AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kolar: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ; ಕೋಲಾರದಲ್ಲಿ 3 ತಿಂಗಳ ಮಗು ಸಾವು

ನಿನ್ನೆ 3 ತಿಂಗಳ ಲಸಿಕೆ ಪಡೆದ ಮಗು ನಿನ್ನೆಯಿಂದ ರಾತ್ರಿ ನಿದ್ದೆ ಮಾಡದೆ ಒಂದೇ ಸಮನೆ ಅಳುತ್ತಿತ್ತು. ಇದರ ಪರಿಣಾಮ ಇಂದು ಪುನಃ ಮಗುವನ್ನು ಆಸ್ಪತ್ರೆಗೆ ಕರೆತಂದು ಪೋಷಕರು ವೈದ್ಯರಿಗೆ ತೋರಿಸಿದ್ದರು.

Kolar: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ; ಕೋಲಾರದಲ್ಲಿ 3 ತಿಂಗಳ ಮಗು ಸಾವು
ಕೋಲಾರದ ಸರ್ಕಾರಿ ಆಸ್ಪತ್ರೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 04, 2022 | 6:40 PM

ಕೋಲಾರ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ 3 ತಿಂಗಳ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ನಿನ್ನೆ 3 ತಿಂಗಳ ಲಸಿಕೆ ಪಡೆದ ಮಗು ನಿನ್ನೆಯಿಂದ ರಾತ್ರಿ ನಿದ್ದೆ ಮಾಡದೆ ಒಂದೇ ಸಮನೆ ಅಳುತ್ತಿತ್ತು. ಇದರ ಪರಿಣಾಮ ಇಂದು ಪುನಃ ಮಗುವನ್ನು ಆಸ್ಪತ್ರೆಗೆ ಕರೆತಂದು ಪೋಷಕರು ವೈದ್ಯರಿಗೆ ತೋರಿಸಿದ್ದರು.

ಆದರೆ, ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಏನೂ ಆಗಿಲ್ಲವೆಂದು ಸಮಜಾಯಿಸಿ ಕೊಟ್ಟ ಡಾಕ್ಟರ್ ಸೌಮ್ಯ, ಹೆಚ್ಚಿನ ಚಿಕಿತ್ಸೆ ಬೇಕಾದರೆ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ತಿಳಿಸಿದ್ದಾರೆ. ಕೂಡಲೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದರೆ ಮಗು ಬದುಕುತ್ತಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ಸೋಮಯಾಜಲಹಳ್ಳಿ ಗ್ರಾಮದ ಸುಬ್ರಮಣಿ ಹಾಗೂ ಗಂಗರತ್ನ ದಂಪತಿಗಳ ಗಂಡು ಮಗು ಇದಾಗಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ದ ಪೋಷಕರು ಗಂಭೀರ ಅರೋಪ ಮಾಡಿದ್ದಾರೆ.

ಒಂದೇ ಸಮನೆ ಅಳುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ ವೈದ್ಯೆಯಿಂದ ಮಗು ಮೃತಪಟ್ಟಿದೆ ಎಂದು ಸೋಮಯಾಜಲಹಳ್ಳಿ ಪ್ರಾಥಮಿಕ ಅರೋಗ್ಯ ಕೇಂದ್ರದ ಎದುರು ವೈದ್ಯೆಯ ನಿರ್ಲಕ್ಷ್ಯವನ್ನುನ್ನ ಖಂಡಿಸಿ ಮಗುವಿನ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಡಾ. ವಿಜಯ ಭೇಟಿ ನೀಡಿದ್ದು, ಘಟನೆಗೆ ಕಾರಣಗಳೇನು? ವೈದ್ಯರ ನಿರ್ಲಕ್ಷ್ಯವಾಗಿದ್ಯಾ? ಎಂಬ ಬಗ್ಗೆ ಮಾಹಿತಿಯನ್ನ ಸಂಗ್ರಹ ಮಾಡುತ್ತಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕೋಲಾರ: ರೈತರೂ ಇಷ್ಟೊಂದು ಸಾಧನೆ, ಸಂಪಾದನೆ ಮಾಡಬಹುದು; ಮಾದರಿ ಕೃಷಿಕನ ಯಶಸ್ವಿ ಬದುಕು!

ಮಗು ಜನಿಸಿದ ಬಳಿಕ ಬಾಣಂತಿ ಖಿನ್ನತೆಗೆ ಒಳಗಾಗಲು ಕಾರಣವೇನು? ಟಿವಿ9 ಜೊತೆ ಸತ್ಯ ಬಿಚ್ಚಿಟ್ಟ ಸ್ತ್ರೀರೋಗ ತಜ್ಞೆ

ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!