ಈ ಬಾರಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೆಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ, ಯಾವುದು ಗೊತ್ತಾ?
2025ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ 'ಮಿಲೆಟ್ಸ್ ಟು ಮೈಕ್ರೋಚಿಪ್' ಪರಿಕಲ್ಪನೆಯೊಂದಿಗೆ ಮಿಂಚಲಿದೆ. ರಾಜ್ಯದ ಕೃಷಿ ವೈವಿಧ್ಯತೆ (ಸಿರಿಧಾನ್ಯಗಳು) ಮತ್ತು ಮಾಹಿತಿ ತಂತ್ರಜ್ಞಾನದ ಪ್ರಗತಿಯನ್ನು ಇದು ಪ್ರದರ್ಶಿಸುತ್ತದೆ. ಆತ್ಮನಿರ್ಭರ ಭಾರತಕ್ಕೆ ಕರ್ನಾಟಕದ ಕೊಡುಗೆಯನ್ನು ಎತ್ತಿಹಿಡಿಯುವ ಈ ಟ್ಯಾಬ್ಲೋ, ಯಕ್ಷಗಾನ ಮತ್ತು ಕಂಸಾಳೆ ಕಲೆಯ ಅಂಶಗಳನ್ನು ಒಳಗೊಂಡಿದೆ. ಇದು ರಾಜ್ಯದ ಹೆಮ್ಮೆಯ ಪ್ರತೀಕವಾಗಿದೆ.

ದೆಹಲಿ, ಜ.21: ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಈ ಹಿಂದೆಯೂ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಹಲವಾರು ಬಾರಿ ಅವಕಾಶಗಳು ಸಿಕ್ಕಿತು. ಇದೀಗ ಮತ್ತೊಮ್ಮೆ ಕರ್ನಾಟಕಕ್ಕೆ ಅವಕಾಶ ಸಿಕ್ಕಿದೆ. ಈ ಬಾರಿ ವಿಶೇಷ ಸ್ತಬ್ಧಚಿತ್ರಗಳನ್ನು ಕರ್ನಾಟಕ ನೀಡಿಲಿದೆ. ಇದಕ್ಕೂ ಮುನ್ನ ಇದರ ಪರೇಡ್ ಅಭ್ಯಾಸಗಳು ನಡೆಯಲಿದೆ ಎಂದು ಹೇಳಲಾಗಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಈ ಪರೇಡ್ ನಡೆಯಲಿದೆ. ಈ ಬಾರಿ ಟ್ಯಾಬ್ಲೋ ಮಿಲೆಟ್ಸ್ ಟು ಮೈಕ್ರೋಚಿಪ್ ಪರಿಕಲ್ಪನೆಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಮಿಲೆಟ್ಸ್ ಟು ಮೈಕ್ರೋಚಿಪ್ ಸ್ತಬ್ಧಚಿತ್ರದ ಮೂಲಕ ಕರ್ನಾಟಕದ ಬೆಳೆಗಳಾದ ರಾಗಿ, ಜೋಳ, ನವಣೆ, ಸಜ್ಜೆ ಬೆಳೆಯ ಬಗ್ಗೆ ಈ ಟ್ಯಾಬ್ಲೋದಲ್ಲಿ ಪ್ರದರ್ಶನ ಮಾಡಲಾಗುವುದು. ಇದರ ಜತೆಗೆ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಬಗ್ಗೆಯೂ ಟ್ಯಾಬ್ಲೋದಲ್ಲಿ ಮಾಹಿತಿ ನೀಡಲಾಗುವುದು. ಈ ಮೂಲಕ ಆತ್ಮನಿರ್ಭರ ಭಾರತದ ಹಾದಿ ಸ್ವಾವಲಂಬನೆ ಬಗ್ಗೆ ಮಾಹಿತಿ ನೀಡಲಾಗುವುದು. ಇದು ರಾಜ್ಯಗಳಿಂದ ಪ್ರಾರಂಭಾಗಲಿದೆ ಎಂಬ ಉದ್ದೇಶವನ್ನು ಕೂಡ ಈ ಟ್ಯಾಬ್ಲೋದಲ್ಲಿ ತಿಳಿಸಲಾಗುವುದು. ಆತ್ಮನಿರ್ಭರ ಭಾರತಕ್ಕೆ ಕರ್ನಾಟಕದ ಕೊಡುಗೆ ಏನು ಎಂಬ ಬಗ್ಗೆ ಇಲ್ಲಿ ತಿಳಸಲಾಗುವುದು. ಕರ್ನಾಟಕದ ವಿಶಿಷ್ಟ ಕಲೆಗಳಾದ ಯಕ್ಷಗಾನ ಅಥವಾ ಕಂಸಾಳೆ ನೃತ್ಯದ ಲೋಗೋಗಳನ್ನು ಸ್ತಬ್ಧಚಿತ್ರದ ವಿವಿಧ ಭಾಗಗಳಲ್ಲಿ ಅಳವಡಿಸಲಾಗುವುದು.
ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?
ಖ್ಯಾತ ಕಲಾ ನಿರ್ದೇಶಕರು ಮತ್ತು ರಾಜ್ಯದ ಹಿರಿಯ ಕಲಾವಿದರು ಈ ಸ್ತಬ್ಧಚಿತ್ರದ ವಿನ್ಯಾಸ ಮಾಡಿದ್ದಾರೆ. ಇದರ ಜತೆಗೆ ಈ ಸ್ತಬ್ಧಚಿತ್ರಕ್ಕೆ ಹಿನ್ನಲೆ ಸಂಗೀತವಾಗಿ ಕರ್ನಾಟಕದ ಜನಪದ ಶೈಲಿಯ ಸಂಗೀತ ಮತ್ತು ನಾಡಗೀತೆಯ ಧಾಟಿಯನ್ನು ಬಳಸಲಾಗುತ್ತದೆ. ಕಳೆದ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೊತ್ಸವ ಪರೇಡ್‌ನಲ್ಲಿ ಐತಿಹಾಸಿಕ ನಗರವಾದ ಲಕ್ಕುಂಡಿಯ ವೈಶಿಷ್ಟ್ಯಪೂರ್ಣ ಹಾಗೂ ಕಲಾತ್ಮಕ ದೇವಾಲಯಗಳ ಸ್ತಬ್ಧ ಚಿತ್ರ ಗಮನ ಸೆಳೆದಿತ್ತು. ಕರ್ನಾಟಕವು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸತತವಾಗಿ ಭಾಗವಹಿಸುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. 2023 ರಲ್ಲಿ ‘ನಾರಿ ಶಕ್ತಿ’ ಅಡಿಯಲ್ಲಿ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಮತ್ತು ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿತ್ತು. 2024ರಲ್ಲಿ ‘ಮೈಸೂರು ಪೇಟ’ ಮತ್ತು ಸಾಂಸ್ಕೃತಿಕ ಪರಂಪರೆಯ ಸ್ತಬ್ಧಚಿತ್ರ ಪ್ರದರ್ಶಿಸಲಾಗಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ