ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್ ಗನ್; ನಟೋರಿಯಸ್ ರೌಡಿಶೀಟರ್ ಮೇಲೆ ಫೈರಿಂಗ್
ಖಾಸಗಿ ಆಸ್ಪತ್ರೆಯಲ್ಲಿ ಮುಕ್ತಾರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರು: ನಗರದ ಅಸೈಗೋಳಿ ಬಳಿ ಪೊಲೀಸರು ನಟೋರಿಯಸ್ ರೌಡಿಶೀಟರ್ (Rowdy Sheeter) ಮುಕ್ತಾರ್ ಮೇಲೆ ಗುಂಡು (Firing) ಹಾರಿಸಿದ್ದಾರೆ. 15ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿರುವ ಮುಕ್ತಾರ್ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈತ ಆರು ಪ್ರಕರಣಗಳಲ್ಲಿ 5 ವರ್ಷದಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ. ಪ್ರಕರಣವೊಂದರಲ್ಲಿ ಬಂಧಿಸಿ ಕಾರಿನ ಮಹಜರಿಗೆ ಹೋಗಿದ್ದ ವೇಳೆ ಎಸ್ಕೇಪ್ ಆಗಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮುಕ್ತಾರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದ್ದಾರೆ. ಹಾಗೇ ಆಸ್ಪತ್ರೆಗೂ ಭೇಟಿ ನೀಡಿದರು. ಇನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ಗಾಯಾಳು, ಪೋಲೀಸರ ಆರೋಗ್ಯ ವಿಚಾರಿಸಿದರು.
ಆರೋಪಿ ಪೂರ್ಣ ಹೆಸರು ಮೊಹಮ್ಮದ್ ಮುಖ್ತಾರ್ ಅಹಮದ್. ಈತ ಜನರಿಗೆ ನೇರವಾಗಿ ಚೂರಿ ಇರಿದು ಹಲ್ಲೆ ಮಾಡುತ್ತಾನೆ. ಪರೋಕ್ಷವಾಗಿ ಈತನಿಂದ 36 ಜನ ಹಲ್ಲೆಗೆ ಒಳಗಾದಗಿದ್ದಾರೆ. 2021 ರಲ್ಲಿ ಒಂದು ಮಹಿಳೆಯ ಅಂಗಡಿಗೆ ಹೋಗಿ ಸಿಗರೇಟು ಕೇಳಿದ್ದ. ಕೊಡದೇ ಇದ್ದಿದ್ದರಿಂದ ಅಂಗಡಿಗೆ ಬೆಂಕಿ ಇಟ್ಟಿದ್ದ ಎಂದು ಟಿವಿ9ಗೆ ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ಕುಡಿದ ಮತ್ತಿನಲ್ಲಿ ವ್ಯಕ್ತಿ ಮೇಲೆ ಹಲ್ಲೆ: ಬೆಂಗಳೂರು ನಗರದಲ್ಲಿ ಕುಡಿದ ಮತ್ತಿನಲ್ಲಿ ಇಬ್ಬರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೆಜೆಸ್ಟಿಕ್ನ ಸೆವೆನ್ ಹಿಲ್ ಬಾರ್ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ವಿಜಯ್ ಎಂಬಾತನ ಮೇಲೆ ಹಲ್ಲೆಗೈದಿದ್ದ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳು ಮತ್ತು ಆರೋಪಿಗಳು ಬಸವೇಶ್ವರ ನಗರದವರು. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಗಂಡನ ಮನೆಯವರ ಕಿರುಕುಳ ಆರೋಪ; ಮೈಸೂರಿನಲ್ಲಿ ಇಲಿ ಪಾಷಾಣ ತಿಂದು ಗೃಹಿಣಿ ಆತ್ಮಹತ್ಯೆ
ಎರಡು ಗುಂಪುಗಳ ನಡುವೆ ಗಲಾಟೆ: ಹಳೇ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ. ಕೆಲ ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ಗ್ರಾಮದ ಜಾತ್ರೆ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕೆಯಿಂದ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಗಲಾಟೆ ನಿಯಂತ್ರಿಸುವಲ್ಲಿ ಪೊಲೀಸರು ವೈಫಲ್ಯಗೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ. ಸದ್ಯ ಗಾಯಾಳುಗಳನ್ನ ಮೈಸೂರಿನ ಕೆಆರ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Aluminium: ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸಿದ ಆಹಾರವನ್ನು ತಿನ್ನುತ್ತೀರಾ? ಹಾಗಾದರೆ ಶಾಕಿಂಗ್ ವಿಷಯಗಳು ನಿಮಗಾಗಿ ಇಲ್ಲಿವೆ!
Published On - 9:15 am, Sun, 17 July 22








