ತುಂಗಭದ್ರಾ ಜಲಾಶಯ
ಮುಖ್ಯಾಂಶಗಳು
- ಕಾವೇರಿ ಜಲಾನಯನದಲ್ಲಿ ಮಳೆ ತಗ್ಗಿ ಕೆಆರ್‌ಎಸ್ ನೀರಿನ ಮಟ್ಟ ಕುಸಿದಿದೆ.
- ಆಲಮಟ್ಟಿ ಹಾಗೂ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
- ಕಬಿನಿ ಅಣೆಕಟ್ಟಿನ ನೀರಿನ ಮಟ್ಟದಲ್ಲಿ ಮಾತ್ರ ಅಲ್ಪ ಏರಿಕೆ ಕಂಡುಬಂದಿದೆ.
ಬೆಂಗಳೂರು, ಅಕ್ಟೋಬರ್ 28: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಆಲಮಟ್ಟಿ ಹಾಗೂ ತುಂಗಭದ್ರಾ ಜಲಾಶಯಗಳಲ್ಲಿ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಮಾತ್ರ ಅಲ್ಪ ಪ್ರಮಾಣದ ಏರಿಕೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ವಿವರಣೆ ಇಲ್ಲಿದೆ.
1. ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ)
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 516.09 ಮೀಟರ್
- ಒಳಹರಿವು: ಇಲ್ಲ
- ಹೊರಹರಿವು: 4,931 ಕ್ಯೂಸೆಕ್
2. ತುಂಗಭದ್ರಾ ಜಲಾಶಯ
- ಗರಿಷ್ಠ ಮಟ್ಟ (F.R.L): 1633.00 ಅಡಿ
- ಇಂದಿನ ನೀರಿನ ಮಟ್ಟ: 1613.243 ಅಡಿ
- ಪ್ರಸ್ತುತ ಸಂಗ್ರಹ: 44.377 ಟಿಎಂಸಿ (ಒಟ್ಟು ಸಾಮರ್ಥ್ಯ: 105.788 ಟಿಎಂಸಿ)
- ಒಳಹರಿವು: ಇಲ್ಲ
- ಹೊರಹರಿವು: 9,605 ಕ್ಯೂಸೆಕ್ (ಒಟ್ಟು ನಾಲೆ ಮತ್ತು ನದೆಗೆ)
3. ಕೆ.ಆರ್.ಎಸ್ ಜಲಾಶಯ
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 104.28 ಅಡಿ
- ಪ್ರಸ್ತುತ ಸಂಗ್ರಹ: 26.354 ಟಿಎಂಸಿ
- ಒಳಹರಿವು: 2,486 ಕ್ಯೂಸೆಕ್
- ಹೊರಹರಿವು: 3,339 ಕ್ಯೂಸೆಕ್
4. ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 19.52 ಟಿಎಂಸಿ
- ಇಂದಿನ ನೀರಿನ ಮಟ್ಟ: 73.42 ಅಡಿ
- ಪ್ರಸ್ತುತ ಸಂಗ್ರಹ: 13.42 ಟಿಎಂಸಿ (ಲಭ್ಯವಿರುವ ನೀರು: 3.61 ಟಿಎಂಸಿ)
- ಒಳಹರಿವು: 2,128 ಕ್ಯೂಸೆಕ್
- ಹೊರಹರಿವು: 500 ಕ್ಯೂಸೆಕ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ