Karnataka Rain Highlights: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ: ಹಳ್ಳದ ನೀರು ನುಗ್ಗಿ 50ಕ್ಕೂ ಹೆಚ್ಚು ಮನೆಗಳು ಜಲಾವೃತ

TV9 Web
| Updated By: Digi Tech Desk

Updated on:Jul 18, 2022 | 5:10 PM

Karnataka Rain and Flood in Madikeri, Uttara Kannada, Dakshina Kannada Live News Updates: ಕೊಡಗು ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಡಿಸಿ ಕಚೇರಿ ತಡೆಗೋಡೆ ಕುಸಿಯುವ ಆತಂಕ ಉಂಟಾಗಿದೆ. ಮಳೆಯಿಂದ ಅತ್ಯಾಧುನಿಕ ತಡೆಗೋಡೆ ಉಬ್ಬಿ ನಿಂತ್ತಿದೆ.

Karnataka Rain Highlights: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ: ಹಳ್ಳದ ನೀರು ನುಗ್ಗಿ 50ಕ್ಕೂ ಹೆಚ್ಚು ಮನೆಗಳು ಜಲಾವೃತ
Karnataka Rain

ಬೆಂಗಳೂರು: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ವಿವಿಧ ಭಾಗಗಳಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Weather Department) ಹೇಳಿದೆ. ಛತ್ತೀಸಗಡದ ವಿವಿಧೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಡಿಶಾ, ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳಲ್ಲಿ ತೀವ್ರ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಭದ್ರೆ ಉಕ್ಕಿ ಹರಿಯುತ್ತಿದೆ. ಹೊಸಪೇಟೆಯ ತುಂಗಭದ್ರಾ ಜಲಾಶಯವು ಭರ್ತಿಯಾಗಿದ್ದು, ನದಿಗೆ ನೀರು ಹರಿಬಿಡಲಾಗುತ್ತಿದೆ. ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ವಿವಿಧೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ಮತ್ತು ಗೋದಾವರಿ ನದಿಗಳು ಸೊಕ್ಕಿ ಹರಿಯುತ್ತಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಲವು ಜಲಾಶಯಗಳು ಭರ್ತಿಯಾಗಿದ್ದು, ನದಿಗೆ ನೀರು ಹರಿಬಿಡಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಡಿಸಿ ಕಚೇರಿ ತಡೆಗೋಡೆ ಕುಸಿಯುವ ಆತಂಕ ಉಂಟಾಗಿದೆ. ಮಳೆಯಿಂದ ಅತ್ಯಾಧುನಿಕ ತಡೆಗೋಡೆ ಉಬ್ಬಿ ನಿಂತ್ತಿದೆ. ತಡೆಗೋಡೆ ಕುಸಿದರೆ ಡಿಸಿ ಕಚೇರಿಗೆ ಅಪಾಯ ಸಾಧ್ಯತೆಯಿದ್ದು, ರಾಷ್ಟ್ರೀಯ ಹೆದ್ದಾರಿ ಕೂಡ ಕೊಚ್ಚಿಹೋಗುವ ಸಾಧ್ಯತೆ ಕೂಡ ಇದೆ. ಸದ್ಯ ವಾಹನಗಳು ಪರ್ಯಾಯ ಮಾರ್ಗದ ಮೂಲಕ ಸಂಚಾರ ನಡೆಸುತ್ತಿವೆ.

LIVE NEWS & UPDATES

The liveblog has ended.
  • 17 Jul 2022 02:51 PM (IST)

    Karnataka Rain Live Updates: ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಮುಂದುವರೆದ ಮಳೆ

    ಚಿಕ್ಕೋಡಿ: ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಮಳೆ ಮುಂದುವರೆದಿದ್ದು, ಕೊಯ್ನಾ – 97 mm ಮಳೆ, ನವಜಾ – 100 mm ಮಳೆ, ಮಹಾಬಳೇಶ್ವರ – 122 mm ಮಳೆಯಾಗಿದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್​ನಿಂದ 1 ಲಕ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ನೀರಿನ ಹೊರ ಹರಿವು ಉಂಟಾಗಿದೆ. ಪಂಚಗಂಗಾ ನದಿ ಮೂಲಕ ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್​ಗಿಂತ ಹೆಚ್ಚಿನ ನೀರು ಬಿಡಲಾಗಿದೆ. ವೇದಗಂಗಾ, ದೂದಗಂಗಾ ನದಿ ಮೂಲಕ ಕೃಷ್ಣಾ ನದಿಗೆ 27 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಕೃಷ್ಣಾ ನದಿಗೆ ಉಪನದಿಗಳ ಮುಖಾಂತರ ಒಟ್ಟು 1.28.000 ಸಾವಿರ ಕ್ಯೂಸೆಕ್​ಕ್ಕಿಂತ ಹೆಚ್ಚಿನ ಒಳಹರಿವು. ಮಾಂಜರಿ – ಅಂಕಲಿ ಸೇತುವೆ ಬಳಿ 532 ಮೀಟರ ನೀರಿನ ಮಟ್ಟದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದು, ಕೃಷ್ಣಾ ನದಿ ಪಾತ್ರ ಜನರಲ್ಲಿ ಪ್ರವಾಹ ಆತಂಕ ಮುಂದುವರೆದಿದೆ.

  • 17 Jul 2022 02:47 PM (IST)

    Karnataka Rain Live Updates: ಹೂವಿನ ಹಡಗಲಿಯ ರೈತರ ಜಮೀನುಗಳು ಜಲಾವೃತ

    ವಿಜಯನಗರ: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣ ನೀರು ಬಿಡುಗಡೆ ಹಿನ್ನೆಲೆ, ಹೂವಿನ ಹಡಗಲಿಯ ರೈತರ ಜಮೀನುಗಳು ಜಲಾವೃತವಾಗಿದ್ದು, ಇದೀಗ ಹೊಸಹಳ್ಳಿ ಗ್ರಾಮದ ನೂರಾರು ಎಕರೆ ಭೂಮಿ ಮುಳುಗಡೆಯಾಗಿದೆ. ಭತ್ತ ನಾಟಿ ಮಾಡಿದ ಜಮೀನಿಗೆ ತುಂಗಭದ್ರಾ ನದಿ ನೀರು ನುಗ್ಗಿದೆ. 1.40 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿದ ಹಿನ್ನೆಲೆ ಜಲಾವೃತವಾಗಿದ್ದು, ಭತ್ತ ನಾಟಿ ನಾಟಿ ಮಾಡಿದ ರೈತಗೆ ಆತಂಕ ಹೆಚ್ಚಿದೆ. 300 ಹೆಚ್ಚು ಎಕರೆ ಪ್ರದೇಶಕ್ಕೆ ನೀರು ಆವರಿಸಿದೆ.

  • 17 Jul 2022 02:34 PM (IST)

    Karnataka Rain Live Updates: ಧಾರಾಕಾರ ಮಳೆಯಿಂದ ಸಾವೆಹಕ್ಲು ಡ್ಯಾಮ್ ಭರ್ತಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದ ಹಿನ್ನೆಲೆ ಹೊಸನಗರ ತಾಲೂಕಿನ ಸಾವೆಹಕ್ಲು ಡ್ಯಾಮ್ ಭರ್ತಿಯಾಗಿದೆ. ಸಾವೇಹಕ್ಲು ಡ್ಯಾಮ್ ಭರ್ತಿ ಹಿನ್ನಲೆ ಡ್ಯಾಂ ಸೌಂದರ್ಯ ಇಮ್ಮಡಿಯಾಗಿದೆ. ಸಾವೆಹಕ್ಲು ಡ್ಯಾಂನಿಂದ 346 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.

  • 17 Jul 2022 02:31 PM (IST)

    Karnataka Rain Live Updates: ಶೇ 80ರಷ್ಟು ಮೆಕ್ಕೆಜೋಳ ನಾಶ

    ದಾವಣಗೆರೆ: ನಿರಂತರ ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ನಾಶವಾಗಿರುವಂತಹ ಘಟನೆ ನಿರಂತರ ಮಳೆ ಸಂಪೂರ್ಣ ಹಾಳಾದ ಬೆಳೆ. ಜಂಟಿ ಸರ್ವೇಗೆ ಮುಂದಾದ ಜಿಲ್ಲಾಡಳಿತ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಸುಮಾರು ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ. ಶೇ 80 ರಷ್ಟು ಹಾಳಾಗಿದೆ. ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದ್ದು, ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

  • 17 Jul 2022 01:53 PM (IST)

    Karnataka Rain Live Updates: ಮೈದುಂಬಿ ಹರಿಯುತ್ತಿರುವ ಮಣಿಪಾಲದ ಅರ್ಬಿ ಜಲಪಾತ

    ಉಡುಪಿ: ಮಳೆಗಾಲ ಬಂತೆಂದರೆ ಸಾಮಾನ್ಯ ನೀರಿನ ಹರಿವಿಗೂ ಕೂಡ ಮೈದುಂಬಿ ಹರಿಯುವ ಜಲಪಾತದ ರೂಪ ಬರುತ್ತದೆ. ಜಿಲ್ಲೆಯ ಮಣಿಪಾಲದಲ್ಲಿ ಇಂತಹ ಸಣ್ಣಪುಟ್ಟ ಕಿರು ಜಲಪಾತಗಳು ಅನೇಕ ಇವೆ. ಅಪ್ಪಾಯವಿಲ್ಲದೆ ಭೂಮಿಯ ಸ್ವಲ್ಪವೇ ಹತ್ತಿರದಲ್ಲಿ ಹರಿಯುವ ಈ ಜಲಪಾತಗಳಲ್ಲಿ ಮೋಜಿ ಮಸ್ತಿ ಮಾಡುವುದೇ ಒಂದು ಅದ್ಭುತ ಅನುಭವ.

  • 17 Jul 2022 01:39 PM (IST)

    Karnataka Rain Live Updates: ಏಕಾಏಕಿ ಕುಸಿದು ಬಿದ್ದ ಹೆಂಚಿನ ಮನೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಪುಣೇದಹಳ್ಳಿಯಲ್ಲಿ ಏಕಾಏಕಿ ಹೆಂಚಿನ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಮಣ್ಣುಪಾಲಾಗಿವೆ. ಶಿಕಾರಿಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 17 Jul 2022 12:24 PM (IST)

    Karnataka Rain Live Updates: ಧುಮ್ಮಿಕ್ಕುವ ಗೋಕಾಕ್ ಪಾಲ್ಸ್ ನೋಡಲು ಮುಗಿಬಿದ್ದ ಪ್ರವಾಸಿಗರು

    ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಅಪಾಯದ ಮಟ್ಟ ಮೀರಿ ಘಟಪ್ರಭಾ ನದಿ ಹರಿಯುತ್ತಿದೆ. ಧುಮ್ಮಿಕ್ಕುವ ಗೋಕಾಕ್ ಪಾಲ್ಸ್ ನೋಡಲು ಪ್ರವಾಸಿಗರು ಮುಗಿಬಿಳ್ಳುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಪಾಲ್ಸ್ ಸುತ್ತಮುತ್ತ ಪ್ರವಾಸಿಗರು ತೆರಳದಂತೆ ಪೊಲೀಸರು ನಿಗಾ ವಹಿಸಿದ್ದಾರೆ.

  • 17 Jul 2022 12:22 PM (IST)

    Karnataka Rain Live Updates: ತುಂಗಭದ್ರಾ ನದಿ ಪಾತ್ರದ ಭತ್ತದ ಗದ್ದೆಗಳು ಮುಳುಗಡೆ

    ಬಳ್ಳಾರಿ: TB ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನಲೆ ನಿಟ್ಟೂರು ಗ್ರಾಮದ ಭತ್ತದ ಜಮೀನುಗಳು ಜಲಾವೃತವಾಗಿವೆ. ತುಂಗಭದ್ರಾ ನದಿ ಪಾತ್ರದ ಭತ್ತದ ಗದ್ದೆಗಳು ಮುಳುಗಡೆಯಾಗಿದ್ದು, ದಿನ ದಿನಕ್ಕೆ ನದಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ನಿಟ್ಟೂರು ಗ್ರಾಮದ 200 ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ಮುಳುಗಡೆಯಾಗಿದೆ.

  • 17 Jul 2022 12:20 PM (IST)

    Karnataka Rain Live Updates: ತುಂಗಭದ್ರಾ ನದಿಗೆ ಬಾಗಿನ ಅರ್ಪಣೆ

    ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ ತಾಲೂಕಿನ ಹುಲಿಗೆಮ್ಮ ದೇವಸ್ಥಾನ ಆಡಳಿತ ವತಿಯಿಂದ ಬಾಗೀನ ಅರ್ಪಣೆ ಮಾಡಲಾಯಿತು. ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಇರುವ ಹುಲಿಗೇಮ್ಮ ದೇವಸ್ಥಾನ, ಕಳೆದ ಐದು ದಿನಗಳಿಂದ ಜಲಾಶಯದಿಂದ ನೀರು ಬಿಡುಗಡೆಯಾಗಿದ್ದು, ಹುಲಿಗೆಮ್ಮ ದೇವಿಯ ಪಾದಗಟ್ಟಿ ತಲುಪಿದೆ. ಈ ಹಿನ್ನಲೆಯಲ್ಲಿ  ದೇವಸ್ಥಾನದ ಆಡಳಿತಾಧಿಕಾರಿ ಅರವಿಂದ ಸುತಗಟ್ಟಿ ಅವರಿಂದ ಬಾಗೀನ ಅರ್ಪಣೆ ಮಾಡಲಾಯಿತು.

  • 17 Jul 2022 11:26 AM (IST)

    Karnataka Rain Live Updates: ಜಿಟಿ ಜಿಟಿ ಮಳೆಗೆ ದ್ವಿಚಕ್ರ ವಾಹನ ಸವಾರರು ಪರದಾಟ

    ಚಾಮರಾಜನಗರ: ಜಿಲ್ಲೆಯಲ್ಲಿ ಮುಂಜಾನೆಯಿಂದ ನಿರಂತರವಾಗಿ ಹಲವೆಡೆ ಜಿಟಿಜಿಟಿ ಮಳೆ‌ ಸುರಿಯುತ್ತಿದ್ದು, ಮಳೆಗೆ ದ್ವಿಚಕ್ರ ವಾಹನ ಸವಾರರು ಪರದಾಡುವಂತ್ತಾಗಿದೆ. ಇಷ್ಟು ದಿನ ಆಗಾಗ ತುಂತುರು ಮಳೆ ಬಿದ್ದು ಹೋಗುತಿತ್ತು. ನಿನ್ನೆಯಿಂದ ಬಿರುಸು ಪಡೆದಿರುವ ಮಳೆ, ಮುಂಜಾನೆಯಿಂದಲು ನಿರಂತರವಾಗಿ ಬರುತ್ತಿದೆ.

  • 17 Jul 2022 11:23 AM (IST)

    Karnataka Rain Live Updates: ರಾಜ್ಯದ ಬಹುತೇಕ ಕಡೆ ಮುಂದಿನ 48 ಗಂಟೆ ಮಳೆ ಸಾಧ್ಯತೆ

    ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮುಂದಿನ 48 ಗಂಟೆ ಮಳೆ ಸಾಧ್ಯತೆಯಿದ್ದು, ಜು.19ರಿಂದ ರಾಜ್ಯದಲ್ಲಿ ಮಳೆ ಪ್ರಮಾಣದಲ್ಲಿ ಇಳಿಕೆ ಸಾಧ್ಯತೆ ಎನ್ನಲಾಗುತ್ತಿದೆ. ಮಂಗಳವಾರದಿಂದ ಕೆಲ ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಹಾಸನ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ನಾಳೆ ಯಲ್ಲೊ ಅಲರ್ಟ್ ಘೋಷಿಸಲಾಗಿದೆ.

  • 17 Jul 2022 10:42 AM (IST)

    Karnataka Rain Live Updates: ಲಾಲ ಬಹಾದ್ದೂರ ಶಾಸ್ತ್ರಿ ಸಾಗರದ ನೀರಿನ ಮಟ್ಟ

    ವಿಜಯಪುರ: ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಸಾಗರದ ನೀರಿನ ಮಟ್ಟ ಹೀಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ ಗರಿಷ್ಠ ಮಟ್ಟ: 519.60 ಮೀಟರ್ ಇಂದಿನ ನೀರಿನ ಮಟ್ಟ: 517.18 ಮೀಟರ್ ಒಳ ಹರಿವು: 1,33,612 ಕ್ಯೂಸೆಕ್ ಹೊರ ಹರಿವು : 1,48,367 123.01 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ 86.717 ಟಿಎಂಸಿ ನೀರು ಸಂಗ್ರಹ ವಿಜಯಪುರ ‌ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಡ್ಯಾಂ

  • 17 Jul 2022 10:41 AM (IST)

    Karnataka Rain Live Updates: ಯಾದಗಿರಿ ಜಿಲ್ಲೆಯ ರೈತರಿಗೆ ಎರಡೆರೆಡು ಟೆನ್ಷನ್!

    ಯಾದಗಿರಿ: ಜಿಲ್ಲೆಯ ರೈತರಿಗೆ ಎರಡೆರೆಡು ಟೆನ್ಷನ್ ಶುರುವಾಗಿದೆ. ಒಂದು ಕಡೆ ಪ್ರವಾಹದ ಭೀತಿ, ಇನ್ನೊಂದು ಕಡೆ ಮೊಸಳೆ ಕಾಟ. ಭತ್ತದ ಜಮೀನಿಗೆ ಮೊಸಳೆ ನುಗ್ಗಿರುವಂತಹ ಘಟನೆ ಜಿಲ್ಲೆಯ ವಡಿಗೇರಾ ತಾಲೂಕಿನ ಗೋನಾಲ ಗ್ರಾಮದಲ್ಲಿ ನಡೆದಿದೆ.ಕೃಷ್ಣಾ ನದಿ ತೀರದ ರೈತರಿಗೆ ಮೊಸಳೆಗಳ ಉಪಟಳ ಹೆಚ್ಚಾಗಿದ್ದು, ಜಮೀನಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ.

  • 17 Jul 2022 10:35 AM (IST)

    Karnataka Rain Live Updates: ಮಳೆ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ

    ಚಿಕ್ಕಮಗಳೂರು: ಮಳೆ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿರುವಂತಹ ಘಟನೆ ಚಾರ್ಮಾಡಿ ಘಾಟ್​​ನ ಸೋಮನಕಾಡು ಸಮೀಪ ನಡೆದಿದೆ. ಘಾಟ್​​ನಲ್ಲಿ ರಸ್ತೆಯ ಎಡ ಬದಿಗೆ ಕ್ಯಾಂಟರ್ ಉರುಳಿ ಬಿದಿದ್ದು, ಅದೃಷ್ಟವಶಾತ್​ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • 17 Jul 2022 10:30 AM (IST)

    Karnataka Rain Live Updates: ಮಂತ್ರಾಲಯದ ರಾಯರ ಮಠದಲ್ಲಿ ಪುಣ್ಯಸ್ನಾನಕ್ಕೆ ನಿಷೇಧ

    ರಾಯಚುರ: ಮಳೆಯಿಂದ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಮಂತ್ರಾಲಯದ ರಾಯರ ಮಠದಲ್ಲಿ ಪುಣ್ಯಸ್ನಾನಕ್ಕೆ ನಿಷೇಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನದಿ ದಡದಲ್ಲಿ ಬ್ಯಾರಿಕೇಡ್​ಗಳನ್ನ ಹಾಕಲಾಗಿದೆ.

  • 17 Jul 2022 10:00 AM (IST)

    Karnataka Rain Live Updates: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ

    ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಶರಾವತಿ ನದಿ ಪ್ರವಾಹದಿಂದ ಎರಡು ಗ್ರಾಮಗಳು ಜಲಾವೃತವಾಗಿವೆ. ಪ್ರವಾಹದಿಂದ ಗುಂಡಬಾಳ, ಹಡಿನಬಾಳ ಗ್ರಾಮ ಜಲಾವೃತವಾಗಿದ್ದು, ಭಾರೀ ಮಳೆಯಿಂದ ಅಡಕೆ ತೋಟ, ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತ್ತಾಗಿದೆ.

  • 17 Jul 2022 09:58 AM (IST)

    Karnataka Rain Live Updates: ಭಾರೀ ಮಳೆಯಿಂದಾಗಿ 120ಕ್ಕೂ ಹೆಚ್ಚು ಮನೆಗಳು ಕುಸಿತ

    ದಾವಣಗೆರೆ: ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಅವಾಂತರ ಸಂಭವಿಸಿದ್ದು, ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಎರಡು ಮನೆ ಕುಸಿದಿವೆ. ಗ್ರಾಮದ ಮಂಜಪ್ಪ, ಶೇಖರಪ್ಪ ಎಂಬುವರ ಮನೆಗಳು ಕುಸಿದಿದ್ದು, ಜಿಲ್ಲೆಯಲ್ಲಿ ಇದುವರೆಗೂ 120ಕ್ಕೂ ಹೆಚ್ಚು ಮನೆಗಳು ಕುಸಿದಿವೆ.

  • 17 Jul 2022 09:56 AM (IST)

    Karnataka Rain Live Updates: ವರದಾ ನದಿ ಪ್ರವಾಹದಿಂದ ಗದ್ದೆಗಳು ಸಂಪೂರ್ಣ ಜಲಾವೃತ

    ಶಿವಮೊಗ್ಗ: ನಗರದಲ್ಲಿ ಮಳೆ ಮುಂದುವರೆದಿದ್ದು, ಸಾಗರ, ಹೊಸನಗರ ತೀರ್ಥಹಳ್ಳಿಯಲ್ಲಿ ಮುಂಗಾರು ಆರ್ಭಟ ಜೋರಾಗಿದೆ.  ಸಾಗರದಲ್ಲಿ ಭಾರೀ ಮಳೆಗೆ ಗದ್ದೆಗಳು ಜಲಾವೃತವಾಗಿವೆ. ಪ್ರತಿ ಮಳೆಗಾಲದಲ್ಲೂ ವರದಾ ನದಿ ಪ್ರವಾಹದಿಂದ ಸ್ಥಳೀಯರು ಸಂಕಷ್ಟ ಅನುಭವಿಸುವಂತ್ತಾಗಿದೆ.

  • Published On - Jul 17,2022 9:51 AM

    Follow us
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್