Karnataka Dam Water Level: ಕೆಆರ್‌ಎಸ್‌ಗೆ ತಗ್ಗಿದ ಒಳಹರಿವು, ಆಲಮಟ್ಟಿ, ಲಿಂಗನಮಕ್ಕಿಯಲ್ಲಿ ಎಷ್ಟಿದೆ ನೀರು?

ಕರ್ನಾಟಕದ ಜಲಾಶಯಗಳ (ಆಗಸ್ಟ್ 28) ನೀರಿನ ಮಟ್ಟ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಪೂರ್ಣ ವಿವರ ಇಲ್ಲಿದೆ. ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಒಳಹರಿವು ತಗ್ಗಿದೆ. ಇತ್ತ ಆಲಮಟ್ಟಿ, ಬಸವಸಾಗರ, ಲಿಂಗನಮಕ್ಕಿ, ಭದ್ರಾ ಹಾಗೂ ಹೇಮಾವತಿ ಡ್ಯಾಂಗಳಲ್ಲಿ ನೀರಿನ ಸಂಗ್ರಹದ ಸ್ಥಿತಿ ಹೇಗಿದೆ? ಜಲಾಶಯಗಳ ಇಂದಿನ ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ಮಾಹಿತಿಗಾಗಿ ಲೇಖನ ಓದಿ.

Karnataka Dam Water Level: ಕೆಆರ್‌ಎಸ್‌ಗೆ ತಗ್ಗಿದ ಒಳಹರಿವು, ಆಲಮಟ್ಟಿ, ಲಿಂಗನಮಕ್ಕಿಯಲ್ಲಿ ಎಷ್ಟಿದೆ ನೀರು?
ಆಲಮಟ್ಟಿ ಡ್ಯಾಂ

Updated on: Aug 28, 2026 | 11:10 AM

ಮುಖ್ಯಾಂಶಗಳು

  • ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಪೂರ್ಣ ವಿವರ.
  • ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಭಾವ: ಕೆಆರ್‌ಎಸ್ ಒಳಹರಿವು ತೀವ್ರ ಕುಸಿತ.
  • ಆಲಮಟ್ಟಿ, ಲಿಂಗನಮಕ್ಕಿ ಹಾಗೂ ಭದ್ರಾ ಡ್ಯಾಂಗಳಲ್ಲಿ ನೀರಿನ ಸಂಗ್ರಹ ಸ್ಥಿರ.

ಬೆಂಗಳೂರು, ಆಗಸ್ಟ್ 28: ರಾಜ್ಯದ ವಿವಿಧ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿದ್ದು, ಪ್ರಮುಖ ಜಲಾಶಯಗಳ ಒಳಹರಿವು ಮತ್ತು ಹೊರಹರಿವಿನಲ್ಲಿ ಬದಲಾವಣೆ ಕಂಡುಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಹರಿದುಬರುತ್ತಿರುವ ನೀರು ತಗ್ಗಿದ್ದರೆ, ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದ ಲಾಲ್ ಬಹಾದ್ದೂರ್ ಶಾಸ್ತ್ರಿ, ಬಸವಸಾಗರ, ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸ್ಥಿರವಾಗಿದೆ. ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನಿಖರ ನೀರಿನ ಮಟ್ಟದ ಪೂರ್ಣ ವಿವರ ಇಲ್ಲಿದೆ.

1. ಕೆಆರ್‌ಎಸ್ ಜಲಾಶಯ

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 110.20 ಅಡಿ
  • ಸಂಗ್ರಹ ಸಾಮರ್ಥ್ಯ: 31.923 TMC
  • ಒಳಹರಿವು: 10,028 ಕ್ಯೂಸೆಕ್
  • ನಿನ್ನೆ 17,427 ಕ್ಯೂಸೆಕ್ ಇತ್ತು

2. ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ: 2,922 ಅಡಿ (37 TMC)
  • ಇಂದಿನ ನೀರಿನ ಮಟ್ಟ: 2,913.94 ಅಡಿ (29.788 TMC)
  • ಒಳಹರಿವು: 2,040 ಕ್ಯೂಸೆಕ್
  • ಹೊರಹರಿವು: ನದಿಗೆ 1,800 ಕ್ಯೂಸೆಕ್
  • ಕಾಲುವೆಗೆ 3,700 ಕ್ಯೂಸೆಕ್

ಕಳೆದ ವರ್ಷ ಇದೇ ದಿನ: 2,921.78 ಅಡಿ, ಸಂಗ್ರಹ: 36.890 TMC

3. ಆಲಮಟ್ಟಿ ಡ್ಯಾಂ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.58 ಮೀಟರ್
  • ಒಳಹರಿವು:26,883 ಕ್ಯೂಸೆಕ್
  • ಹೊರಹರಿವು: 26,883 ಕ್ಯೂಸೆಕ್

4. ಬಸವಸಾಗರ ಜಲಾಶಯ

  • ಗರಿಷ್ಠ ಮಟ್ಟ: 492.25 ಮೀಟರ್
  • ಇಂದಿನ ನೀರಿನ ಮಟ್ಟ:492.22 ಮೀಟರ್
  • ಒಳಹರಿವು: 24,000 ಕ್ಯೂಸೆಕ್
  • ಹೊರಹರಿವು:19,000 ಕ್ಯೂಸೆಕ್

5. ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84.00 ಅಡಿ
  • ಇಂದಿನ ನೀರಿನ ಮಟ್ಟ: 72.46 ಅಡಿ
  • ಇಂದಿನ ಸಂಗ್ರಹ: 12.92 TMC (ಲೈವ್ ಸ್ಟೋರೇಜ್: 3.11 TMC)
  • ಒಟ್ಟು ಹೊರಹರಿವು: 7,760 ಕ್ಯೂಸೆಕ್
  • ದಾಖಲಾದ ಮಳೆ: 12 ಮಿ.ಮೀ

ಇದನ್ನೂ ಓದಿ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಗಣನೀಯವಾಗಿ ತಗ್ಗಿದ ನೀರಿನ ಮಟ್ಟ: ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಆತಂಕ

6. ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ 0 ಇಂಚು (71.535 TMC)
  • ಇಂದಿನ ನೀರಿನ ಮಟ್ಟ: 177 ಅಡಿ 0 ಇಂಚು (2,148.91 ಸಮುದ್ರ ಮಟ್ಟದಿಂದ)
  • ಇಂದಿನ ಸಂಗ್ರಹ: 60.663 TMC
  • ಒಳಹರಿವು: 4,640 ಕ್ಯೂಸೆಕ್
  • ಹೊರಹರಿವು: 207 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ ಜಲಮಟ್ಟ: 184 ಅಡಿ 10 ಇಂಚು

7. ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1,819 ಅಡಿ
  • ಇಂದಿನ ನೀರಿನ ಮಟ್ಟ: 1,797.40 ಅಡಿ (59.14%)
  • ಇಂದಿನ ಏರಿಕೆ: 0.20 ಅಡಿ
  • ಒಳಹರಿವು: 8,955 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ಜಲಮಟ್ಟ: 1,817.70 ಅಡಿ ಇತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us