ದಕ್ಷಿಣ ಭಾರತದ ಅತಿ ದೊಡ್ಡ ಬೆಂಗಳೂರು -ಚೆನ್ನೈ ಎಕ್ಸ್‌ಪ್ರೆಸ್ ವೇ ಸಂಚಾರ ಮುಕ್ತ
ದಕ್ಷಿಣ ಭಾರತದ ಅತಿದೊಡ್ಡ ಎಕ್ಸ್‌ಪ್ರೆಸ್ ವೇನಲ್ಲಿ ಒಂದಾಗಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಮುಕ್ತವಾಗಿದೆ. ಮೂರು ರಾಜ್ಯಗಳನ್ನ ಒಳಗೊಂಡ ಎಕ್ಸ್‌ಪ್ರೆಸ್ ವೇ ಮಾರ್ಗ ಇದಾಗಿದ್ದು, ಕರ್ನಾಟಕ ರಾಜ್ಯ ಭಾಗದ 71 ಕಿಲೋ ಮೀಟರ್ ಮಾರ್ಗದ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದೆ. ಇನ್ನು ಈ ಎಕ್ಸ್ಪ್ರೆಸ್ವೇ ಎಷ್ಟು ಕಿಲೋ ಮೀಟರ್ ಇದೆ? ಯಾವ ಮಾರ್ಗದಿಂದ ಚೆನ್ನೈ ತಲುಪಲಿದೆ ಎನ್ನುವ ವಿವರ ಇಲ್ಲಿದೆ,

ಬೆಂಗಳೂರು, (ಫೆಬ್ರವರಿ 25): ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಮುಕ್ತವಾಗಿದೆ. ಮಾರ್ಗಸೂಚಿ ಫಲಕಗಳು, ನಾಮಫಲಕಗಳು, ಡಿಜಿಟಲ್ ಫಲಕಗಳು ಸೇರಿದಂತೆ ಕೆಲಸಗಳು ಮುಗಿದಿದ್ದು, ತಾತ್ಕಾಲಿಕವಾಗಿ ಟೋಲ್ ಇಲ್ಲದೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕರ್ನಾಟಕ ಭಾಗದ ಮಾರ್ಗದ ಕೆಲಸಗಳು ಸಂಪೂರ್ಣ ಹಿನ್ನೆಲೆ, ಸಂಚಾರಕ್ಕೆ ಮುಕ್ತವಾಗಿದೆ. ತಾತ್ಕಾಲಿಕವಾಗಿ ಟೋಲ್ ಇಲ್ಲದೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮೂರು ರಾಜ್ಯಗಳನ್ನ ಒಳಗೊಂಡ ಎಕ್ಸ್‌ಪ್ರೆಸ್ ವೇ ಮಾರ್ಗವಿದು. ಮಾರ್ಗಸೂಚಿ ಫಲಕಗಳು, ನಾಮಫಲಕಗಳು, ಡಿಜಿಟಲ್ ಫಲಕಗಳು ಸೇರಿದಂತೆ ರಾಜ್ಯ ಭಾಗದ 71 ಕಿ.ಮೀ ನ ಸಂಪೂರ್ಣ ಕಾರ್ಯ ಮುಕ್ತಾಯವಾಗಿದೆ.
ಹೊಸಕೋಟೆಯ ಇಂಟರ್ ಚೇಂಜ್‌ನಿಂದ ಚೆನ್ನೈವರೆಗೆ 280 ಕಿ.ಮೀ ಉದ್ದದ ಎಕ್ಸ್‌ಪ್ರೆಸ್ ವೇ ಇದಾಗಿದ್ದು, ಸದ್ಯ ಹೊಸಕೋಟೆ ಸ್ಯಾಟ್‌ಲೈಟ್ ರಿಂಗ್ ರಸ್ತೆಯಿಂದ ಆಂಧ್ರ ಗಡಿ ಸುಂದರಪಾಳ್ಯವರೆಗೆ ಸಂಚಾರಕ್ಕೆ ರಸ್ತೆ ರೆಡಿಯಾಗಿದೆ. ವೇಗದ ಮಿತಿ 100 ಕಿ.ಮೀಗೆ ಸೀಮಿತಗೊಳಿಸಲಾಗಿದೆ.
ಆಂಧ್ರಪ್ರದೇಶ, ತಮಿಳುನಾಡು ಭಾಗದಲ್ಲಿ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿ ಇನ್ನೂ ಮುಂದುವರೆದಿದೆ. ಈ ವರ್ಷಾಂತ್ಯಕ್ಕೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗುವ ಸಾಧ್ಯತೆ ಇದೆ. ಈ ಎಕ್ಸ್‌ಪ್ರೆಸ್ ವೇಗೆ ಕರ್ನಾಟಕದಲ್ಲಿ ಮಾಲೂರು, ಬಂಗಾರಪೇಟೆ ಮತ್ತು ಆಂಧ್ರ ಗಡಿ ಸುಂದರ ಪಾಳ್ಯದಲ್ಲಿ ಮೂರು ಇಂಟರ್ ಚೇಂಜ್‌ಗಳಿವೆ. ಸಂಪೂರ್ಣ ಕಾಮಗಾರಿ ಮುಕ್ತಾಯದ ಬಳಿಕ ಟೋಲ್ ಸಂಗ್ರಹ ಆರಂಭವಾಗುವ ಸಾಧ್ಯತೆ ಇದೆ.
ಇನ್ನೂ ಸ್ಥಳೀಯರು ಓಡಾಟ ಮಾಡುತ್ತಿದ್ದು, ಸದ್ಯಕ್ಕೆ ಟೋಲ್ ದರ ನಿಗದಿಪಡಿಸಿಲ್ಲ. ಸರ್ವೀಸ್ ರಸ್ತೆಗಳಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಸರ್ವೀಸ್ ರಸ್ತೆಗಳನ್ನು ನೀಡಿಲ್ಲ. ಯಾವುದೇ ಅಡಚಣೆಯಿಲ್ಲದೆ ಚೆನ್ನೈವರೆಗೆ ನೆಮ್ಮದಿಯಾಗಿ ಈ ರಸ್ತೆಯಲ್ಲಿ ಪ್ರಯಾಣಿಸಬಹುದು. ಮೂರ್ನಾಲ್ಕು ಗಂಟೆಗಳಲ್ಲಿ ಚೆನ್ನೈ ತಲುಪಬಹುದಾಗಿದೆ. ಹಾಗಾಗಿ ಬೇರೆ ಹೆದ್ದಾರಿಗಳಿಗೆ ಹೋಲಿಸಿದರೆ ಈ ರಸ್ತೆಯ ಟೋಲ್ ಶುಲ್ಕ ಕೂಡ ಅಧಿಕವಾಗಿರುವ ಸಾಧ್ಯತೆ ಹೆಚ್ಚಿದೆ.
ಒಟ್ಟಿನಲ್ಲಿ ಬೆಂಗಳೂರಿಂದ ಚೆನ್ನೈಗೆ ಹೋಗಬೇಕು ಅಂದರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಬೇಕಿತ್ತು, ಆದರೆ ಈ ಎಕ್ಸ್ಪ್ರೆಸ್ ವೇ ನಿಂದ ಮೂರ್ನಾಲ್ಕು ಗಂಟೆಗಳಲ್ಲಿ ಚೆನ್ನೈ ತಲುಪುವುದರಲ್ಲಿ ಅನುಮಾನವಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ