ಕೊಡಗಿನಲ್ಲಿ ಭಾರಿ ಮಳೆಗೆ ಬಿರುಕುಬಿಟ್ಟ ಮನೆ! ಚಿಕ್ಕಮಗಳೂರಿನಲ್ಲಿ ಕೊಚ್ಚಿ ಹೋದ ಬಾಲಕಿಗೆ ಮುಂದುವರೆದ ಶೋಧ

ಬೃಹತ್ ಮರ ಬಿದ್ದು ಸುರೇಶ್ ಎಂಬುವರ ಮನೆಗೆ ಹಾನಿಯಾಗಿದೆ. ಇನ್ನು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಬಳಿ ಕುರ್ಚಿ ಗ್ರಾಮದಲ್ಲಿ ಬಾವಿ ಕುಸಿದು ಹೋಗಿದೆ.

ಕೊಡಗಿನಲ್ಲಿ ಭಾರಿ ಮಳೆಗೆ ಬಿರುಕುಬಿಟ್ಟ ಮನೆ! ಚಿಕ್ಕಮಗಳೂರಿನಲ್ಲಿ ಕೊಚ್ಚಿ ಹೋದ ಬಾಲಕಿಗೆ ಮುಂದುವರೆದ ಶೋಧ
ಮನೆ ಮೇಲೆ ಬೃಹತ್ ಮರ ಬಿದ್ದಿದೆ. ಮನೆ ಬಳಿಯಿದ್ದ ಬಾವಿ ಕುಸಿದು ಬಿದ್ದಿದೆ
TV9kannada Web Team

| Edited By: sandhya thejappa

Jul 06, 2022 | 8:18 AM

ಕೊಡಗು: ಜಿಲ್ಲೆಯಾದ್ಯಂತ ಮಳೆ (Rain) ಅವಾಂತರ ಮುಂದುವರಿದಿದ್ದು, ಸೋಮವಾರಪೇಟೆ ತಾಲೂಕಿನ ಶಿವರಳ್ಳಿಯಲ್ಲಿ ಮರ ಬಿದ್ದು ಮನೆ ಗೋಡೆಗಳು (Walls) ಬಿರುಕುಬಿಟ್ಟಿವೆ. ಬೃಹತ್ ಮರ ಬಿದ್ದು ಸುರೇಶ್ ಎಂಬುವರ ಮನೆಗೆ ಹಾನಿಯಾಗಿದೆ. ಇನ್ನು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಬಳಿ ಕುರ್ಚಿ ಗ್ರಾಮದಲ್ಲಿ ಬಾವಿ ಕುಸಿದು ಹೋಗಿದೆ. ಬಾವಿ ಕುಸಿತಗೊಂಡಿದ್ದರಿಂದ ಬೃಹತ್ ಹೊಂಡ ಸೃಷ್ಟಿಯಾಗಿದ್ದು, ಕಾಳಯ್ಯ ಎಂಬುವರ ಮನೆಗೆ ಹಾನಿಯಾಗಿದೆ.

ಬಾಲಕಿಗಾಗಿ ಮುಂದುವರಿದ ಶೋಧ: ಹಳ್ಳದಲ್ಲಿ ಕೊಚ್ಚಿಹೋಗಿದ್ದ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿದಿದೆ. 2 ದಿನದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸುತ್ತಿದೆ. ಇನ್ನು ಬಾಲಕಿ ಮೃತದೇಹ ಪತ್ತೆಯಾಗಿಲ್ಲ. ಶಾಲೆಯಿಂದ ಮನೆಗೆ ಬರುವಾಗ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಬಾಲಕಿ ಕೊಚ್ಚಿ ಹೋಗಿದ್ದಳು. 1ನೇ ತರಗತಿ ಸುಪ್ರೀತಾ ಹಳ್ಳದಲ್ಲಿ ಕೊಚ್ಚಿಹೋಗಿರುವ ಬಾಲಕಿ.

ಗುಡ್ಡ ಕುಸಿತ: ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆ ಹಿನ್ನೆಲೆ ಗೋಕರ್ಣ ಕ್ರಾಸ್​ ಬಳಿಯ ಮಾದನಗೇರಿಯ ಬಳಲೆ ಗುಡ್ಡ ಕುಸಿದಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ರಾ. ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ಹೆದ್ದಾರಿಯಲ್ಲಿ ಬಿದ್ದ ಮಣ್ಣು ತೆರವುಗೊಳಿಸುತ್ತಿದೆ.

ಇದನ್ನೂ ಓದಿ: Chandrashekhar Guruji Murder: ಗುರೂಜಿಗೂ ತನಗೂ ಯಾವುದೇ ಸಂಬಂಧವಿಲ್ಲವೆಂದ ಹಂತಕ ಮಹಾಂತೇಶ್ ಪತ್ನಿ ವನಜಾಕ್ಷಿ

ಇದನ್ನೂ ಓದಿ

ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳ: ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಕೇರಳದ ವಯನಾಡು, ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಿದ ಹಿನ್ನೆಲೆ 15 ಸಾವಿರ ಕ್ಯೂಸೆಕ್ ನೀರು ಹೆಚ್ಚಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 74.00 ಅಡಿ, ಜಲಾಶಯದ ಇಂದಿನ ಒಳಹರಿವು 15,019 ಕ್ಯೂಸೆಕ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada