ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಕೆಆರ್‌ಎಸ್, ಆಲಮಟ್ಟಿ ಸೇರಿದಂತೆ ಪ್ರಮುಖ ಡ್ಯಾಮ್​ಗಳ ನೀರಿನ ಮಟ್ಟ ಇಲ್ಲಿದೆ

ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 22) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಆಲಮಟ್ಟಿ, ಹೇಮಾವತಿ ಹಾಗೂ ಕಬಿನಿ ಡ್ಯಾಂ ಸಂಪೂರ್ಣ ನೀರಿನ ಮಟ್ಟದ ಇಂದಿನ ವರದಿ ಇಲ್ಲಿದೆ. ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರದ ಜಲಾಶಯಗಳ ಪ್ರಸ್ತುತ ನೀರಿನ ಸಂಗ್ರಹ, ಒಳಹರಿವು ಹಾಗೂ ನದಿ-ಕಾಲುವೆಗಳಿಗೆ ಬಿಡಲಾಗುತ್ತಿರುವ ಹೊರಹರಿವಿನ ಸಂಪೂರ್ಣ ಅಂಕಿಅಂಶಗಳ ವಿವರ ಇಲ್ಲಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಕೆಆರ್‌ಎಸ್, ಆಲಮಟ್ಟಿ ಸೇರಿದಂತೆ ಪ್ರಮುಖ ಡ್ಯಾಮ್​ಗಳ ನೀರಿನ ಮಟ್ಟ ಇಲ್ಲಿದೆ
ಹೇಮಾವತಿ ಜಲಾಶಯ
Image Credit source: Trawell.in

Updated on: Sep 22, 2026 | 12:44 PM

ಮುಖ್ಯಾಂಶಗಳು

  • ಕೆಆರ್‌ಎಸ್ ಜಲಾಶಯದ ಪ್ರಸ್ತುತ ನೀರಿನ ಮಟ್ಟ 105.90 ಅಡಿ ದಾಖಲಾಗಿದೆ.
  • ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ 15,058 ಕ್ಯೂಸೆಕ್ ನೀರು ಹೊರಹರಿವು.
  • ಹೇಮಾವತಿ ಹಾಗೂ ಕಬಿನಿ ಡ್ಯಾಂಗಳಲ್ಲಿ ಒಳಹರಿವು ಕ್ಷೀಣಿಸಿ ಸಂಗ್ರಹ ಕುಸಿತ.

ಬೆಂಗಳೂರು, ಸೆಪ್ಟೆಂಬರ್ 22: ರಾಜ್ಯಾದ್ಯಂತ ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ವಿವರಗಳು ಲಭ್ಯವಾಗಿವೆ. ಸೆಪ್ಟೆಂಬರ್ 22ರ ವರದಿಯಂತೆ ಕೆಆರ್‌ಎಸ್, ಆಲಮಟ್ಟಿ, ಹೇಮಾವತಿ ಹಾಗೂ ಕಬಿನಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹಾಗೂ ನದಿ-ಕಾಲುವೆಗಳಿಗೆ ಹರಿಸಲಾಗುತ್ತಿರುವ ನೀರಿನ ಸಂಪೂರ್ಣ ಅಂಕಿಅಂಶಗಳು ಹೀಗಿವೆ.

ಕೆ.ಆರ್.ಸಾಗರ ಜಲಾಶಯ

  • ಇಂದಿನ ನೀರಿನ ಮಟ್ಟ: 105.90 ಅಡಿ
  • ಒಳಹರಿವು: 4,433 ಕ್ಯೂಸೆಕ್
  • ಹೊರಹರಿವು: 3,880 ಕ್ಯೂಸೆಕ್
  • ನೀರಿನ ಸಂಗ್ರಹ: 27.797 ಟಿಎಂಸಿ

ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.08 ಮೀಟರ್
  • ಒಳಹರಿವು: ಇಲ್ಲ
  • ಹೊರಹರಿವು: 15,058 ಕ್ಯೂಸೆಕ್

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ: 2,922 ಅಡಿ (37.00 ಟಿಎಂಸಿ)
  • ಇಂದಿನ ನೀರಿನ ಮಟ್ಟ: 2,892.65 ಅಡಿ (15.453 ಟಿಎಂಸಿ)
  • ಒಳಹರಿವು: 1,069 ಕ್ಯೂಸೆಕ್
  • ಹೊರಹರಿವು: ನದಿಗೆ 2,290 ಕ್ಯೂಸೆಕ್ , ಕಾಲುವೆಗೆ 5,450 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 2,919.60 ಅಡಿ – 34.779 ಟಿಎಂಸಿ ಇತ್ತು

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84.00 ಅಡಿ (19.52 ಟಿಎಂಸಿ)
  • ಇಂದಿನ ನೀರಿನ ಮಟ್ಟ: 68.62 ಅಡಿ
  • ಇಂದಿನ ಸಂಗ್ರಹ: 11.01 ಟಿಎಂಸಿ (ಲೈವ್ ಕ್ಯಾಪ್: 1.20 ಟಿಎಂಸಿ)
  • ಒಳಹರಿವು: 783 ಕ್ಯೂಸೆಕ್
  • ಹೊರಹರಿವು: ನದಿಗೆ 583 ಕ್ಯೂಸೆಕ್ , ಕಾಲುವೆಗಳಿಗೆ 0 ಕ್ಯೂಸೆಕ್
  • ಮಳೆ ಪ್ರಮಾಣ: 3 ಮಿ.ಮೀ

ಬಸವಸಾಗರ ಜಲಾಶಯದ ನೀರಿನ ಮಟ್ಟ

  • ಗರಿಷ್ಟ ಮಟ್ಟ: 492.25 ಮೀಟರ್
  • ಇಂದಿನ ಮಟ್ಟ : 490.80 ಮೀಟರ್
  • ಒಳ ಹರಿವು: 12,202 ಕ್ಯೂಸೆಕ್
  • ಹೊರ ಹರಿವು : 12,202 ಕ್ಯೂಸೆಕ್

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us