ಕಬಿನಿ ಡ್ಯಾಂ
ಮುಖ್ಯಾಂಶಗಳು
- ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ ಮಟ್ಟದ ಸನ್ನಿಹಿತ ನೀರಿನ ಸಂಗ್ರಹ ದಾಖಲಾಗಿದೆ.
- ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಒಟ್ಟು ಸಂಗ್ರಹ 24.901 ಟಿಎಂಸಿಗೆ ತಲುಪಿದೆ.
- ಕಬಿನಿ ಜಲಾಶಯದ ಜಲಾನಯನ ಪ್ರದೇಶದಲ್ಲಿ 20 ಮಿ.ಮೀ ಮಳೆ ದಾಖಲಾಗಿದೆ.
ಬೆಂಗಳೂರು, ಅಕ್ಟೋಬರ್ 07: ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಕೆಆರ್‌ಎಸ್ ಹಾಗೂ ಕಬಿನಿ ಡ್ಯಾಂಗಳಲ್ಲಿ ಅಕ್ಟೋಬರ್ 7ರ ಬುಧವಾರದ ವೇಳೆಗೆ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಪ್ರಮಾಣದಲ್ಲಿ ಏರಿಳಿತ ವರದಿಯಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ ಮಟ್ಟದ ಸನ್ನಿಹಿತ ಸಂಗ್ರಹವಿದ್ದರೆ, ಕಾವೇರಿ ಕೊಳ್ಳದ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಧಾರಣ ಮಟ್ಟದಲ್ಲಿದೆ.
ಆಲಮಟ್ಟಿ ಜಲಾಶಯ
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಜಲಾಶಯದ ಪ್ರಸ್ತುತ ವಿವರ:
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 518.25 ಮೀಟರ್
- ಒಳಹರಿವು: ಇಲ್ಲ
- ಹೊರಹರಿವು: 11,192 ಕ್ಯೂಸೆಕ್
ಕೆಆರ್‌ಎಸ್ ಜಲಾಶಯ
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದ ಇಂದಿನ (ಅಕ್ಟೋಬರ್ 7, ಬೆಳಿಗ್ಗೆ 8:00 ಗಂಟೆಗೆ) ನೀರಿನ ಮಟ್ಟದ ವಿವರ:
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 102.58 ಅಡಿ
- ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ಒಟ್ಟು ಸಂಗ್ರಹ: 24.901 ಟಿಎಂಸಿ
- ಲೈವ್ ಸ್ಟೋರೇಜ್ (ಬಳಕೆ ಪ್ರಮಾಣ): 16.522 ಟಿಎಂಸಿ
- ಒಳಹರಿವು: 751 ಕ್ಯೂಸೆಕ್
- ಹೊರಹರಿವು: 2,529 ಕ್ಯೂಸೆಕ್ (ನಾಲೆ ಮತ್ತು ಕುಡಿಯುವ ನೀರು ಸೇರಿ)
ಕಬಿನಿ ಜಲಾಶಯ
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಇಂದಿನ ಸ್ಥಿಗತಿ:
- ಗರಿಷ್ಠ ಮಟ್ಟ: 84 ಅಡಿ
- ಇಂದಿನ ನೀರಿನ ಮಟ್ಟ: 68.16 ಅಡಿ
- ಒಟ್ಟು ಸಂಗ್ರಹ ಸಾಮರ್ಥ್ಯ: 10.80 ಟಿಎಂಸಿ
- ಲೈವ್ ಸ್ಟೋರೇಜ್: 0.99 ಟಿಎಂಸಿ
- ಒಳಹರಿವು: 1,100 ಕ್ಯೂಸೆಕ್ಹೊ
- ರಹರಿವು: 1,300 ಕ್ಯೂಸೆಕ್ (ನದಿಗೆ: 500 ಕ್ಯೂಸೆಕ್, ಬಲದಂಡೆ ನಾಲೆಗೆ: 800 ಕ್ಯೂಸೆಕ್, ಎಡದಂಡೆ ನಾಲೆಗೆ: 0 ಕ್ಯೂಸೆಕ್)
ಕಳೆದ 24 ಗಂಟೆಗಳಲ್ಲಿ ಜಲಾಶಯದ ಜಲಾನಯನ ಪ್ರದೇಶದಲ್ಲಿ 20 ಮಿ.ಮೀ ಮಳೆ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ