‘ನನ್ನ ಗೆಳತಿ ನನ್ನ ಗೆಳತಿ’ ಖ್ಯಾತಿಯ ವೀರ ಸೈನಿಕ ಮಂಜುನಾಥ ಗಡಿಯಲ್ಲಿ ಹುತಾತ್ಮ

ದೇಶದ ರಕ್ಷಣೆಗೆ ನಿಂತ ಯೋಧರು ತಮ್ಮದೆಲ್ಲವನ್ನೂ ತ್ಯಾಗ ಮಾಡಿ, ಗಡಿ ಕಾಯುತ್ತಾರೆ. ಗುಂಡಿಗೆ ಎದೆಯೊಡ್ಡಿ ನಮ್ಮನ್ನೆಲ್ಲಾ ರಕ್ಷಿಸುವ ಸೈನಿಕರು ಹುತಾತ್ಮರಾದಾಗ ಎದುರಾಗುವ ದುಃಖ ಅಂತಿಂತದ್ದಲ್ಲ. ಹೀಗೆ ನಮ್ಮ ನಾಡಿನ ಸೈನಿಕರೊಬ್ಬರು ಪಾಪಿ ಉಗ್ರರ ಜೊತೆ ಸೆಣೆಸಾಡುತ್ತಾ ಕಣಿವೆಯಲ್ಲಿ ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ ತಮ್ಮ ಸುಖ, ಸಂತೋಷವನ್ನೆಲ್ಲ ಮರೆತು ವೈರಿಗಳ ವಿರುದ್ಧ ಹೋರಾಡುವ ವೀರಯೋಧರು ತಮ್ಮ ಕೆಲಸದ ಬಿಡುವಿನಲ್ಲಿ ಕೊಂಚ ರಿಲ್ಯಾಕ್ಸ್ ಆಗುವುದಕ್ಕೆ ಹಾಡು ನೃತ್ಯದ ಮೂಲಕ ತಮ್ಮ ಟ್ಯಾಲೆಂಟ್​ನ ತೋರ್ಪಡಿಸುತ್ತಾರೆ. ಅದೇ ರೀತಿ ಕೆಲದಿನಗಳ ಹಿಂದೆ ಸಾಮಾಜಿಕ ತಾಣಗಳಲ್ಲಿ […]

'ನನ್ನ ಗೆಳತಿ  ನನ್ನ ಗೆಳತಿ' ಖ್ಯಾತಿಯ ವೀರ ಸೈನಿಕ ಮಂಜುನಾಥ ಗಡಿಯಲ್ಲಿ ಹುತಾತ್ಮ
Follow us
ಸಾಧು ಶ್ರೀನಾಥ್​
|

Updated on:Oct 03, 2019 | 11:46 AM

ದೇಶದ ರಕ್ಷಣೆಗೆ ನಿಂತ ಯೋಧರು ತಮ್ಮದೆಲ್ಲವನ್ನೂ ತ್ಯಾಗ ಮಾಡಿ, ಗಡಿ ಕಾಯುತ್ತಾರೆ. ಗುಂಡಿಗೆ ಎದೆಯೊಡ್ಡಿ ನಮ್ಮನ್ನೆಲ್ಲಾ ರಕ್ಷಿಸುವ ಸೈನಿಕರು ಹುತಾತ್ಮರಾದಾಗ ಎದುರಾಗುವ ದುಃಖ ಅಂತಿಂತದ್ದಲ್ಲ. ಹೀಗೆ ನಮ್ಮ ನಾಡಿನ ಸೈನಿಕರೊಬ್ಬರು ಪಾಪಿ ಉಗ್ರರ ಜೊತೆ ಸೆಣೆಸಾಡುತ್ತಾ ಕಣಿವೆಯಲ್ಲಿ ಹುತಾತ್ಮರಾಗಿದ್ದಾರೆ.

ದೇಶಕ್ಕಾಗಿ ತಮ್ಮ ಸುಖ, ಸಂತೋಷವನ್ನೆಲ್ಲ ಮರೆತು ವೈರಿಗಳ ವಿರುದ್ಧ ಹೋರಾಡುವ ವೀರಯೋಧರು ತಮ್ಮ ಕೆಲಸದ ಬಿಡುವಿನಲ್ಲಿ ಕೊಂಚ ರಿಲ್ಯಾಕ್ಸ್ ಆಗುವುದಕ್ಕೆ ಹಾಡು ನೃತ್ಯದ ಮೂಲಕ ತಮ್ಮ ಟ್ಯಾಲೆಂಟ್​ನ ತೋರ್ಪಡಿಸುತ್ತಾರೆ. ಅದೇ ರೀತಿ ಕೆಲದಿನಗಳ ಹಿಂದೆ ಸಾಮಾಜಿಕ ತಾಣಗಳಲ್ಲಿ ಯೋಧರು ನನ್ನ ಗೆಳತಿ ನನ್ನ ಗೆಳತಿ ಎಂದು ಹಾಡಿದ ವೀಡಿಯೊ ವೈರಲ್ ಆಗಿತ್ತು. ಸೇನೆಯಲ್ಲಿರುವ ಕರ್ನಾಟಕದ ಯೋಧರು ಹಾಡಿದ ಈ ಜನಪದ ಗೀತೆಗೆ ಎಲ್ಲರೂ ಫಿದಾ ಆಗಿದ್ದರು. ಈ ಸಂತೋಷ ಎಲ್ಲೆಡೆ ಹಬ್ಬಿರುವಾಗಲೇ ದುರಂತದ ಸುದ್ದಿಯೊಂದು ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಅಂದು ಹಾಡಿಗೆ ದನಿಗೂಡಿಸಿದ್ದವರ ಪೈಕಿ ಯೋಧ ಮಂಜುನಾಥ ಹನುಮಂತಪ್ಪ ಓಲೇಕಾರ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ.

ಕಳೆದ 9ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಮಂಜುನಾಥ್, ಉಗ್ರರ ಜೊತೆ ಸೆಣೆಸಾಡುತ್ತಾ ಹುತಾತ್ಮರಾಗಿದ್ದಾರೆ. ಜಮ್ಮುಕಾಶ್ಮೀರದ ಗಡಿಯಲ್ಲಿದ್ದ ಯೋಧ ಮಂಜುನಾಥ ಹನುಮಂತಪ್ಪ ಓಲೇಕಾರ ಸಾವಿನ ಸುದ್ದಿ ಕೇಳಿ ಇಡೀ ವೀರಾಪುರ ಶೋಕ ಸಾಗರದಲ್ಲಿ ಮುಳುಗಿದ್ದು, ಹುಬ್ಬಳ್ಳಿ ತಹಶೀಲ್ದಾರ್ ಸಂಗಪ್ಪ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ದೇಶ ಕಾಯಲು ಹೋದ ಯೋಧ ಪಾಪಿ ಉಗ್ರರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾಗಿದ್ದು ದುರಂತದ ಸಂಗತಿ. ಮಗನನ್ನು ಕಳೆದುಕೊಂಡಿರುವ ಮಂಜುನಾಥ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Published On - 11:42 am, Thu, 3 October 19

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ