ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ವಿವಿಧ ಕಲಾ ತಂಡಗಳ ಸಮೇತ ಭವ್ಯ ಸ್ವಾಗತ
Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಗಜಪಡೆಗೆ ಅರಮನೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಅರಣ್ಯ ಭವನದಿಂದ ಆಗಮಿಸಿದ ಆನೆಗಳಿಗೆ ಸಾಂಪ್ರದಾಯಿಕ ಗಜಪೂಜೆ ನೆರವೇರಿಸಲಾಯಿತು. ಸಚಿವರಾದ ಡಾ. ಯತೀಂದ್ರ ಸಿದ್ಧರಾಮಯ್ಯ ಮತ್ತು ರಾಮಲಿಂಗಾರೆಡ್ಡಿ ಪೂಜೆಯಲ್ಲಿ ಭಾಗವಹಿಸಿ, ದಸರಾ ಮಹೋತ್ಸವದ ಶುಭಾರಂಭಕ್ಕೆ ಚಾಲನೆ ನೀಡಿದರು.
ಮೈಸೂರು, ಆಗಸ್ಟ್ 28: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಹಿನ್ನೆಲೆ ಸಿದ್ಧತೆಗಳು ಭರದಿಂದ ಸಾಗಿವೆ. ದಸರಾ ಜಗಪಡೆ ಜಯಮಾರ್ತಾಂಡ ದ್ವಾರ ಮೂಲಕ ಮೈಸೂರು ಅರಮನೆ ಪ್ರವೇಶಿಸಿದ್ದು, ಗಜಪಡೆಗೆ ಅರಮನೆ ಮಂಡಳಿಯಿಂದ ಸ್ವಾಗತಿಸಲಾಗಿದೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿವಿಧ ಕಲಾ ತಂಡಗಳ ಮೂಲಕ ಭರ್ಜರಿ ಸ್ವಾಗತ ಕೋರಿದ್ದಾರೆ. ಶಾಸಕರಾದ ಶ್ರೀವತ್ಸ, ಜಿ.ಟಿ.ದೇವೇಗೌಡ, ಹರೀಶ್ ಗೌಡ, ಡಿಸಿ ಲಕ್ಷ್ಮೀಕಾಂತ ರೆಡ್ಡಿ, ಅರಣ್ಯಾಧಿಕಾರಿ ರವಿಶಂಕರ್, ಪ್ರಭುಗೌಡ ಸೇರಿ ಅಧಿಕಾರಿಗಳು, ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

