AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಏರಿಕೆ: ಆನೆ ಕಾರಿಡಾರ್ ನೀತಿಗೆ ಕ್ಯಾಬಿನೆಟ್ ಅಂಕಿತ

ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 700ರ ಗಡಿ ದಾಟುವ ನಿರೀಕ್ಷೆಯಿದ್ದು, ರಾಜ್ಯ ವನ್ಯಜೀವಿ ಸಂರಕ್ಷಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಆನೆ ಕಾರಿಡಾರ್ ನೀತಿ, ಹಾವು ರಕ್ಷಕರಿಗೆ ನಿಯಮಾವಳಿ ಹಾಗೂ ನಗರಗಳಲ್ಲಿ ಟ್ರೀ ಪಾರ್ಕ್‌ಗಳ ನಿರ್ಮಾಣದಂತಹ ಹೊಸ ಯೋಜನೆಗಳು ಪರಿಸರ ಸಮತೋಲನ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ರಾಜ್ಯದ ಹಸಿರು ಹೊದಿಕೆಯನ್ನು ಹೆಚ್ಚಿಸುವ ಗುರಿಯೂ ಇದೆ.

ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಏರಿಕೆ: ಆನೆ ಕಾರಿಡಾರ್ ನೀತಿಗೆ ಕ್ಯಾಬಿನೆಟ್ ಅಂಕಿತ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 09, 2026 | 4:45 PM

Share

ಬೆಂಗಳೂರು, ಅ.9: ರಾಜ್ಯದಲ್ಲಿ ನಡೆಸಲಾದ ಆಂತರಿಕ ತನಿಖೆ ಹಾಗೂ ವನ್ಯಜೀವಿ ಗಣತಿಯ ಪ್ರಕಾರ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ‘ಅಖಿಲ ಭಾರತ ಹುಲಿ ಗಣತಿ ವರದಿ’ಯಲ್ಲಿ (All India Tiger Estimation Report) ಈ ಸಂಖ್ಯೆ 700 ರ ಗಡಿ ದಾಟುವ ನಿರೀಕ್ಷೆಯಿದೆ. 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ‘ಬೆಂಗಾಳೂರು ಕಾನ್‌ಕ್ಲೇವ್’ನಲ್ಲಿ ಮಾತನಾಡಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು, 2022ರ ಗಣತಿಯಲ್ಲಿ 563 ಇದ್ದ ಹುಲಿಗಳ ಸಂಖ್ಯೆ ಪ್ರಸ್ತುತ 700 ರ ಆಸುಪಾಸಿಗೆ ತಲುಪಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂರಕ್ಷಿತ ಅರಣ್ಯಗಳು, ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳು ಮಾತ್ರವಲ್ಲದೆ ಪ್ರಾದೇಶಿಕ ಅರಣ್ಯ ವಿಭಾಗಗಳು ಮತ್ತು ಕಾಡಿನ ಹೊರಗಿನ ಪ್ರದೇಶಗಳಲ್ಲೂ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹುಲಿ ಗಣತಿ ಪ್ರಕ್ರಿಯೆಯು ನವೆಂಬರ್ 2025 ರಲ್ಲಿ ಪ್ರಾರಂಭವಾಗಿ ಮೇ 2026 ರಲ್ಲಿ ಪೂರ್ಣಗೊಂಡಿದೆ. ದತ್ತಾಂಶವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಅಂತಿಮ ಮೌಲ್ಯಮಾಪನ ಹಾಗೂ ಅಧಿಕೃತ ಬಿಡುಗಡೆಗಾಗಿ ರವಾನಿಸಲಾಗಿದೆ. ಮಧ್ಯಪ್ರದೇಶ, ಉತ್ತರಾಖಂಡ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಭರವಸೆ ಮೂಡಿಸುವ ರೀತಿಯಲ್ಲಿ ಹೆಚ್ಚಾಗಿದೆ. 2022 ರ ವರದಿಯಂತೆ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.

ವಿಶೇಷ ‘ಆನೆ ಕಾರಿಡಾರ್ ನೀತಿ’ ಜಾರಿಗೆ ಮುಹೂರ್ತ:

ಭಾರತದಲ್ಲೇ ಅತಿ ಹೆಚ್ಚು ಅಂದರೆ 6,395 ಆನೆಗಳನ್ನು ಹೊಂದುವ ಮೂಲಕ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆನೆಗಳ ಸಂಚಾರಕ್ಕೆ ಅಡೆತಡೆಯಾಗದಂತೆ ತಡೆಯಲು ವಿಶೇಷ ‘ಆನೆ ಕಾರಿಡಾರ್ ನೀತಿ’ಯನ್ನು ರೂಪಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಪ್ರಸ್ತುತ ಇರುವ ಆನೆ ಕಾರಿಡಾರ್‌ಗಳನ್ನು ಬಲಪಡಿಸುವುದು ಹಾಗೂ ನಾಶವಾಗಿರುವ ಕಾರಿಡಾರ್‌ಗಳನ್ನು ಪುನರುಜ್ಜೀವನಗೊಳಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ.

ಆನೆಗಳಿಗೆ ಗರ್ಭನಿರೋಧಕ – ಹಾವು ರಕ್ಷಕರಿಗೆ ಶೀಘ್ರವೇ ಹೊಸ ನಿಯಮಾವಳಿ:

ಕಾಫಿ ತೋಟಗಳ ಬಳಿ ವಾಸಿಸುವ ಆನೆಗಳಿಗೆ ಇಮ್ಯೂನ್-ಗರ್ಭನಿರೋಧಕ ಚಿಕಿತ್ಸೆ ನೀಡುವ ಕುರಿತು ವೈಜ್ಞಾನಿಕ ಮತ್ತು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಜೊತೆಗೆ ಕಾಡುಕೋಣಗಳಸಂಖ್ಯೆ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಸರ್ಪದಂಶವನ್ನು ‘ನೋಟಿಫೈಡ್ ಡಿಸೀಸ್’ ಎಂದು ಘೋಷಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದೀಗ ಹಾವು ರಕ್ಷಕರು ಹಾಗೂ ತಜ್ಞರ ಸುರಕ್ಷತೆಗಾಗಿ ಸರ್ಕಾರ ಶೀಘ್ರದಲ್ಲೇ ಸರಣಿ ನಿಯಮಗಳನ್ನು ಹೊರಡಿಸಲಿದೆ. ಹಾವುಗಳ ಸೆರೆ, ರಕ್ಷಣೆ ಮತ್ತು ಪುನರ್ವಸತಿಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗುತ್ತಿದ್ದು, ನೋಂದಾಯಿತ ಹಾವು ರಕ್ಷಕರ ಪಟ್ಟಿಯನ್ನು ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ನಗರ ಪ್ರದೇಶಗಳಲ್ಲಿ ‘ಟ್ರೀ ಪಾರ್ಕ್’ ನಿರ್ಮಾಣ – ಸಚಿವ ರಾಮಲಿಂಗಾರೆಡ್ಡಿ:

ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಗರೀಕರಣದಿಂದಾಗಿ ಶ್ವಾಸಕೋಶದಂತಿರುವ ಹಸಿರು ಜಾಗಗಳು ಕುಗ್ಗುತ್ತಿವೆ. ವಿಧಾನಸೌಧ ಹಾಗೂ ಹೈಕೋರ್ಟ್ ಸೇರಿ ಕಚೇರಿ ಸಂಕೀರ್ಣಗಳಿಂದಾಗಿ ಕಬ್ಬನ್ ಪಾರ್ಕ್‌ನ ಹಸಿರು ಹೊದಿಕೆ ಕಡಿಮೆಯಾಗಿದೆ. ಇದನ್ನು ಸರಿದೂಗಿಸಲು ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ‘ಟ್ರೀ ಪಾರ್ಕ್‌ಗಳನ್ನು’ ನಿರ್ಮಿಸಲಾಗುವುದು. ರಾಜ್ಯದ ಅರಣ್ಯ ಹೊದಿಕೆ ಶೇ. 20 ರಷ್ಟಿದ್ದು, ಇದನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಕಾರ್ಯಕ್ರಮದಲ್ಲಿ ಸಚಿವರು ‘ಕ್ರಾಸಿಂಗ್ ಪಾತ್ಸ್’, ‘ಲಂಗ್ಸ್ ಆಫ್ ಬೆಂಗಳೂರು’ ಮತ್ತು ‘ಎಲಿಫೆಂಟ್ ಟಾಸ್ಕ್ ಫೋರ್ಸ್ ರಾಮನಗರ’ ಎಂಬ ಮೂರು ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಿದರು.

ಇದನ್ನೂ ಓದಿ: ಈ ದಸರಾ ರಜೆಗೆ ಮಕ್ಕಳು-ಫ್ಯಾಮಿಲಿ ಜೊತೆ ಒಂದೇ ದಿನದಲ್ಲಿ ಸುತ್ತಾಡಲು KSTDC ಸೂಪರ್ ಒನ್‌ಡೇ ಟೂರ್ ಪ್ಯಾಕೇಜ್

ಮಾನವ-ವನ್ಯಜೀವಿ ಸಂಘರ್ಷ ಹಾಗೂ ರಾಜ್ಯದ ಸ್ಥಾನಮಾನ ವಿವರ:

2025-26 ನೇ ಸಾಲಿನ ಮಾನವ-ವನ್ಯಜೀವಿ ಸಂಘರ್ಷದ ಹಾನಿ:

ಮಾನವ ಸಾವುಗಳು: 51

ಗಾಯಗೊಂಡವರು: 368

ಜಾನುವಾರು ಹಾನಿ : 6,351

ಬೆಳೆ ಹಾನಿ ಪ್ರಕರಣಗಳು (Crop Loss): 41,755

ವನ್ಯಜೀವಿಗಳ ಸಂಖ್ಯೆಯಲ್ಲಿ ಕರ್ನಾಟಕದ ಶ್ರೇಣಿ :

ಆನೆಗಳು (6,395): ಭಾರತದಲ್ಲೇ ನಂ. 1 ಸ್ಥಾನ

ಹುಲಿಗಳು (563 – 2022 ಗಣತಿ): ಭಾರತದಲ್ಲೇ ನಂ. 2 ಸ್ಥಾನ

ಚಿರತೆಗಳು (1,879): ಭಾರತದಲ್ಲೇ ನಂ. 3 ಸ್ಥಾನ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ