ತಪ್ಪಿಸಿಕೊಳ್ಳುವ ಯತ್ನದಲ್ಲಿ ಅಪಘಾತ, ಗೋ ಕಳ್ಳತನಕ್ಕೆ ಯತ್ನಿಸುತ್ತಿದ್ದ ಜೀಪ್ ಧಗ ಧಗ
ಅಪಘಾತದ ಬಳಿಕ ಗೋ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಬಂಧನಕ್ಕೆ ಆಗ್ರಹಿಸಿ ಮರಗೋಡು ಗ್ರಾಮಸ್ಥರು ಒಂದು ಗಂಟೆ ಕಾಲ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಮಡಿಕೇರಿ: ಹಸುಗಳ ಕಳ್ಳತನ ಮಾಡಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ವಾಹನ ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ಜೀಪ್ ಗೆ ಬೆಂಕಿ ಹೊತ್ತಿ, ವಾಹನ ಸುಟ್ಟು ಕರಕಲಾಗಿದೆ. ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಪಾರೆಮನೆ ರವೀಂದ್ರ ಎಂಬುವರಿಗೆ ಸೇರಿದ ಎರಡು ಗೋವುಗಳ ಕಳ್ಳತನ ಯತ್ನ ನಡೆದಿತ್ತು. ಅಪಘಾತದ ಬಳಿಕ ಗೋ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಬಂಧನಕ್ಕೆ ಆಗ್ರಹಿಸಿ ಮರಗೋಡು ಗ್ರಾಮಸ್ಥರು ಒಂದು ಗಂಟೆ ಕಾಲ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ವೇಗದಿಂದ ಬಂದ ಅಂಬುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿ; ಮೂವರ ಸಾವು, ಓರ್ವ ಗಂಭೀರ
ಉಡುಪಿ: ವೇಗದಿಂದ ಬಂದ ಅಂಬುಲೆನ್ಸ್ ಉಡುಪಿ ಜಿಲ್ಲೆಯ ಬೈಂದೂರು (Baindur) ತಾಲೂಕಿನ ಶಿರೂರು ಟೋಲ್ ಗೇಟ್ಗೆ ಡಿಕ್ಕಿ ಹೊಡೆದಿದೆ. ಅಂಬುಲೆನ್ಸ್ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿತ್ತು. ಈ ವೇಳೆ ಅಂಬುಲೆನ್ಸ್ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯಿಂದ ಟೋಲ್ಗೆ ಅಂಬುಲೆನ್ಸ್ ಡಿಕ್ಕಿ ಹೊಡೆದಿದೆ.
ಪರಿಣಾಮ ಅಂಬುಲೆನ್ಸ್ನಲ್ಲಿದ್ದ ರೋಗಿ, ರೋಗಿಯ ಪತ್ನಿ ಹಾಗೂ ಆಂಬುಲೆನ್ಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆಂಬುಲೆನ್ಸ್ ಚಾಲಕ ಬಚಾವಾಗಿದ್ದಾನೆ. ಓರ್ವ ಟೋಲ್ ಸಿಬ್ಬಂದಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಬ್ಬರು ಮಹಿಳೆ, ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಅಂಬುಲೆನ್ಸ್ನಲ್ಲಿದ್ದ ರೋಗಿ ಕೂಡ ಸಾವನ್ನಪ್ಪಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 8:02 pm, Wed, 20 July 22