ಕೆಂಗೇರಿ ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು ಕೇಸ್​: 5 ಲಕ್ಷ ರೂ ಪರಿಹಾರ ಘೋಷಿಸಿದ ಡಿಕೆ ಶಿವಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: Oct 23, 2024 | 7:51 PM

ಮೊನ್ನೆ ಕೆಂಗೇರಿ ಕೆರೆಯಲ್ಲಿ ನೀರು ತರಲು ಹೋಗಿದ್ದ ಅಣ್ಣ ಮತ್ತು ತಂಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ನಿನ್ನೆ ಇಬ್ಬರ ಮೃತದೇಹಗಳು ಪತ್ತೆ ಆಗಿದ್ದವು. ಇದೀಗ ಟಿವಿ9ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಬಿಬಿಎಂಪಿ ವತಿಯಿಂದ 5 ಲಕ್ಷ ರೂ. ಪರಿಹಾರವನ್ನು ಡಿಸಿಎಂ ಡಿಕೆ ಶಿವಕುಮಾರ್​ ಘೋಷಣೆ ಮಾಡಿದ್ದಾರೆ.

ಕೆಂಗೇರಿ ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು ಕೇಸ್​: 5 ಲಕ್ಷ ರೂ ಪರಿಹಾರ ಘೋಷಿಸಿದ ಡಿಕೆ ಶಿವಕುಮಾರ್
ಕೆಂಗೇರಿ ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು ಕೇಸ್​: 5 ಲಕ್ಷ ರೂ ಪರಿಹಾರ ಘೋಷಿಸಿದ ಡಿಕೆ ಶಿವಕುಮಾರ್
Follow us on

ಬೆಂಗಳೂರು, ಅಕ್ಟೋಬರ್​​ 23: ನಗರದಲ್ಲಿ ಕೆಂಗೇರಿ ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಬಿಬಿಎಂಪಿಯಿಂದ ಐದು ಲಕ್ಷ ರೂ. ಪರಿಹಾರವನ್ನು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಘೋಷಣೆ ಮಾಡಿದ್ದಾರೆ. ಟಿವಿ9ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಪರಿಹಾರ ಘೋಷಣೆ ಮಾಡಲಾಗಿದೆ.

ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು

ಈ ವಿಚಾರವಾಗಿ ಮಾತನಾಡಿರುವ ಡಿಕೆ ಶಿವಕುಮಾರ್​, ಮಕ್ಕಳು ಇಬ್ಬರು ಸಣ್ಣವರು ಹಾಗಾಗಿ ಬಿಬಿಎಂಪಿಯಿಂದ ಇಬ್ಬರು ಮಕ್ಕಳಿಗೆ ಐದು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ.  ಪರಿಹಾರ ನೀಡುವ ಸಂಬಂಧ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್​ ಜತೆ ಮಾತಾಡಿದ್ದೇನೆ. ಬೆಂಗಳೂರಿನ ಯಶವಂತಪುರ ಕ್ಷೇತ್ರ ವ್ಯಾಪ್ತಿಗೆ ಕೆಂಗೇರಿ ಸೇರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕೆಂಗೇರಿ ಕೆರೆಗೆ ಬಿದ್ದಿದ್ದ ಅಣ್ಣ ತಂಗಿಯ ಮೃತ ದೇಹಗಳು ಪತ್ತೆ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ನಾಗಮ್ಮ ಪುತ್ರಿ ಮಹಾಲಕ್ಷ್ಮೀ, ಪುತ್ರ ಜಾನ್ ಸೀನ ಮೃತಪಟ್ಟಿದ್ದರು. ನಿನ್ನೆ ಬೆಳಗ್ಗೆ ಆಕಸ್ಮಿಕವಾಗಿ ಕೆಂಗೇರಿ ಕೆರೆಗೆ ಬಿದ್ದಿದ್ದ ತಂಗಿ ಮಹಾಲಕ್ಷ್ಮೀ ರಕ್ಷಣೆಗಾಗಿ ಕೆರೆಗೆ ಇಳಿದಿದ್ದ ಅಣ್ಣ ಜಾನ್ ಸೀನ ಕೂಡ ಮೃತಪಟ್ಟಿದ್ದ. ನಿನ್ನೆ ಅಣ್ಣ ತಂಗಿಯ ಮೃತದೇಹಗಳು ಪತ್ತೆಯಾಗಿದ್ದವು. ಇದೀಗ ಮೃತ ಮಕ್ಕಳ ತಾಯಿ ನಾಗಮ್ಮಗೆ ಪರಿಹಾರ ಘೋಷಿಸಲಾಗಿದೆ.

ಮೃತ ಇಬ್ಬರು ಮಕ್ಕಳು ಮತ್ತು ತಾಯಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಹರ್ಷ ಲೇಔಟ್​ನಲ್ಲಿ ವಾಸವಾಗಿದ್ದರು, ಕನಿಷ್ಠ ಸೌಜನಕ್ಕಾದರೂ ಶಾಸಕ ಎಸ್ ಟಿ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ಘೋಷಣೆ ಮಾಡಿರಲಿಲ್ಲ. ಇಬ್ಬರು ಮಕ್ಕಳ ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲದೆ ಪಾಪ ಆ ತಾಯಿ ನಾಗಮ್ಮ ಗೋಳಾಡಿದ್ದಾರೆ.

ಇದನ್ನೂ ಓದಿ: ಮಳೆಗೆ ಬೆಂಗಳೂರಿನ ಕೆರೆಗಳಿಗೆ ಜೀವಕಳೆ: ಮೈದುಂಬಿ ಹರಿಯುತ್ತಿರುವ 40 ಕೆರೆಗಳು

ಮೃತರಾದ ಜಾನ್ ಸೀನಾ ಮತ್ತು ಮಹಾಲಕ್ಷ್ಮೀ ಮೃತದೇಹವನ್ನ ಮೈಸೂರು ರೋಡ್​ನಲ್ಲಿರುವ ರಾಜರಾಜೇಶ್ವರೀ ಮೆಡಿಕಲ್ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿದ್ದು, ನಂತರ ಕೆಂಗೇರಿ ಉಪನಗರದ ಬಿಬಿಎಂಪಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಇನ್ನು ತಾಯಿ ನಾಗಮ್ಮ ನನ್ನ ಮನೆಯ ಬಳಿ ಯಾರೋ ಬಂದಿದ್ದಾರೆ, ಏನೋ ಮಾಡುತ್ತಿದ್ದಾರೆ. ನನ್ನ ಮಗಳ ಮೈ ಮೇಲಿದ್ದ ಬಟ್ಟೆ ಮೃತದೇಹ ಸಿಕ್ಕಾಗ ಕಾಣಿಸಿಲ್ಲ ಎಂದು ಆರೋಪ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.