ಅವಳಿ ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ: ಮಹಿಳೆಯ ರಕ್ಷಣೆ, ಪುಣಾಣಿಗಳು ಸಾವು

ಆ ಅವಳಿ ಮಕ್ಕಳಿನ್ನೂ ಸರಿಯಾಗಿ ಪ್ರಪಂಚವನ್ನೇ ನೋಡಿರಲಿಲ್ಲ. ಅಷ್ಟರಲ್ಲಾಗಲೇ ಹೆತ್ತ ತಾಯಿಯ ದುಡುಕಿನ ನಿರ್ಧಾರ ಕಂದಮ್ಮಗಳನ್ನು ಬಲಿ ಪಡೆದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತ ತಾಯಿ ಮಕ್ಕಳ ಜೊತೆ ಬಾವಿಗೆ ಹಾರಿದ್ದು, ಆಕೆಯ ರಕ್ಷಣೆ ಮಾಡಲಾಗಿದ್ದರೆ ಏನೂ ಅರಿಯದ ಪುಟಾಣಿಗಳ ಜೀವ ಹೋಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ನಡೆದಿದ್ದೆಲ್ಲಿ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಅವಳಿ ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ: ಮಹಿಳೆಯ ರಕ್ಷಣೆ, ಪುಣಾಣಿಗಳು ಸಾವು
ಮೃತ ಪುಟಾಣಿಗಳು
Image Credit source: Tv9 Kannada
Edited By:

Updated on: Mar 02, 2026 | 2:12 PM

ಕೋಲಾರ/ಗದಗ, ಮಾರ್ಚ್​​ 02: ಕೌಟುಂಬಿಕ ಕಲಹ ಹಿನ್ನೆಲೆ ಇಬ್ಬರು ಮಕ್ಕಳ ಜೊತೆ ತಾಯಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 3 ವರ್ಷದ ಹರ್ಷಿತ್​ ಮತ್ತು ಹಿತೇಶ್ ಮೃತಪಟ್ಟಿದ್ದು, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಉಷಾರನ್ನು ಪ್ರವಾಸಿ ಮಿತ್ರ ಸಿಬ್ಬಂದಿ ರಕ್ಷಿಸಿದ್ದಾರೆ. ಮೃತ ಪುಟಾಣಿಗಳಿಬ್ಬರೂ ಅವಳಿ-ಜವಳಿ ಎಂಬುದು ಗೊತ್ತಾಗಿದೆ. ಬೂದಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಇರಗಮುತ್ತನಹಳ್ಳಿ ಗ್ರಾಮದ ರೈತನೋರ್ವ ಸಾಲಭಾದೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರೀಶ್​​ (45) ಮೃತ ವ್ಯಕ್ತಿಯಾಗಿದ್ದು, ಈತ ಮುಳಬಾಗಿಲು ತಾಲೂಕಿನ ಆಂಬ್ಲಿಕಲ್ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಮತ್ತು ಸಣ್ಣಪುಟ್ಟ ಕೈ ಸಾಲ ಎಲ್ಲವೂ ಸೇರಿ ಸುಮಾರು 10 ಲಕ್ಷ ರೂಪಾಯಿ ಸಾಲ ಹೊಂದಿದ್ದ ಎನ್ನಲಾಗಿದೆ. ಇನ್ನು ಇದೇ ವಿಚಾರವಾಗಿ ಪತ್ನಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದ ಹರೀಶ್, ತೋಟದ ಬಳಿ ನಿರ್ಮಾಣ‌ಮಾಡಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ ಮಾಜಿ ಪ್ರಿಯಕರ, ಆತನ ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿದ ಮಹಿಳೆ

ಕೌಂಟುಬಿಕ ಕಲಹಕ್ಕೆ ಯುವಕ ಬಲಿ

ಕೌಟುಂಬಿಕ ಕಲಹ ಹಿನ್ನೆಲೆ ಅಕ್ಕ ಮತ್ತು ಅಳಿಯನೇ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ವಸಂತ ಭಜಂತ್ರಿ ಕೊಲೆಯಾದ ವ್ಯಕ್ತಿಯಾಗಿದ್ದು, ಮಂಜುಳಾ ಮತ್ತು ಶ್ರೀಕಾಂತ್​​ ಆರೋಪಿಗಳಾಗಿದ್ದಾರೆ. ಕುಡಗೋಲಿಂದ ಕೊಚ್ಚಿ ವಸಂತನ ಕೊಲೆ ಮಾಡಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಕ-ಅಳಿಯನೊಂದಿಗೆ ವಸಂತ ಜಗಳ ಮಾಡುತಿದ್ದ ಎನ್ನಲಾಗಿದ್ದು, ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us