ಕೊಡಗು, ಜು.31: ದೇವರನಾಡು ಕೇರಳದಲ್ಲಿ ನಡೆದ ಗುಡ್ಢ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವು ನೋವು ಸಂಭವಿಸಿದೆ. ಅದರಂತೆ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮಿಪದ ಗುಹ್ಯ ಗ್ರಾಮದ ಬಾಲಕನೋರ್ವ ಈ ದುರಂತದಲ್ಲಿ ಕೊನೆಯುಸಿರೆಳೆದಿದ್ದಾನೆ. ರೋಹಿತ್(9) ಮೃತ ಬಾಲಕ. ಇತ ತಾಯಿಯ ಜೊತೆ ವಯನಾಡಿಗೆ ಸಂಬಂಧಿಕರ ಮನೆಗೆ ತೆರಳಿದ್ದ. ಇನ್ನು ಮೃತ ರೋಹಿತ್ ತಾಯಿ ಕವಿತಾ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದ್ದು, ಸದ್ಯ ಕೇರಳದ ವಯನಾಡಿಗೆ ಕವಿತಾ ಪತಿ ರವಿ ತೆರಳಿದ್ದಾರೆ.
ಇನ್ನು ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗುಯ್ಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ರೋಹಿತ್, ಶಾಲೆಗೆ ರಜೆ ಹಿನ್ನಲೆ ಕೇರಳ ರಾಜ್ಯದ ಮೇಪಾಡಿಯದ ಸಂಬಂಧಿಕರ ಮನೆಗೆ ತಾಯಿಯ ಜೊತೆ ಹೋಗಿದ್ದ. ದುರಾದೃಷ್ಟ ಎಂಬಂತೆ ವಯನಾಡ್ನಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿದೆ. ಕಾರ್ಯಾಚರಣೆ ವೇಳೆ ರೋಹಿತ್ ಮೃತದೇಹ ಮಣ್ಣಿನ ಅಡಿಯಲ್ಲಿ ಪತ್ತೆಯಾಗಿದ್ದು, ತಾಯಿ ಕವಿತಾ ಎಂಬುವವರ ಮೊಬೈಲ್ ಕೂಡ ಸ್ವಿಚ್ಚ ಆಫ್ ಆಗಿದೆ.
ಇದನ್ನೂ ಓದಿ:ವಯನಾಡಿನಲ್ಲಿ ಗುಡ್ಡ ಕುಸಿತ ದುರಂತಕ್ಕೆ ಮುನ್ನ ಬದಲಾಗಿತ್ತು ನದಿ ನೀರಿನ ಬಣ್ಣ; ಇದಾಗಿತ್ತೇ ಅಪಾಯದ ಸೂಚನೆ?
ಈ ಭೀಕರ ದುರಂತದಲ್ಲಿ ಈವರೆಗೂ ಒಟ್ಟು 205 ಜನರ ದುರ್ಮರಣ ಹೊಂದಿದ್ದಾರೆ. ಅದರಲ್ಲಿ 103 ಮೃತದೇಹಗಳ ಗುರುತು ಮಾತ್ರ ಪತ್ತೆಯಾಗಿದೆ. ಜೊತೆಗೆ 200 ಜನರು ನಾಪತ್ತೆ ಆಗಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಸಧ್ಯ ರಕ್ಷಣೆ ಮಾಡಿದ 128 ಜನರಿಗೆ ವಿವಿಧ ಕಡೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 3,478 ಜನರನ್ನು ರಕ್ಷಣಾ ಕ್ಯಾಂಪ್ಗಳಿಗೆ ರವಾನೆ ಮಾಡಲಾಗಿದೆ. ಈ ಕುರಿತು ಕೇರಳ ಸರ್ಕಾರ ಮಾಹಿತಿ ನೀಡಿದೆ. ಇನ್ನು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ