೃತಪಟ್ಟವರ ವಿವರ
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊವಿಡ್19 ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ 3 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 2 ಮಂದಿ ಸಾವನ್ನಪ್ಪಿದ್ದಾರೆ. ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೊರೊನಾದಿಂದ ಒಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮಡಿಕೇರಿ: ನವೋದಯ ವಿದ್ಯಾಲಯದಲ್ಲಿ ಒಟ್ಟು 31 ಮಕ್ಕಳಿಗೆ ಕೊರೊನಾ ದೃಢ; ಶಾಲೆ ಸೀಲ್ಡೌನ್
ಇದನ್ನೂ ಓದಿ: ಕಾನ್ಪುರದ ವ್ಯಕ್ತಿಯೊಬ್ಬರಲ್ಲಿ ಝಿಕಾ ವೈರಸ್ ಪತ್ತೆ; ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಂಡಗಳ ಭೇಟಿ