Karnataka Weather Forecast: ಕರಾವಳಿ, ಮಲೆನಾಡಲ್ಲಿ ಮುಂದುವರಿಯಲಿದೆ ಮಳೆ; ಸಕಲೇಶಪುರದ ಹೊಗದಹಳ್ಳದಲ್ಲಿ ದಾಖಲೆಯ ವರ್ಷಧಾರೆ

Monsoon 2026: ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಹಾಸನದ ಹೊಗದಹಳ್ಳದಲ್ಲಿ ದಾಖಲೆಯ ೧೯೬.೫ ಮಿ.ಮೀ ಮಳೆಯಾಗಿದೆ. ಘಟ್ಟ ಪ್ರದೇಶಗಳಲ್ಲಿ ಭೂಕುಸಿತದ ಎಚ್ಚರಿಕೆ ನೀಡಲಾಗಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಹಲವೆಡೆಯೂ ಗಾಳಿ ಮಳೆ ಸಾಧ್ಯತೆ ಅಂದಾಜಿಸಲಾಗಿದೆ.

Karnataka Weather Forecast: ಕರಾವಳಿ, ಮಲೆನಾಡಲ್ಲಿ ಮುಂದುವರಿಯಲಿದೆ ಮಳೆ; ಸಕಲೇಶಪುರದ ಹೊಗದಹಳ್ಳದಲ್ಲಿ ದಾಖಲೆಯ ವರ್ಷಧಾರೆ
ಮಳೆ
Image Credit source: Tv9 Kannada

Updated on: Jul 09, 2026 | 7:15 PM

ಮುಖ್ಯಾಂಶಗಳು

  • ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಾಳೆಯೂ ಮಳೆಯ ಮುನ್ನೆಚ್ಚರಿಕೆ
  • ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಎಂದ ಹವಾಮಾನ ಇಲಾಖೆ
  • ಗಂಟೆಗೆ 40-50 ಕಿಲೋ ಮೀಟರ್​​ ವೇಗದ ಗಾಳಿ ಜೊತೆ ಮಳೆ

ಬೆಂಗಳೂರು, ಜುಲೈ 09: ಕರ್ನಾಟಕದ ಹಲವೆಡೆ ನಾಳೆಯೂ ಮಳೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಕೊಂಚ ತಗ್ಗಿದೆಯಾದರೂ ಕೆಲ ದಿನಗಳ ಕಾಲ ವರ್ಷಧಾರೆ ಮುಂದುವರಿಯಲಿದೆ. ಗಂಟೆಗೆ 40-50 ಕಿಲೋ ಮೀಟರ್​​ ವೇಗದ ಗಾಳಿಯ ಜೊತೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಹಲವೆಡೆಯೂ ಗಾಳಿ ಮಳೆ ಸಾಧ್ಯತೆ ಅಂದಾಜಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಬಳ್ಳಾರಿಯಲ್ಲಿ ಸಾಧಾರಣ ಮಳೆ ಆಗಬಹುದು ಎನ್ನಲಾಗಿದೆ.

ಮುಂದಿನ 24 ಗಂಟೆಗಳ ಹವಾಮಾನ

ಉಳಿದಂತೆ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಇನ್ನೆರಡೇ ದಿನ ವರುಣನ ಅಬ್ಬರ, ಮತ್ತೆ ಮಳೆ ಬರಲ್ಲ; ಹವಾಮಾನ ಇಲಾಖೆಯಿಂದ ಮಹತ್ವದ ಮುನ್ಸೂಚನೆ

ಭೂಕುಸಿತದ ಬಗ್ಗೆ ಎಚ್ಚರಿಕೆ

ರಾಜ್ಯದ ಘಟ್ಟ ಪ್ರದೇಶಗಳಲ್ಲಿ ಜುಲೈ 9ರಿಂದ 12ರ ವರೆಗಿನ ಅವಧಿಯ ನಡುವೆ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಸಕಲೇಶಪುರದ ಹೊಗದಹಳ್ಳದಲ್ಲಿ ದಾಖಲೆಯ ಮಳೆ

ಹಾಸನದ ಸಕಲೇಶಪುರ ತಾಲೂಕಿನ ಹೊಗದಹಳ್ಳದಲ್ಲಿ ನಿನ್ನೆ ದಾಖಲೆಯ 196.5 ಮಿ.ಮೀ ಮಳೆಯಾಗಿದೆ. ಹಾಗೆಯೇ ಕೊಡಗಿನ ವಿರಾಜಪೇಟೆಯ ಬಿರುನಾನಿಯಲ್ಲಿ 190.5 ಮಿ.ಮೀ, ಚೊಕ್ಕಮಗಳೂರಿನ ಶೃಂಗೇರಿಯ ಬೇಗಾರಿನಲ್ಲಿ 112 ಮಿ.ಮೀ, ಶಿವಮೊಗ್ಗದ ತೀರ್ಥಹಳ್ಳಿಯ ಬಿದರಗೋಡಿನಲ್ಲಿ 100.5 ಮಿ.ಮೀ, ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಹಲಗೇರಿಯಲ್ಲಿ 94.5 ಮಿ.ಮೀ, ದಕ್ಷಿಣ ಕನ್ನಡದ ಮಂಗಳೂರಿನ ನೆಲ್ಲಿಕಾರಿನಲ್ಲಿ 78.5 ಮಿ.ಮೀ, ಬೆಳಗಾವಿಯ ಖಾನಾಪುರದ ಪಾರವಾಡದಲ್ಲಿ 76.5 ಮಿ.ಮೀ ಮಳೆ ಸುರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:03 pm, Thu, 9 July 26

Follow Us