ಗಂಡನ ಮನೆಯವರ ಕಿರುಕುಳ ಆರೋಪ; ಮೈಸೂರಿನಲ್ಲಿ ಇಲಿ ಪಾಷಾಣ ತಿಂದು ಗೃಹಿಣಿ ಆತ್ಮಹತ್ಯೆ
ವರದಕ್ಷಿಣೆ ಕೊಡುವವರೆಗೂ ತವರು ಮನೆಯವರ ಭೇಟಿಗೆ ಅವಕಾಶ ಕೊಡುವುದಿಲ್ಲವೆಂದು ಹಿಂಸೆ ಕೊಡುತ್ತಿದ್ದರಂತೆ. ಜ್ಯೋತಿ ಭೇಟಿ ಮಾಡಲು ಬಂದಿದ್ದ ತವರು ಮನೆಯವರಿಗೆ ಅವಮಾನ ಮಾಡಿದ್ದರಂತೆ.
ಮೈಸೂರು: ಇಲಿ ಪಾಷಾಣ (Poison) ತಿಂದು ಗೃಹಿಣಿ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಮಚ್ಚೂರು ಗ್ರಾಮದಲ್ಲಿ ನಡೆದಿದೆ. 22 ವರ್ಷದ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. 4 ವರ್ಷಗಳ ಹಿಂದೆ ಮಚ್ಚೂರು ಗ್ರಾಮದ ಆನಂದ್ ಜೊತೆ ಜ್ಯೋತಿ ವಿವಾಹವಾಗಿತ್ತು. ಮನೆಯವರ ವಿರೋಧದ ನಡುವೆ ಮದುವೆ ಆಗಿದ್ದರು. ಮದುವೆ ವೇಳೆ ಜ್ಯೋತಿ ಮನೆಯಲ್ಲಿದ್ದ ಚಿನ್ನ, ನಗದು ತೆಗೆದುಕೊಂಡು ಹೋಗಿದ್ದಳು. ನಂತರ ವರದಕ್ಷಿಣೆ ತರುವಂತೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.
ವರದಕ್ಷಿಣೆ ಕೊಡುವವರೆಗೂ ತವರು ಮನೆಯವರ ಭೇಟಿಗೆ ಅವಕಾಶ ಕೊಡುವುದಿಲ್ಲವೆಂದು ಹಿಂಸೆ ಕೊಡುತ್ತಿದ್ದರಂತೆ. ಜ್ಯೋತಿ ಭೇಟಿ ಮಾಡಲು ಬಂದಿದ್ದ ತವರು ಮನೆಯವರಿಗೆ ಅವಮಾನ ಮಾಡಿದ್ದರಂತೆ. ಇದರಿಂದ ಬೇಸತ್ತು ಜ್ಯೋತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜ್ಯೋತಿಯನ್ನು ಕ್ಯಾಲಿಕಟ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆನಂದ್ ಮನೆಯವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಜ್ಯೋತಿ ಪೋಷಕರು ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಕ್ಕಳು ತೀರದಲ್ಲಿ ಕಳೆದುಕೊಂಡ ಫುಟ್ಬಾಲ್ ಸಮುದ್ರದಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನಿಗೆ 18-ಗಂಟೆ ಕಾಲ ತೇಲುತ್ತಿರಲು ನೆರವಾಯಿತು!
ಟೈರ್ಶಾಪ್, ಗೂಡಂಗಡಿಗೆ ಬೆಂಕಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿ ಗ್ರಾಮದಲ್ಲಿ ಶಾರ್ಟ್ಸರ್ಕ್ಯೂಟ್ನಿಂದ ಟೈರ್ಶಾಪ್, ಗೂಡಂಗಡಿ ಹೊತ್ತಿ ಉರಿದಿದೆ. ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ಟೈರ್ ಭಸ್ಮವಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದೆ.
ನದಿಗೆ ಹಾರಿರುವ ವ್ಯಕ್ತಿಗಾಗಿ ಶೋಧ: ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ಸ್ನಾನಘಟ್ಟ ಬಳಿ ನದಿಗೆ ಹಾರಿರುವ ವ್ಯಕ್ತಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಮಾನಸಿಕ ಅಸ್ವಸ್ಥ ನಿನ್ನೆ ಸ್ನಾನಘಟ್ಟ ಬಳಿ ನದಿಗೆ ಹಾರಿದ್ದ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನದಿಗೆ ಹಾರಿರುವ ಪರಮೇಶ್ ನಾಯ್ಕ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Acidity: ಅಸಿಡಿಟಿಯಿಂದ ಪದೇ ಪದೇ ಬಳಲುತ್ತಿದ್ದೀರಾ? ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಇಲ್ಲವೆಂದಾದರೆ ಅಪಾಯ ತಪ್ಪಿದ್ದಲ್ಲ
ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಕ್ಕೆ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ದಾಳಿ ನಡೆದಿತ್ತು. ಅಕ್ಕಿಯನ್ನು ಲಾರಿಯಲ್ಲಿ ಬಳ್ಳಾರಿಯಿಂದ ತುಮಕೂರು ಕಡೆ ಸಾಗಿಸಲಾಗುತಿತ್ತು.
Published On - 8:36 am, Sun, 17 July 22