AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀಸಲಾತಿ ಕಿಚ್ಚು: ಕೊಡಗಿನಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಅಲ್ಪಸಂಖ್ಯಾತರು

ಕೊಡಗು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೀಸಲಾತಿ ನೀತಿಯಿಂದ ಅಲ್ಪಸಂಖ್ಯಾತರು ತೀವ್ರ ಅಸಮಾಧಾನಗೊಂಡಿದ್ದಾರೆ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರೂ, ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀಸಲಾತಿ ಕಿಚ್ಚು: ಕೊಡಗಿನಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಅಲ್ಪಸಂಖ್ಯಾತರು
ಕಾಂಗ್ರೆಸ್​ (ಸಂಗ್ರಹ ಚಿತ್ರ)
ಗೋಪಾಲ್​ ಸೋಮಯ್ಯ
| Edited By: |

Updated on: Oct 28, 2026 | 7:09 PM

Share

ಕೊಡಗು, ಅಕ್ಟೋಬರ್​​ 28: ಆ ಕ್ಷೇತ್ರ ಎರಡು ದಶಕಗಳ ಕಾಲ ಬಿಜೆಪಿಯ ಭದ್ರಕೋಟೆಯಾಗಿತ್ತು. ಇಂತಹ ಕ್ಷೇತ್ರದಲ್ಲಿ ಕಮಲವನ್ನ ಅಡಗಿಸಿ ಕಾಂಗ್ರೆಸ್​ಗೆ ಜಯಭೇರಿ ತಂದುಕೊಡಲು ಸಾವಿರಾರು ಕಾರ್ಯಕರ್ತರು ಶ್ರಮಿಸಿದ್ದರು. ಅದರಲ್ಲಿ ಅಲ್ಪಸಂಖ್ಯಾತರು ಪ್ರಮುಖರು. ಆದರೆ ಇದೀಗ ಅದೇ ಅಲ್ಪಸಂಖ್ಯಾತರು ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವನೆಯಲ್ಲಿ ನಮಗೆ ಪ್ರಾತಿನಿಧ್ಯ ಇಲ್ಲ ಅಂತ ಆಕ್ರೋಶಗೊಂಡಿದ್ದಾರೆ.

ಮೀಸಲಾತಿಗೆ ಅಲ್ಪಸಂಖ್ಯಾತರಿಂದ ವಿರೋಧ

ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್​ಗಳಿಗೆ ಮೀಸಲಾತಿ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಆದೇಶಕ್ಕೆ ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಂದ ವಿರೋಧ ವ್ಯಕ್ತವಾಗಿದೆ. ಕೊಡಗು ಜಿಲ್ಲೆಯಲ್ಲಿ 29 ಜಿಲ್ಲಾ ಪಮಚಾಯತ್ ಕ್ಷೇತ್ರಗಳಿವೆ. ಐದು ತಾಲ್ಲೂಕುಗಳಲ್ಲಿ 50 ತಾಲ್ಲೂಕು ಪಂಚಾಯತ್ ಕ್ಷೇತ್ರಗಳಿವೆ. 29 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ 15 ಸ್ಥಾನ ಮಹಿಳೆಯರಿಗೆ ಮೀಸಲಾಗಿವೆ. ಉಳಿದ ಕ್ಷೇತ್ರಗಳು ಒಬಿಸಿ, ಪರಿಶಿಷ್ಟ ಹಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಾಗಿವೆ.

ಇದನ್ನೂ ಓದಿ: ಮುಂದಿನ ಸಿಎಂ ಎಂದು ಕೂಗಿದ ಅಭಿಮಾನಿಗೆ ತಮ್ಮದೇ ಸ್ಟೈಲ್​​ನಲ್ಲಿ ಉತ್ತರ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಸದ್ಯ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ನೀತಿ ಜಿಲ್ಲೆಯ ಅಲ್ಪಸಂಖ್ಯಾತರ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ ಎಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿದ್ದಾರೋ, ಅಲ್ಪಸಂಖ್ಯಾತರಿಗೆ ಗೆಲ್ಲಲು ಅವಕಾಶವಿದೆಯೋ ಅಂತಹ ಕ್ಷೇತ್ರಗಳಲ್ಲಿ ಅಲ್ಪ ಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶವಿಲ್ಲದಂತಾಗಿದೆ. ಒಂದು ಆ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಇದ್ದರೆ ಮತ್ತೆ ಕೆಲವೆಡೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡಲಾಗಿದೆ. ಅಲ್ಪಸಂಖ್ಯಾತರಲ್ಲಿ ಮಹಿಳಾ ಮುಖಂಡರು ಕಡಿಮೆ. ಇಲ್ಲಿ ಪುರುಷ ಅಭ್ಯರ್ಥಿಗಳೇ ಹೆಚ್ಚಾಗಿ ಮಂಚೂಣಿಯಲ್ಲಿದ್ದಾರೆ. ಹಾಗಾಗಿ ಅಲ್ಲಿ ಅಲ್ಪಂಖ್ಯಾತರ ಗೆಲುವು ಸಾಧ್ಯವಿಲ್ಲ ಎನ್ನುವುದು ಇವರ ಆರೋಪ.

LIVE TV

ಇದುವರೆಗೂ ಈಡೇರದ ಬೇಡಿಕೆ 

ಕಳೆದ ಬಾರಿ ವಿಧಾನಸಭಾ ಚುನಾವಣೆ ನಡೆದಾಗ ಜಿಲ್ಲೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರನ್ನ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಲಾಗಿತ್ತು. ಇದರಲ್ಲಿ ಅಲ್ಪಸಂಖ್ಯಾತ ಮತದಾರರು ಹಾಗೂ ಮುಖಂಡರುಗಳ ಪಾತ್ರ ಬಹಳ ಮಹತ್ವದ್ದಾಗಿತ್ತು. ಇದಕ್ಕೆ ಪ್ರತಿಯಾಗಿ ನಿಗಮ ಮಂಡಳಿಯ ಒಂದು ಸ್ಥಾನವನ್ನು ಕೊಡಗಿನ ಅಲ್ಪಸಂಖ್ಯಾತರಿಗೆ ನೀಡುವಂತೆ ಒತ್ತಾಯಿಸಲಾಗಿತ್ತು. ಆದರೆ ಆ ಬೇಡಿಕೆ ಇದುವರೆಗೂ ಈಡೇರಿಲ್ಲ. ಇದರ ಜೊತೆಗೆ ಇದೀಗ ಮೀಸಲಾತಿ ನಿಗದಿಯಲ್ಲೂ ನಮಗೆ ಅನ್ಯಾಯ ಮಾಡಲಾಗಿದೆ ಎಂಬುದು ಇವರ ಆರೋಪ.  ಕೊಡಗಿನಲ್ಲಿ ಸದ್ಯ ಐದು ಕ್ಷೇತ್ರಗಳಲ್ಲಾದರೂ ಅಲ್ಪಸಂಖ್ಯಾತರಿಗೆ ಗೆಲ್ಲಲು ಅವಕಾಶ ಮಾಡಿಕೊಡಬೇಕಾಗಿತ್ತು.

ಇದನ್ನೂ ಓದಿ: “26 ಕಾಂಗ್ರೆಸ್ ಶಾಸಕರಿದ್ದರೂ ಸೋತಿದ್ದೇಕೆ?”: ವಿಧಾನ ಪರಿಷತ್ ಚುನಾವಣಾ ಫಲಿತಾಂಶಕ್ಕೆ ಶಾಸಕ ಕೆ.ಎನ್. ರಾಜಣ್ಣ ಬಹಿರಂಗ ಅಸಮಾಧಾನ

ಈ ಬಗ್ಗೆ ಈಗಾಗಲೇ ಅಲ್ಪಸಂಖ್ಯಾತ ಮುಖಂಡರು ಸಭೆ ಮಾಡಿದ್ದಾರೆ. ಇಬ್ಬರು ಶಾಸಕರಿಗೆ ತಮ್ಮ ಅಸಮಾಧಾನವನ್ನ ಹೇಳಿಕೊಂಡಿದ್ದಾರೆ. ಇದನ್ನು ಸರಿಪಡಿಸುವ ಭರವಸೆಯನ್ನ ಶಾಸಕರು ನೀಡಿದ್ದಾರಂತೆ. ಸದ್ಯ ಮೀಸಲಾತಿ ನಿಗದಿಗೆ ಆಕ್ಷೇಪಣೆ ಸಲ್ಲಿಕೆಯಾಗಿದ್ದು, ಇದನ್ನ ಸರ್ಕಾರ ಪರಿಗಣಿಸುತ್ತಾ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗೋಪಾಲ್​ ಸೋಮಯ್ಯ
ಗೋಪಾಲ್​ ಸೋಮಯ್ಯ