Karnataka Weather: ಕರ್ನಾಟಕ ಹವಾಮಾನ – ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದ ಹಲವೆಡೆ ಮಳೆ

Karnataka Rains: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮಂಗಳೂರಿನ ಹಲವೆಡೆ ಭಾರೀ ಮಳೆಯಾಗ್ತಿದೆ. ಅಕಾಲಿಕ ಮಳೆಗೆ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಕಾರಾವಾರದಲ್ಲಿ ಮಳೆಯಾಗಿದೆ. ಮಳೆಯಿಂದ ಸ್ಕಿಡ್ ಆಗಿ ಬಸ್‌ವೊಂದು ಕಾಲುವೆಗೆ ಬಿದ್ದಿದೆ.

Karnataka Weather: ಕರ್ನಾಟಕ ಹವಾಮಾನ - ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದ ಹಲವೆಡೆ ಮಳೆ
ಮಂಗಳೂರಿನಲ್ಲಿ ಮಳೆ
Edited By:

Updated on: Jan 04, 2024 | 3:43 PM

ಬೆಂಗಳೂರು, ಜನವರಿ 4: ರಾಜ್ಯದ ಚಿಕ್ಕಮಗಳೂರು ಮಡಿಕೇರಿ, ಮಂಗಳೂರು ಉತ್ತರ ಕನ್ನಡದ ಹಲವೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆಯಿಂದ ಅಕಾಲಿಕ ಮಳೆಯಾಗಿದೆ. ಹಲವೆಡೆ ಮಳೆಯಿಂದ (Karnataka Rains) ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭತ್ತ ಮತ್ತು ಅಡಕೆ ಬೆಳೆ ನಾಶವಾಗಿದೆ. ಚಿಕ್ಕಮಗಳೂರಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಕಡೂರು, ಮೂಡಿಗೆರೆ, ಕೊಪ್ಪ, ಶೃಂಗೇರಿಯ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆ ನಾಶವಾಗಿದೆ. ಕೊಯ್ಲು ಮಾಡಿದ್ದ ನೂರಾರು ಎಕರೆಯ ಭತ್ತ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮಂಗಳೂರಿನ ಹಲವೆಡೆ ಭಾರೀ ಮಳೆಯಾಗ್ತಿದೆ. ಅಕಾಲಿಕ ಮಳೆಗೆ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ.

ಅತ್ತ ಕಾರಾವಾರದಲ್ಲೂ ಮಳೆಯಾಗಿದೆ. ಮಳೆಯಿಂದ ಸ್ಕಿಡ್ ಆಗಿ ಬಸ್‌ವೊಂದು ಕಾಲುವೆಗೆ ಬಿದ್ದಿದೆ. ನೌಕಾನೆಲೆ ಗುತ್ತಿಗೆ ಕಾರ್ಮಿಕರನ್ನ ಕರೆದೊಯ್ಯುತ್ತಿದ್ದ ಬಸ್‌ನಲ್ಲಿದ್ದ 30 ಕಾರ್ಮಿಕರಿಗೆ ಗಾಯವಾಗಿದೆ. ಕಾರವಾರ ಬಸ್ ಡಿಪೋ ಮ್ಯಾನೇಜರ್ ಸ್ಥಳಕ್ಕೆ ದೌಡಾಯಿಸಿ ಪರಿಶಿಲನೆ ನಡೆಸಿದ್ದಾರೆ. ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕಾರವಾರದ ಹಬ್ಬುವಾಡದಲ್ಲಿ ಕೆಎಸ್ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿತ್ತು.

ಕೊಡಗು ಜಿಲ್ಲೆಯಲ್ಲೂ ಅಕಾಲಿಕ ಮಳೆಯಿಂದ ರೈತರು ಪರದಾಡಿದ್ದಾರೆ. ಕಾಫಿ ಕೊಯ್ಲಿನ ವೇಳೆಯಲ್ಲೇ ಮಳೆ ಬೀಳ್ತಿರೋದ್ರಿಂದ ತೊಂದರೆಯಾಗಿದೆ.

ಮತ್ತಷ್ಟು ಓದಿ: ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ 6 ದಿನಗಳ ಕಾಲ ಮಳೆ ಸಾಧ್ಯತೆ

ಹಾಸನ ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ. ಹಾಸನ ಜಿಲ್ಲೆಯ ಬಹುತೇಕ ಕಡೆ ಮೋಡಕವಿದ ವಾತಾವರಣ ಇದೆ. ಮಳೆಯಿಂದಾಗಿ ಕಾಫಿ, ಭತ್ತ, ರಾಗಿ ಬೆಳೆಗೆ ಹಾನಿಯಾಗಿದೆ. ಸಕಲೇಶಪುರ, ಆಲೂರು, ಹಾಸನ ಸುತ್ತಮುತ್ತ ಬೆಳಗ್ಗೆಯಿಂದಲೇ ಮಳೆಯಾಗಿದೆ.

ಆರು ದಿನ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:05 pm, Thu, 4 January 24

TV9 Web

TV9 Kannada

Read More
Loading...
Unable to load recommendations.
Follow Us