AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು ಜಿಲ್ಲೆಯಲ್ಲಿ ಕೋಟ್ಯಂತರ ಮೌಲ್ಯದ ಹರಳು ಕಲ್ಲುಗಳ ಲೂಟಿ; ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ದೋಖಾ, ನಾಗರಿಕರ ಆಕ್ರೋಶ

ಕಳೆದ 15 ವರ್ಷಗಳಿಂದ ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ತಣ್ಣಿಮಾನಿ, ಕಡಮಕಲ್ಲು, ಎರಡನೇ ಮೊಣ್ಣಂಗೇರಿ, ಬಿಳೆಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂ ಒಡಲನ್ನ ಬಗೆದು ನೂರಾರು ಕೋಟಿ ರೂ ಮೌಲ್ಯದ ಹರಳು ಕಲ್ಲುಗಳನ್ನ ಲೂಟಿ ಮಾಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕೋಟ್ಯಂತರ ಮೌಲ್ಯದ ಹರಳು ಕಲ್ಲುಗಳ ಲೂಟಿ; ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ದೋಖಾ, ನಾಗರಿಕರ ಆಕ್ರೋಶ
ಕೊಡಗು ಜಿಲ್ಲೆಯಲ್ಲಿ ಕೋಟ್ಯಂತರ ಮೌಲ್ಯದ ಹರಳು ಕಲ್ಲುಗಳ ಲೂಟಿ; ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ದೋಖಾ, ನಾಗರಿಕರ ಆಕ್ರೋಶ
TV9 Web
| Edited By: |

Updated on: Feb 13, 2022 | 11:43 AM

Share

ಕೊಡಗು ಜಿಲ್ಲೆಯ ಕಲ್ಲು ಗಣಿಗಾರಿಕೆಯ ಅಕ್ರಮಗಳು ಬಗೆದಷ್ಟು ಆಳವಾಗುತ್ತಿದೆ. ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಹಲವು ಪ್ರಭಾವಿಗಳು ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಕೆಂಪು ಹರಳು ಕಲ್ಲು.. ಕೊಡಗಿನ ಪಟ್ಟಿಘಾಟ ಬೆಟ್ಟ ಸಾಲುಗಳ ಒಡಲಲ್ಲಿ ಹುದುಗಿರೋ ಅತ್ಯಮೂಲ್ಯ ಸಂಪತ್ತು. ಆಭರಣ ತಯಾರಿಕಾ ಉದ್ದಿಮೆಯಲ್ಲಿ ಈ ಹರಳು ಕಲ್ಲು ನೂರಾರು ಕೋಟಿ ಬೆಲೆ ಬಾಳುತ್ತೆ. ಇಂಥಾ ಅಮೂಲ್ಯ ವಸ್ತುವನ್ನೇ ಇದೀಗ ಲೂಟಿ ಮಾಡಲಾಗ್ತಿದೆ.

ಕೋಟ್ಯಂತರ ಮೌಲ್ಯದ ಹರಳು ಕಲ್ಲುಗಳ ಲೂಟಿ ಕಳೆದ 15 ವರ್ಷಗಳಿಂದ ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ತಣ್ಣಿಮಾನಿ, ಕಡಮಕಲ್ಲು, ಎರಡನೇ ಮೊಣ್ಣಂಗೇರಿ, ಬಿಳೆಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂ ಒಡಲನ್ನ ಬಗೆದು ನೂರಾರು ಕೋಟಿ ರೂ ಮೌಲ್ಯದ ಹರಳು ಕಲ್ಲುಗಳನ್ನ ಲೂಟಿ ಮಾಡಲಾಗಿದೆ. ಆದ್ರೆ ಪ್ರಕರಣ ಬಯಲಾಗಿ ಒಂದು ತಿಂಗಳೇ ಕಳೆದ್ರೂ, ಇದುವರೆಗೂ ಏನೂ ಆಗಿಲ್ಲ. ಕೇವಲ ಇಬ್ಬರು ಗಾರ್ಡ್ಗಳನ್ನ ಮಾತ್ರ ಅಮಾನತು ಮಾಡಿ ಇಬ್ಬರು ಚಿಲ್ಲರೆ ದಂಧೆಕೋರರನ್ನ ಅರೆಸ್ಟ್ ಮಾಡಿ ಅರಣ್ಯ ಇಲಾಖೆ ಕೈತೊಳೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸ್ಥಳೀಯ ಶಾಸಕ ಕೆಜಿ ಬೋಪಯ್ಯ, ಪ್ರಕರಣವನ್ನ ಸಿಒಡಿ ತನಿಖೆಗೆ ಒಪ್ಪಿಸಿ ಅಂತಾ ಒತ್ತಾಯಿಸಿದ್ದಾರೆ. ಇನ್ನು ಕೇಸ್ನ ಮುಖ್ಯ ತನಿಖಾಧಿಕಾರಿಯಾಗಿರೋ ಡಿಎಫ್ಒ ಪೂವಯ್ಯರನ್ನ ತನಿಖೆ ಬಗ್ಗೆ ಕೇಳಿದ್ರೆ, ಇಲಾಖೆಯಿಂದ ಸೂಕ್ತ ರೀತಿಯಲ್ಲಿ ಎನ್ಕ್ವೈರಿ ಆಗ್ತಿದೆ.. ಅಧಿಕಾರಿಗಳ ಕಾಲ್ ಡಿಟೇಲ್ಸ್ಗಳನ್ನ ಕಲೆ ಹಾಕಲಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವವರನ್ನ ಶೀಘ್ರವೇ ಅರೆಸ್ಟ್ ಮಾಡ್ತೇವೆ ಅಂತಿದ್ದಾರೆ.

ಜನ ಸಾಮಾನ್ಯರು ಅರಣ್ಯದಲ್ಲಿ ಒಂದು ಮರ ಕಡಿದ್ರೆ, ಅರಣ್ಯ ಇಲಾಖೆ ಸಿಬ್ಬಂದಿ ಅವ್ರನ್ನ ಹಿಂಸಿಸಿ ಇನ್ನಿಲ್ಲದ ಶಿಕ್ಷೆ ಕೊಡ್ತಾರೆ. ಅದೇ ಅರಣ್ಯ ಇಲಾಖೆ ಸಿಬ್ಬಂದಿಯೇ ತನ್ನ ಹೊಲವನ್ನ ತಾನೇ ಮೇಯ್ದರೆ ಕೇಳುವವರೇ ಇಲ್ಲ. ಕೊಡಗಿನ ಬೆಟ್ಟ ಪ್ರದೇಶಗಳಲ್ಲಿ ಭೀಕರ ಭೂ ಕುಸಿತಗಳು ಸಂಭವಿಸುತ್ತಿವೆ ಅಂತಾ ನಾಗರಿಕರು ಆಕ್ರೋಶ ವ್ಯಕ್ತಡಿಸ್ತಿದ್ದಾರೆ.

ವರದಿ: ಗೋಪಾಲ್ ಸೋಮಯ್ಯ, ಟಿವಿ9 ಕೊಡಗು

ಇದನ್ನೂ ಓದಿ: ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿಕೊಂಡ 9 ಕಾರ್ಮಿಕರು; ರಕ್ಷಣೆಗೆ ಎಸ್​ಡಿಇಆರ್​ಎಫ್​ ತಂಡ ಹರಸಾಹಸ

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ