ಶೃಂಗೇರಿ ಶಾರದಾಂಬೆಯ ದರ್ಶನ ಹೋಗುವ ಭಕ್ತರಿಗೆ ಗುಡ್​​​ ನ್ಯೂಸ್: ಮಂಗಳೂರಿಗೆ ಡಬಲ್​ ಧಮಾಕ ನೀಡಿದ ರೈಲ್ವೆ ಇಲಾಖೆ

ಮಲೆನಾಡು-ಕರಾವಳಿಗೆ ಗುಡ್ ನ್ಯೂಸ್! ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಘೋಷಿಸಿದ್ದಾರೆ. ಅಲ್ಲದೆ, ಹಾಸನ-ಮಂಗಳೂರು ಹಳಿ ದ್ವಿಗುಣಗೊಳಿಸುವ 8,300 ಕೋಟಿ ರೂ. ಯೋಜನೆಯ ಸಮೀಕ್ಷೆ ಪ್ರಗತಿಯಲ್ಲಿದೆ. ಈ ಮಹತ್ವದ ಯೋಜನೆಗಳು ಕರಾವಳಿಯ ಸಂಪರ್ಕ ಹಾಗೂ ಶೃಂಗೇರಿ ದರ್ಶನಕ್ಕೆ ಅನುಕೂಲ ಕಲ್ಪಿಸಲಿವೆ.

ಶೃಂಗೇರಿ ಶಾರದಾಂಬೆಯ ದರ್ಶನ ಹೋಗುವ ಭಕ್ತರಿಗೆ ಗುಡ್​​​ ನ್ಯೂಸ್: ಮಂಗಳೂರಿಗೆ ಡಬಲ್​ ಧಮಾಕ ನೀಡಿದ ರೈಲ್ವೆ ಇಲಾಖೆ
ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ
Image Credit source: pinterest

Updated on: May 25, 2026 | 12:25 PM

ಮಂಗಳೂರು, ಮೇ.25: ಮಲೆನಾಡು ಮತ್ತು ಕರಾವಳಿ ಭಾಗದ ಜನತೆಯ ದಶಕಗಳ ರೈಲು ಸಂಪರ್ಕದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಬಹುನಿರೀಕ್ಷಿತ ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೇಳಿಕೆ ನೀಡಿದ್ದಾರೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ‘ಅಮೃತ್ ಭಾರತ್’ ಯೋಜನೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಈ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

3,300 ಕೋಟಿ ವೆಚ್ಚದ ಭಾರಿ ಯೋಜನೆ:

ಪ್ರಸ್ತಾವಿತ ಶಿವಮೊಗ್ಗ-ಮಂಗಳೂರು ಹೊಸ ರೈಲು ಮಾರ್ಗವು ಒಟ್ಟು 332 ಕಿಲೋಮೀಟರ್ ಉದ್ದವಿರಲಿದ್ದು, ಇದಕ್ಕೆ ಅಂದಾಜು 3,300 ಕೋಟಿ ರೂಪಾಯಿ ಯೋಜನಾ ವೆಚ್ಚವನ್ನು ನಿಗದಿಪಡಿಸಲಾಗಿದೆ. ಈ ಮಾರ್ಗದ ಫೈನಲ್ ಲೊಕೇಶನ್ ಸರ್ವೆ (FLS) ಈಗಾಗಲೇ ಯಶಸ್ವಿಯಾಗಿ ಮುಗಿದು ಇಲಾಖೆಯಿಂದ ಅನುಮೋದನೆ ಕೂಡ ದೊರೆತಿದೆ. ತಾಂತ್ರಿಕ ಪ್ರಕ್ರಿಯೆಗಳು ಮುಗಿದ ತಕ್ಷಣವೇ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಮಾರ್ಗವು ಜಾರಿಗೆ ಬಂದರೆ ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಮತ್ತು ಕರಾವಳಿ-ಮಲೆನಾಡಿನ ವಾಣಿಜ್ಯ ಸಂಪರ್ಕಕ್ಕೆ ಭಾರಿ ದೊಡ್ಡ ಬೂಸ್ಟ್ ಸಿಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಗುಡುಗು ಸಹಿತ ಭಾರೀ ಮಳೆ

ಹಾಸನ-ಮಂಗಳೂರು ಹಳಿ ದ್ವಿಗುಣಗೊಳಿಸಲು 8,300 ಕೋಟಿ!:

ಇದೇ ವೇಳೆ ಕರಾವಳಿಯ ಮತ್ತೊಂದು ಪ್ರಮುಖ ರೈಲ್ವೆ ಯೋಜನೆಗೆ ವೇಗ ನೀಡಿರುವ ಸಚಿವರು, ಹಾಸನ ಮತ್ತು ಮಂಗಳೂರು ನಡುವಿನ 247 ಕಿಲೋಮೀಟರ್ ರೈಲು ಹಳಿಯನ್ನು ದ್ವಿಗುಣಗೊಳಿಸುವ (Doubling of Railway Line) ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು. ಈ ಯೋಜನೆಗಾಗಿ ಒಟ್ಟು 8,300 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಸದ್ಯ ಇದರ ಫೈನಲ್ ಲೊಕೇಶನ್ ಸರ್ವೆ (FLS) ಪರಿಶೀಲನಾ ಹಂತದಲ್ಲಿದೆ ಎಂದು ವಿ. ಸೋಮಣ್ಣ ತಿಳಿಸಿದ್ದಾರೆ. ಈ ಎರಡು ಮೆಗಾ ಯೋಜನೆಗಳು ಕರಾವಳಿ ಕರ್ನಾಟಕದ ಸಾರಿಗೆ ಇತಿಹಾಸದಲ್ಲೇ ಹೊಸ ಕ್ರಾಂತಿ ಸೃಷ್ಟಿಸಲಿವೆ.

ರಾಜ್ಯದ ಸುದ್ದಿಗಳನ್ನು ಇದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us