- TV9 Kannada Photo gallery Cricket photos Shubman Gill on India's Draw vs Sri Lanka: Positives Amid WTC Final Race Setback
IND vs SL: ಕೊಲಂಬೊ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಲು ಕಾರಣ ತಿಳಿಸಿದ ಗಿಲ್
Shubman Gill on India's Draw vs Sri Lanka: ಭಾರತ-ಶ್ರೀಲಂಕಾ 2ನೇ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿದೆ. ಗೆಲ್ಲಬೇಕಿದ್ದ ಪಂದ್ಯ ಕೈತಪ್ಪಿದ್ದರಿಂದ WTC ಫೈನಲ್ ರೇಸ್‌ನಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಎದುರಾಳಿಗಳ ಉತ್ತಮ ಪ್ರದರ್ಶನ ಮತ್ತು ಅವರ ಅದೃಷ್ಟ ಡ್ರಾಗೆ ಕಾರಣ ಎಂದು ನಾಯಕ ಶುಭ್ಮನ್ ಗಿಲ್ ಹೇಳಿದ್ದಾರೆ. ಆದಾಗ್ಯೂ, ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್ ಹಾಗೂ ಬೌಲರ್‌ಗಳ ಪ್ರದರ್ಶನ ಸಕಾರಾತ್ಮಕ ಅಂಶಗಳಾಗಿವೆ ಎಂದಿದ್ದಾರೆ.
Updated on: Aug 27, 2026 | 7:06 PM

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ವಾಸ್ತವವಾಗಿ, ನಾಲ್ಕನೇ ದಿನದಂದು, ಭಾರತ ಈ ಪಂದ್ಯವನ್ನು ಆರಾಮವಾಗಿ ಗೆಲ್ಲುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅದು ಆಗಲಿಲ್ಲ. ಸೋನಲ್ ದಿನುಷಾ ಅವರ ಶತಕದಿಂದಾಗಿ ಭಾರತದ ಗೆಲುವಿನ ಕನಸು ಭಗ್ನಗೊಂಡಿತು. ಕೊನೆಯ ದಿನದಂದು ಶ್ರೀಲಂಕಾದ 4 ವಿಕೆಟ್ಗಳನ್ನು ಉರುಳಿಸಲು ಟೀಂ ಇಂಡಿಯಾ ವಿಫಲವಾಯಿತು. ಇದು ತಂಡವನ್ನು ಗೆಲುವಿಗೆ ಅಡ್ಡಿಯಾಯಿತು(PC-PTI).

ಸುಲಭವಾಗಿ ಗೆಲ್ಲುವ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು, ಟೀಂ ಇಂಡಿಯಾಕ್ಕೆ ಡಬ್ಲ್ಯೂಟಿಸಿ ಫೈನಲ್ ರೇಸ್‌ನಲ್ಲಿ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಎಡವಲು ಹಲವು ಕಾರಣಗಳಿವೆ. ಆದರೆ ಆ ಎಲ್ಲಾ ಕಾರಣಗಳನ್ನು ಮರೆ ಮಾಚಿದ ಟೀಂ ಇಂಡಿಯಾ ನಾಯಕ ಗಿಲ್, ಈ ಪಂದ್ಯ ಡ್ರಾಗೊಳ್ಳಲು ಕಾರಣವೇನು ಎಂಬುದನ್ನು ವಿವರಿಸಿದ್ದು ಹೀಗೆ(PC-PTI).

ಈ ಪಂದ್ಯದಲ್ಲಿ ಫಲಿತಾಂಶವನ್ನು ಪಡೆಯಲು ನಾವು ವಿಭಿನ್ನವಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಸತತ ಮೂರು ದಿನಗಳ ಕಾಲ ಸುಮಾರು 250 ಓವರ್‌ಗಳನ್ನು ಫೀಲ್ಡಿಂಗ್ ಮಾಡಿ ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ ಆತಿಥೇಯರು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ತಂಡದ ಬ್ಯಾಟ್ಸ್‌ಮನ್‌ಗಳು ತುಂಬಾ ಚೆನ್ನಾಗಿ ಆಡಿದರು. ಅಲ್ಲದೆ ಅವರ ಕಡೆ ಸ್ವಲ್ಪ ಅದೃಷ್ಟವಿತ್ತು ಎಂದು ನಾನು ಭಾವಿಸುತ್ತೇನೆ(PC-PTI).

ಆದ್ದರಿಂದ ನಮಗೆ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದಾಗ್ಯೂ ಈ ಪಂದ್ಯದಿಂದ ನಮಗೆ ಬಹಳಷ್ಟು ಸಕಾರಾತ್ಮಕ ಅಂಶಗಳು ಇದ್ದವು. ಇದರಲ್ಲಿ ಎದುರಾಳಿಗಳಿಂದ ಕಲಿಯುವುದೂ ಸಹ ಸೇರಿದೆ. ಎದುರಾಳಿ ತಂಡ ಒತ್ತಡದಲ್ಲಿದ್ದರೂ ಕೂಡ ಅದರಿಂದ ಚೇತರಿಸಿಕೊಂಡ ರೀತಿ ನೋಡಲು ಅದ್ಭುತವಾಗಿತ್ತು. ಆದರೆ ಈ ಸರಣಿಯಲ್ಲಿ ನಮಗೆ ಬಹಳಷ್ಟು ಸಕಾರಾತ್ಮಕ ಅಂಶಗಳು ಇದ್ದವು(PC-PTI).

ದೇವದತ್ ಪಡಿಕ್ಕಲ್ ಅತ್ಯುತ್ತಮ ಪ್ರದರ್ಶನ ನೀಡಿದರು. ಕೆಎಲ್ ರಾಹುಲ್ ಅವರಿಂದಲೂ ಒಳ್ಳೇಯ ಪ್ರದರ್ಶನ ಮೂಡಿಬಂತು. ನಮ್ಮ ಬೌಲರ್‌ಗಳು ಕೂಡ ಸರಣಿಯೂದ್ದಕ್ಕೂ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು. ಹೀಗಾಗಿ ಈ ಸರಣಿಯಲ್ಲಿ ಸಿಕ್ಕ ಸಕಾರಾತ್ಮಕ ಅಂಶಗಳನ್ನು ತೆಗೆದುಕೊಂಡು ನಾವು ಮುಂದಿನ ಸರಣಿಗೆ ಸಿದ್ಧರಾಗುತ್ತೇವೆ ಎಂದು ಶುಭ್ಮನ್ ಗಿಲ್ ಹೇಳಿಕೆ ನೀಡಿದರು(PC-PTI).




