AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1000 ವರ್ಷದ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನ; ಎಲ್ಲಿ? ಯಾವಾಗ?

ಮೈಸೂರಲ್ಲಿ 1000 ವರ್ಷದ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನ ಪಡೆಯಬಹುದಾಗಿದೆ. ಈಗ ಮೈಸೂರಿನ ನಿವಾಸಿಗಳು ಅನಂತ ಶಕ್ತಿಯನ್ನು, ಶುದ್ಧತೆಯನ್ನು, ಆಶೀರ್ವಾದದ ಬಲವನ್ನು ಹೊತ್ತಿರುವ ಈ ದಿವ್ಯ ಲಿಂಗಗಳ ದಿವ್ಯ ಸಾನ್ನಿಧ್ಯವನ್ನು ಅನುಭವಿಸಬಹುದಾಗಿದೆ. ಇನ್ನು ಈ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನ ಎಲ್ಲಿ? ಯಾವಾಗ? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

1000 ವರ್ಷದ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನ; ಎಲ್ಲಿ? ಯಾವಾಗ?
Somnath Jyotirlinga
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: May 05, 2025 | 5:46 PM

Share

ಮೈಸೂರು, (ಮೇ 05): ಕಾಲಘಟ್ಟದಲ್ಲಿ ಕಳೆದು ಹೋಯಿತೆಂದೇ ಭಾವಿಸಲಾಗಿದ್ದ,ಸಾವಿರ ವರ್ಷಗಳ ನಂತರ ಮೂಲಭೂತ ಸೋಮನಾಥ ಜ್ಯೋತಿರ್ಲಿಂಗದ (somnath jyotirlinga) ಪವಿತ್ರ ಅವಶೇಷಗಳು ಈಗ ಮತ್ತೆ ಪ್ರತ್ಯಕ್ಷವಾಗಿವೆ. ಇದು ಐತಿಹಾಸಿಕವಾದ , ಅವಿಸ್ಮರಣೀಯವಾದ ಕ್ಷಣ. ಲಿಂಗಗಳ ರೂಪದಲ್ಲಿ ಮಾಡಲಾದ ಈ ದಿವ್ಯ ಅವಶೇಷಗಳನ್ನು ಮೈಸೂರು (Mysuru) ನಗರಿಗೆ ತರಲಾಗುವುದು. ನಾಳೆ(ಮೇ 6) ಸಂಜೆ 6 ಗಂಟೆಯಿಂದ ಜೆ.ಎಸ್.ಎಸ್ ಆಯುರ್ವೇದ ಕಾಲೇಜಿನ ಪಕ್ಕದಲ್ಲಿರುವ ಆರ್ಟ್ ಆಫ್ ಲಿವಿಂಗ್ ನ ಆಶ್ರಮದಲ್ಲಿ ಭಕ್ತರು ಬಂದು ಸೋಮನಾಥನ ದಿವ್ಯ ದರ್ಶನ ಪಡೆದು, ದೈವೀ ಕಂಪನಗಳನ್ನು ಅನುಭವಿಸಬಹುದಾಗಿದೆ. ನಾಳೆ (ಮಂಗಳವಾರ) ಸಂಜೆಯಿಂದ ಸಾರ್ವಜನಿಕರಿಗೆ ಪ್ರವೇಶವಿದ್ದು, ದರ್ಶನದ ನಂತರ ಪ್ರಸಾದ ವಿನಿಯೋಗವನ್ನು ಮಾಡಲಾಗುತ್ತದೆ.

ಸಾವಿರ ವರ್ಷಗಳ ನಂತರ ಪತ್ತೆಯಾಗಿದ್ದು ಹೇಗೆ?

1026 ಇಸವಿಯಲ್ಲಿ ಸೋಮನಾಥನ ದೇವಸ್ಥಾನವನ್ನು ಮಹಮ್ಮದ್ ಘಜ್ನಿಯು ನಾಶ ಮಾಡಿದ. ಆ ನಂತರ ಈ ಜ್ಯೋತಿರ್ಲಿಂಗವನ್ನು ಕೆಲವು ಅಗ್ನಿಹೋತ್ರಿ ಬ್ರಾಹ್ಮಣರು ಮೂಲಭೂತ ಸೋಮನಾಥ ಲಿಂಗದ ಅವಶೇಷಗಳನ್ನು ತಮ್ಮೊಡನೆ ಹೊತ್ತುಕೊಂಡು ತಮಿಳುನಾಡಿಗೆ ಬಂದರು. ಅದನ್ನು ಸಾವಿರ ವರ್ಷಗಳವರೆಗೆ ಗೌಪ್ಯವಾಗಿ ರಕ್ಷಿಸಿದರು.

ಪೀಳಿಗೆಯಿಂದ ಪೀಳಿಗೆಯವರೆಗೆ ಅತ್ಯಂತ ಭಕ್ತಿಯಿಂದ ಪಂಡಿತ ಸೀತಾರಾಮ ಶಾಸ್ತ್ರಿಯವರ ಕುಟುಂಬವು ಸೋಮನಾಥನ ಪವಿತ್ರ ಅವಶೇಷಗಳನ್ನು ರಕ್ಷಿಸುತ್ತಾ ಬಂದರು. ಕಂಚಿ ಶಂಕರಾಚಾರ್ಯರು ಶಾಸ್ತ್ರಿಗಳಿಗೆ, ಬೆಂಗಳೂರಿನಲ್ಲಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರ ಬಳಿಗೆ ಅದನ್ನು ತೆಗೆದುಕೊಂಡು ಹೋಗು. ಅವರು ನಿನಗೆ ಸಹಾಯ ಮಾಡುತ್ತಾರೆ ಎಂದು ನಿರ್ದೇಶನವನ್ನು ನೀಡಿದರು. ಈಗ ಮೈಸೂರಿನ ನಿವಾಸಿಗಳು ಅನಂತ ಶಕ್ತಿಯನ್ನು, ಶುದ್ಧತೆಯನ್ನು, ಆಶೀರ್ವಾದದ ಬಲವನ್ನು ಹೊತ್ತಿರುವ ಈ ದಿವ್ಯ ಲಿಂಗಗಳ ದಿವ್ಯ ಸಾನ್ನಿಧ್ಯವನ್ನು ಅನುಭವಿಸಬಹುದಾಗಿದೆ.

ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!