ಜುಲೈ ತಿಂಗಳಲ್ಲಿ ಅಧಿಕ ಮಳೆಯಾದರೂ ರಾಜ್ಯದಲ್ಲಿ ಬತ್ತಿವೆ 478 ಕರೆಗಳು!!
ಜುಲೈ ತಿಂಗಳಿನಲ್ಲಿ ಯಥೇಚ್ಛವಾಗಿ ಮಳೆಯಾಗಿ ನದಿಗಳು ತುಂಬಿ ಹರಿದಿದ್ದು, ಪ್ರವಾಹದ ಆತಂಕವು ಎದುರಾಗಿತ್ತು. ಆದರೂ ಕೂಡ ರಾಜ್ಯದ ಒಣ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಮಹತ್ವದ ಪಾತ್ರ ವಹಿಸುವ ಕೆರೆಗಳು ತುಂಬಿಲ್ಲ.
ಬೆಂಗಳೂರು: ಜುಲೈ (July) ತಿಂಗಳಿನಲ್ಲಿ ಯಥೇಚ್ಛವಾಗಿ ಮಳೆಯಾಗಿ (Rain) ನದಿಗಳು ತುಂಬಿ ಹರಿದಿದ್ದು, ಪ್ರವಾಹದ ಆತಂಕವು ಎದುರಾಗಿತ್ತು. ಆದರೂ ಕೂಡ ರಾಜ್ಯದ ಒಣ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಮಹತ್ವದ ಪಾತ್ರ ವಹಿಸುವ ಕೆರೆಗಳು (Lake) ತುಂಬಿಲ್ಲ. 3,673 ಕೆರೆಗಳಲ್ಲಿ ಶೇ 18 ರಷ್ಟು ಕೆರೆಗಳು ಮಾತ್ರ ಅರ್ಧಕ್ಕಿಂತ ಹೆಚ್ಚು (ಶೇ50 ಕ್ಕಿಂತ ಹೆಚ್ಚು) ತುಂಬಿವೆ. 478 ಕೆರೆಗಳು ಸಂಪೂರ್ಣವಾಗಿ ಒಣಗಿವೆ. ಸುಮಾರು 2,534 ಕೆರೆಗಳಲ್ಲಿ ಶೇ.30ರಿಂದ ಶೇ.50ರಷ್ಟು ನೀರಿದ್ದು, ಶೇ.13ರಷ್ಟು ನೀರು ಖಾಲಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಾರು ವಿಳಂಬದಿಂದ ಜೂನ್ ಮತ್ತು ಜುಲೈ ಮೊದಲಾರ್ಧದಲ್ಲಿ ರಾಜ್ಯದಲ್ಲಿ ಶೇ.23 ರಷ್ಟು ಮಳೆ ಕೊರತೆ ಉಂಟಾಗಿತ್ತು. ಆದರೆ ಜುಲೈ ತಿಂಗಳ ದ್ವಿತೀಯಾರ್ಧದಲ್ಲಿ ಹೇರಳವಾದ ಮಳೆಯು ರಾಜ್ಯದಲ್ಲಿ ಶೇ3 ರಷ್ಟು ಹೆಚ್ಚು ಮಳೆಯಾಗಿತ್ತು.
ಈ ಅಂಕಿಅಂಶಗಳ ಪ್ರಕಾರ, ಕೆರೆಗಳಲ್ಲಿ ನೀರಿನ ಮಟ್ಟವು ಹೆಚ್ಚಿರಬೇಕಿತ್ತು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಉತ್ತಮವಾಗಿದೆ. ಆದರೆ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ಹೋಲಿಸಿದರೆ ಈ ಪ್ರದೇಶಗಳಲ್ಲಿನ ಕೆರೆಗಳು ಒಣಗಿವೆ ಎಂದು ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಕಳೆದ ಬಾರಿಗಿಂತ ಈ ವರ್ಷ ಆಲಮಟ್ಟಿಯಲ್ಲಿ ಹೆಚ್ಚು ನೀರು ಸಂಗ್ರಹ; ಆ.3ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ
ಅಣೆಕಟ್ಟುಗಳಲ್ಲಿನ ಕಳಪೆ ಶೇಖರಣಾ ನಿರ್ವಹಣೆ ಮತ್ತು ಪ್ರಮುಖ ನೀರಾವರಿ ಯೋಜನೆಗಳು ಮತ್ತು ಸಣ್ಣ ಜಲಮೂಲಗಳ ನಡುವಿನ ಸಂಪರ್ಕದ ಕೊರತೆ ಸೇರಿದಂತೆ ಅನೇಕ ಅಂಶಗಳೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆರೆಗಳ ಅತಿಕ್ರಮಣವೂ ಸಮಸ್ಯೆಗೆ ಕಾರಣವಾಗಿದೆ. ಅತಿಕ್ರಮಣಗಳು ಕೆರೆಗಳಿಗೆ ನೀರು ಹರಿದು ಹೋಗುವುದನ್ನು ಸ್ಥಗಿತಗೊಳಿಸಿರುವುದರಿಂದ ಹಠಾತ್ ಪ್ರವಾಹ ಉಂಟಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಮಾದರಿಯಲ್ಲಿನ ಬದಲಾವಣೆ ಮತ್ತು ಅತಿಯಾಗಿ ಬೋರ್ವೆಲ್ ಬಳಕೆ ಈ ಸಮಸ್ಯೆಯನ್ನು ಹೆಚ್ಚಿಸಿದೆ. ಸರ್ಕಾರವು ಒತ್ತುವರಿ ತೆರವುಗೊಳಿಸಬೇಕು ಮತ್ತು ಜಲಾಶಯಗಳಲ್ಲಿ ವೈಜ್ಞಾನಿಕ ನೀರಿನ ಸಂಗ್ರಹ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೇ ವಿಪತ್ತುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅಣೆಕಟ್ಟು, ನದಿ ಮತ್ತು ಜನರ ದಕ್ಷಿಣ ಏಷ್ಯಾ ನೆಟ್‌ವರ್ಕ್‌ನ (SANDRP) ಸಂಯೋಜಕ ಹಿಮಾಂಶು ಠಕ್ಕರ್ ಹೇಳಿದರು.
ರಾಯಚೂರಿನಂತಹ ಜಿಲ್ಲೆಗಳಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಪ್ರಮುಖ ಜಲಾಶಯಗಳಲ್ಲಿ ಸಂಗ್ರಹಣೆಯನ್ನು ಉತ್ತಮವಾಗಿ ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಮಾತ್ರ ಅಣೆಕಟ್ಟುಗಳಿಂದ ನೀರು ಬಿಡಲಾಗುತ್ತದೆ . ಆದರೆ, ಕಳೆದ ಮೂರು ವರ್ಷಗಳಲ್ಲಿ ಆಗಸ್ಟ್‌ನಲ್ಲಿ ಭಾರಿ ಮಳೆಯಾಗಿದ್ದು, ಈ ಬಾರಿಯು ಮಳೆಯಾಗುವ ನಿರೀಕ್ಷೆಯಿಂದ ಒಂದೇ ಬಾರಿಗೆ ಭಾರಿ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರವಾಗಿ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಅಗತ್ಯವಿರುವೆಡೆ ಲಿಫ್ಟ್ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸುತ್ತಿದ್ದೇವೆ’ ಎಂದು ಎಂದು ಸಣ್ಣ ನೀರಾವರಿ ಸಚಿವ ಎನ್ ಬೋಸ್ ರಾಜು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ