AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಬೆಮೆಲ್ ಸಂಸ್ಥೆಯ ಸಾಕ್ಷ್ಯಚಿತ್ರ ಹಾಗೂ ವಸ್ತು ಪ್ರದರ್ಶನ; ರಕ್ಷಣಾ ಯಂತ್ರಗಳನ್ನು ನೋಡಲು ಮುಗಿಬಿದ್ದ ಸಾರ್ವಜನಿಕರು

ಕೇಂದ್ರ ಸರ್ಕಾರದ ಒಡೆತನದ ಬೆಮೆಲ್ ಕಾರ್ಖಾನೆಯಲ್ಲಿ ಸೇನೆಗೆ ಮತ್ತು ಗಣಿಗಾರಿಕೆಗೆ ಅವಶ್ಯಕ ಯಂತ್ರಗಳನ್ನು ಉತ್ಪಾದನೆ ಮಾಡಿದ್ದು, ಪ್ರದರ್ಶನಕ್ಕೆ ಇಡಲಾಗಿತ್ತು.

ಕೋಲಾರ: ಬೆಮೆಲ್ ಸಂಸ್ಥೆಯ ಸಾಕ್ಷ್ಯಚಿತ್ರ ಹಾಗೂ ವಸ್ತು ಪ್ರದರ್ಶನ; ರಕ್ಷಣಾ ಯಂತ್ರಗಳನ್ನು ನೋಡಲು ಮುಗಿಬಿದ್ದ ಸಾರ್ವಜನಿಕರು
ವಸ್ತು ಪ್ರದರ್ಶನ
TV9 Web
| Updated By: preethi shettigar|

Updated on:Dec 17, 2021 | 8:54 AM

Share

ಕೋಲಾರ: ಅದು ದೇಶದ ರಕ್ಷಣಾ ವ್ಯವಸ್ಥೆಗೆ ಬೇಕಾದ ಭಾರೀ ಯಂತ್ರಗಳನ್ನು ತಯಾರಿಸುವ ಹೆಮ್ಮೆಯ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸಂಸ್ಥೆ, 75 ನೇ ಸ್ವಾತಂತ್ರ್ಯ ದಿನಾಚರಣೆ (Independence 75)  ಹಿನ್ನೆಲೆ ಇಷ್ಟು ವರ್ಷಗಳ ಕಾಲ ತಾವು ತಯಾರು ಮಾಡಿ ಸೇನೆಗೆ ಪೂರೈಕೆ ಮಾಡಿದ ಹಲವು ಯಂತ್ರಗಳ ಪ್ರದರ್ಶನ ಮಾಡಿದೆ. ದೊಡ್ಡ ದೊಡ್ಡ ಜೆಸಿಬಿಗಳು, ಬುಲ್ಡೋಜರ್​ಗಳು, ಬೃಹತ್ ಗಾತ್ರದ ಡೋಜರ್​ಗಳು, ದೊಡ್ಡ ದೊಡ್ಡ ವಾಹನಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ವಿಕ್ಷಣೆಗೆ ಅವಕಾಶ ಮಾಡಲಾಗಿದೆ. ಆ ಮೂಲಕ ದೇಶದ ರಕ್ಷಣಾ ವ್ಯವಸ್ಥೆಗೆ ತಮ್ಮ ಕೊಡುಗೆ ಏನು ಎನ್ನುವುದನ್ನು ಪ್ರಸ್ತುತಪಡಿಸಿದೆ.

ಕೋಲಾರದ ಕೆಜಿಎಫ್​ನ ಬೆಮೆಲ್ ನಗರದಲ್ಲಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಅಂದರೆ ಬೆಮೆಲ್ ಕಂಪನಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಮ್ಮ ಕಂಪನಿಯಲ್ಲಿ ತಯಾರು ಮಾಡಲಾಗಿರುವ ಯಂತ್ರಗಳನ್ನು ಸಾರ್ವಜನಿಕರ ಪ್ರದರ್ಶನಕ್ಕಿಟ್ಟಿದೆ. ಒಂದು ವಾರಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ಸಾವಿರಾರು ಜನರು ಹಾಗೂ ವಿದ್ಯಾರ್ಥಿಗಳು ಬಂದು ವಿಕ್ಷಣೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಒಡೆತನದ ಬೆಮೆಲ್ ಕಾರ್ಖಾನೆಯಲ್ಲಿ ಸೇನೆಗೆ ಮತ್ತು ಗಣಿಗಾರಿಕೆಗೆ ಅವಶ್ಯಕ ಯಂತ್ರಗಳನ್ನು ಉತ್ಪಾದನೆ ಮಾಡಿದ್ದು, ಪ್ರದರ್ಶನಕ್ಕೆ ಇಡಲಾಗಿತ್ತು.

ಕಂಪನಿ ಆರಂಭವಾದಾಗಿನಿಂದ 1964 ರಿಂದ ಬಿಇಎಂಎಲ್ ಪ್ರಯಾಣದ ಕುರಿತು ಸಾಕ್ಷ್ಯ ಚಿತ್ರ ಮತ್ತು ವಸ್ತು ಪ್ರದರ್ಶನವನ್ನು ಬೆಮೆಲ್ ಸಂಸ್ಥೆ ಹಮ್ಮಿಕೊಂಡಿದೆ. ದೇಶದ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಾಗುವ ಸರ್ಕಾರಿ ಒಡೆತನದ ಸಂಸ್ಥೆಯಾಗಿರುವ ಬೆಮೆಲ್​ನ ವಾಹನಗಳು ಮತ್ತು ಯಂತ್ರಗಳ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಇದು ನಮ್ಮ ದೇಶದ ಹೆಮ್ಮೆ ಹಾಗೂ ಮೇಕ್ ಇನ್ ಇಂಡಿಯಾದ ಪ್ರತೀಕ ಎನ್ನುವುದು ಬೆಮೆಲ್ ನೌಕರ ರಾಜೀವ್ ವೃಕ್ಷಾ ಸರಳಯ್ಯ ಅವರ ಮಾತು.

ಇನ್ನೂ 1964 ರಲ್ಲಿ ಆರಂಭವಾದ ಬೆಮೆಲ್ ಕಾರ್ಖಾನೆ ಸೈನ್ಯಕ್ಕೆ, ನೈಸರ್ಗಿಕ ವಿಕೋಪವಾದಾಗ ಬೇಕಾದ ಭಾರೀ ವಾಹನಗಳನ್ನು ಮತ್ತು ಯಂತ್ರೋಪಕರಣಗಳನ್ನು ತಯಾರಿಸುತ್ತಿತ್ತು. ಬೆಮೆಲ್​ ಕಂಪನಿಯನ್ನು ಅಧಿಕೃತವಾಗಿ ದೇಶದ ರಕ್ಷಣಾ ಇಲಾಖೆಗೆ ಮೀಸಲಾಗಿರಿಸಿದ್ದು, ದೇಶದ ಸೈನ್ಯಕ್ಕೆ ಬೇಕಾದ ಟೆಟ್ರಾ ವಾಹನ, ಬಿ.ಎಲ್.200 ಲೋಡರ್, ಬಿಡಿ15 ಪ್ಯಾಟ್ ಡೋಜರ್, ಎಕ್ಸ್ ವೇಟರ್, ಬೃಹತ್​ ಡೋಜರ್​ ಸೇರಿದಂತೆ ಹಲವು ಬೃಹತ್ ವಾಹನಗಳನ್ನು ಇಂದು ಪ್ರದರ್ಶನಕ್ಕೀಡಲಾಗಿತ್ತು. ಅಷ್ಟೇ ಅಲ್ಲದೆ ನಮ್ಮ ಮೆಟ್ರೋ ಸೇರಿದಂತೆ ರೈಲು ಬೋಗಿಗಳನ್ನು ತಯಾರಿಸುತ್ತಿದ್ದು, ರಕ್ಷಣಾ ಇಲಾಖೆ, ಏರೋಪ್ಲೈನ್ ಬಿಡಿಭಾಗ, ವಿವಿಧ ಮೈನಿಂಗ್​ ಮಾಡಲು ಬೇಕಾದ ಹಲವು ರೀತಿಯೆ ಭಾರೀ ಯಂತ್ರಗಳನ್ನು ಇಲ್ಲಿ ಇಡಲಾಗಿದೆ.

ಯಂತ್ರಗಳ ತಯಾರಿಕಾ ಕ್ಷೇತ್ರದಲ್ಲಿ ಬಿಇಎಂಎಲ್ ಪಾತ್ರ ಬಹಳ ದೊಡ್ಡದು. ಒಟ್ಟಾರೆ ಕೇವಲ ಐದು ಕೋಟಿ ರೂಪಾಯಿ ಬಂಡವಾಳದಿಂದ ಆರಂಭವಾದ ಬೆಮೆಲ್ ಇಂದು ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವ ಜೊತೆಗೆ ದೇಶದ ರಕ್ಷಣಾ ಕ್ಷೇತ್ರಕ್ಕೆ ಬೇಕಾದ ವಾಹನ ಹಾಗೂ ಯಂತ್ರಗಳನ್ನು ತಯಾರು ಮಾಡುವ ಹೆಮ್ಮೆಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ವರದಿ: ರಾಜೇಂದ್ರಸಿಂಹ

ಇದನ್ನೂ ಓದಿ: ರಕ್ಷಣಾ ಉಪಕರಣಗಳ ಪ್ರದರ್ಶನ; ಎಕೆ-47 ಗನ್ ಹಿಡಿದು ಖುಷಿಪಟ್ಟ ಮಕ್ಕಳು

Kannada Play : ‘ವ್ಯೋಮ’ದಲ್ಲಿ ರಂಗರಥದಿಂದ ‘ರಜಕಾಯಣ’ ನಾಟಕ ಪ್ರದರ್ಶನ

Published On - 8:49 am, Fri, 17 December 21