ಬೇಸಿಗೆ ಬೇಗೆ: ರಾಜ್ಯದಲ್ಲಿ 11 ದಿನಗಳಲ್ಲಿ 17 ಲಕ್ಷ ಲೀ ಕೋಲ್ಡ್​ ಬಿಯರ್ ಮಾರಾಟ !

ಈ ಬಾರಿಯ ಬಿಸಿಲಿನ ಬೇಗೆಗೆ ಮದ್ಯಪ್ರಿಯರು ಚಿಲ್ಡ್ ಬಿಯರ್ ಮೊರೆ‌ ಹೋಗಿದ್ದಾರೆ. ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಹಾಗೆ ಬಿಯರ್​ಗೆ ಬೇಡಿಕೆ ಹೆಚ್ಚಾಗಿದೆ. ಮದ್ಯಪ್ರಿಯರು ಹಾಟ್​ ಡ್ರಿಂಕ್ಸ್​ ಬಿಟ್ಟು ಕೋಲ್ಡ್​ ಬಿಯರ್​ನತ್ತ ವಾಲಿದ್ದು ಕಳೆದ 11 ದಿನಗಳಲ್ಲಿ ರಾಜ್ಯದಲ್ಲಿ ಮಾರಾಟವಾದ ಬಿಯರ್​ ಹಿಂದಿನ 3 ವರ್ಷಗಳ ದಾಖಲೆ ಮುರಿದಿದೆ.

ಬೇಸಿಗೆ ಬೇಗೆ: ರಾಜ್ಯದಲ್ಲಿ 11 ದಿನಗಳಲ್ಲಿ 17 ಲಕ್ಷ ಲೀ ಕೋಲ್ಡ್​ ಬಿಯರ್ ಮಾರಾಟ !
ಸಾಂದರ್ಭಿಕ ಚಿತ್ರ (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ)
Follow us
Kiran Surya
| Updated By: ವಿವೇಕ ಬಿರಾದಾರ

Updated on:Apr 16, 2024 | 4:20 PM

ಬೆಂಗಳೂರು, ಏಪ್ರಿಲ್​ 16: ಈ ಬಾರಿಯ ಬೇಸಿಗೆಯ (Summer) ಹೊಡೆತಕ್ಕೆ ರಾಜ್ಯದಲ್ಲಿ ಜನರು ತಂಪು ಪಾನಿಯಗಳತ್ತ ಮೊರೆ ಹೋಗಿದ್ದರೆ, ಇತ್ತ ಮದ್ಯಪ್ರಿಯರು ಮಾತ್ರ ಹಾಟ್ ಡ್ರಿಂಕ್ಸ್ ಬಿಟ್ಟು ಕೋಲ್ಡ್ ಬಿಯರ್​ಗೆ (Beer) ಶಿಫ್ಟ್ ಆಗಿದ್ದು ಈ ತಿಂಗಳು ದಾಖಲೆಯಷ್ಟು ಮಾರಾಟವಾಗಿದೆ. ಕಳೆದ 11 ದಿನಗಳಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆ ಕಂಡಿದೆ.

ಬಿಸಿಲಿನ ತಾಪದಿಂದ ಮನೆಯಲ್ಲಿ ಕೂರಲಾಗದೆ, ಹೊರಗೆ ಹೋಗಲಾರದೆ ಜನ ಹಿಂಸೆ ಅನುಭವಿಸುತ್ತಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿ ಹೆಚ್ಚಳ ಕಂಡಿದೆ. ರಾಜ್ಯದಲ್ಲಿ ಕಳೆದ 11 ದಿನಗಳಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿಯೂ ಏರಿಕೆಯಾಗಿದ್ದು, ದಾಖಲೆ ಬರೆದಿದೆ. 27 ಲಕ್ಷದ 18 ಸಾವಿರದ 461 ಬಾಟಲ್​ಗಳು ಮಾರಾಟವಾಗಿದ್ದರೆ ಇದರಿಂದ ಅಂದಾಜು 46 ಕೋಟಿ 21 ಲಕ್ಷ 38 ಸಾವಿರ 461 ರುಪಾಯಿ ಸರ್ಕಾರಕ್ಕೆ ಆದಾಯ ಬಂದಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ

ಇನ್ನು ಈ ತಿಂಗಳ ಏಪ್ರಿಲ್ 1 ರಿಂದ ಏಪ್ರಿಲ್ 11ರ ವರೆಗೂ ಅಂದರೆ 11 ದಿನಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ 17.67 ಲಕ್ಷ ಲೀಟರ್ ವಿವಿಧ ಬ್ರ್ಯಾಂಡ್‌ನ ಬಿಯರ್ ಮಾರಾಟವಾಗಿವೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷವೇ ಇಷ್ಟೊಂದು ಲೀಟರ್ ಬಿಯರ್ ಮಾರಾಟವಾಗಿರುವುದು. 2021ರಲ್ಲಿ ಬೇಸಿಗೆಯ ಅವಧಿಯಲ್ಲಿ 8.83 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2022ರಲ್ಲಿ 9.20 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದರೇ, 2023 ರಲ್ಲಿ 13.16 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2023ಕ್ಕೆ ಹೋಲಿಸಿದರೆ ಈ ವರ್ಷ ಬರೋಬ್ಬರಿ 4.51 ಲಕ್ಷ ಲೀಟರ್ ಬಿಯರ್ ಹೆಚ್ಚು ಮಾರಾಟ ಆಗಿದೆ.

ಇದನ್ನೂ ಓದಿ: Video: ಮದ್ಯದ ಅಮಲಿನಲ್ಲಿ ಪಾರ್ಕ್​​​ ಬೆಂಚಿನ ಸಂಧಿಗೆ ತಲೆ ಹಾಕಿ ಪರದಾಡಿದ ಕುಡುಕ, ಮುಂದೇನಾಯ್ತು ನೋಡಿ?

ಈ ಬೇಸಿಗೆಯಲ್ಲಿ ಹಾಟ್ ಡ್ರಿಂಕ್ಸ್ ಕುಡಿಯಲು ಆಗುವುದಿಲ್ಲ. ಹೀಗಾಗಿ ಕಳೆದ ಮೂರು ‌ತಿಂಗಳಿನಿಂದ ಬಿಯರ್​ಗೆ ಶಿಫ್ಟ್ ಆಗಿದ್ದೀನಿ ಪ್ರತಿದಿನ ಎರಡರಿಂದ ಮೂರು ಬಿಯರ್ ಕುಡಿತಿದ್ದೀನಿ ಎಂದು ಮದ್ಯಪ್ರಿಯ ಮಾರಯ್ಯ ಹೇಳಿದರು.

ಒಟ್ಟಿನಲ್ಲಿ ಬೇಸಿಗೆಗೂ ಮುಂಚೆ ಮದ್ಯಪ್ರಿಯರು ದಿನಕ್ಕೋ, ವಾರಕ್ಕೋ ಒಂದೋ ಎರಡೋ ಬಿಯರ್ ಕುಡಿತಿದ್ದರು. ಈ ಬಾರಿಯ ಬೇಸಿಗೆಗೆ ಪ್ರತಿದಿನ ಚಿಲ್ಡ್​ಆಗಿ ಬಿಯರ್ ಬೇಕೆ ಬೇಕು ಅಂತ ಮದ್ಯಪ್ರಿಯರು ಹೇಳುತ್ತಿದ್ದಾರೆ. ಬಿಯರ್ ಸೇವಿಸುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿಯಾಗಿ ಆದಾಯ ಬರ್ತಿರುವುದಂತು ಸತ್ಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:07 pm, Tue, 16 April 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ