AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಸರ್ಕಾರ ಮೊದಲ ಬಾರಿ ಬಿಜೆಪಿಗೆ ಮಣಿದಿದೆ; ಉತ್ಸವ ಮೇಲೆ ಹೇರಿದ್ದ ನಿಷೇಧವನ್ನ ಸರ್ಕಾರ ವಾಪಸ್ ಪಡೆದಿದೆ -ಅಣ್ಣಾಮಲೈ

ಮಧುರೈ ಅಧೀನಂ ಪೀಠದ ಉತ್ಸವದಲ್ಲಿ ಪಲ್ಲಕಿ ಬ್ಯಾನ್ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸರ್ಕಾರ ಮೊದಲ ಬಾರಿ ಬಿಜೆಪಿಗೆ ಮಣಿದಿದೆ ಎಂದು ಕೋಲಾರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ರು.

ತಮಿಳುನಾಡು ಸರ್ಕಾರ ಮೊದಲ ಬಾರಿ ಬಿಜೆಪಿಗೆ ಮಣಿದಿದೆ; ಉತ್ಸವ ಮೇಲೆ ಹೇರಿದ್ದ ನಿಷೇಧವನ್ನ ಸರ್ಕಾರ ವಾಪಸ್ ಪಡೆದಿದೆ -ಅಣ್ಣಾಮಲೈ
ಅಣ್ಣಾಮಲೈ
TV9 Web
| Edited By: |

Updated on:May 08, 2022 | 4:30 PM

Share

ಕೋಲಾರ: ಚಿನ್ನದ ನಾಡು ಕೋಲಾರಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಭೇಟಿ ಕೊಟ್ಟಿದ್ದಾರೆ. ಕೋಲಾರ ಬಂಗಾರಪೇಟೆ ವೃತ್ತದ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಮಾಲಾರ್ಪಣೆ ಬಳಿಕ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿರುವ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲು ಕೋಲಾರಕ್ಕೆ ಬಂದಿದ್ದೇನೆ ಎಂದರು.

ಬಿಜೆಪಿ ಸಂಸದರು ಬಂದ ಮೇಲೆ ಕೋಲಾರ ಸಾಕಷ್ಟು ಬದಲಾವಣೆ ಖಂಡಿದೆ. ಕೆಜಿಎಫ್ನಲ್ಲಿ ಇರುವವರು ತಮಿಳುನಾಡು ಹಾಗೂ ಕರ್ನಾಟಕ ಎರಡು ಕಡೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಭಾರತದಲ್ಲಿ ರಾಜಕೀಯವನ್ನ ಎರಡು ಕಡೆ ನೋಡಬಹುದು. ಕರ್ನಾಟಕ ಹಾಗು ತಮಿಳುನಾಡು ಒಗ್ಗಾಟ್ಟಾಗಿರೋದಕ್ಕೆ ಅನೇಕ ನಿದರ್ಶನಗಳಿವೆ. ಬೆಂಗಳೂರಿನಲ್ಲಿ ಸಾಕಷ್ಟು ಮಂದಿ ತಮಿಳುನಾಡಿನವರು ಕೆಲಸ ಮಾಡ್ತಿದ್ದಾರೆ. ಕರ್ನಾಟಕದಿಂದ ತರಕಾರಿ ಸೇರಿದಂತೆ ಅನೇಕ ವಸ್ತುಗಳು ತಮಿಳುನಾಡಿಗೆ ಬರುತ್ತಿದೆ. ಹೀಗಾಗಿ ಕರ್ನಾಟಕ ತಮಿಳುನಾಡು ಅನುನ್ಯವಾಗಿದೆ ಎಂದರು.

ಇನ್ನು ಮೇಕೆದಾಟು ವಿವಾದ ವಿಚಾರ ಕುರಿತು ಅಣ್ಣಾಮಲೈ ಮಾತನಾಡಿದ್ರು, ಕಾಂಗ್ರೆಸ್ ನವರು ಕರ್ನಾಟಕ ಹಾಗೂ ತಮಿಳುನಾಡು ಎಂದು ಬೇರ್ಪಡಿಸ್ತಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನ ಮಾಡುತ್ತೆ. ತಮಿಳುನಾಡು ಮುಖ್ಯಮಂತ್ರಿ ಕರ್ನಾಟಕ ಮುಖ್ಯಮಂತ್ರಿ ಸ್ಪಷ್ಟವಾಗಿ ಇದ್ದಾರೆ ಎಂದರು. ಇನ್ನು ಇದೇ ವೇಳೆ ಪಿಎಸ್ಐ ಹಗರಣ ಕುರಿತು, ತಮಿಳುನಾಡಿನಲ್ಲಿ ರಾಜಕೀಯ ಸಭೆ ಸಮಾರಂಭಗಳಲ್ಲಿ ತುಂಬಾ ಬ್ಯುಸಿ ಇದ್ದೇನೆ. ಪಿಎಸ್ಐ ಹಗರಣ ಕುರಿತು ನನಗೆ ಮಾಹಿತಿ ಇಲ್ಲ. ಅದರ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ಆದ್ರೆ ಯಾರಿಗೂ ಅನ್ಯಾಯವಾಗಬಾರದು. ನೇಮಕಾತಿ ಪಾರದರ್ಶಕವಾಗಿ ಆಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದರು.

ಮಧುರೈ ಅಧೀನಂ ಪೀಠದವರಿಗೆ ಜೀವಭಯ ಇದೆ ಇನ್ನು ಮತ್ತೊಂದೆಡೆ ಮಧುರೈ ಅಧೀನಂ ಪೀಠದ ಉತ್ಸವದಲ್ಲಿ ಪಲ್ಲಕಿ ಬ್ಯಾನ್ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸರ್ಕಾರ ಮೊದಲ ಬಾರಿ ಬಿಜೆಪಿಗೆ ಮಣಿದಿದೆ ಎಂದು ಕೋಲಾರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ರು.

ಉತ್ಸವ ಮೇಲೆ ಹೇರಿದ್ದ ನಿಷೇಧವನ್ನ ಸರ್ಕಾರ ವಾಪಸ್ ಪಡೆದಿದೆ. ಮಾನವ ಹಕ್ಕು ಉಲ್ಲಂಘನೆ ಎಂದು ಸ್ಟಾಲಿನ್ ಸರ್ಕಾರ ಉತ್ಸವದ ಮೇಲೆ ನಿಷೇಧ ಹೇರಿತ್ತು. ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ. ಮಧುರೈ ಅಧೀನಂ ಪೀಠದವರಿಗೆ ಜೀವ ಭಯವಿದೆ. ಹೀಗಾಗಿ ಜೀವಭಯದ ಬಗ್ಗೆ ಪ್ರಧಾನಿ ಮೋದಿಗೆ ದೂರು ನೀಡಲಾಗಿದೆ. ಡಿಎಂಕೆ ತಮಿಳುನಾಡಿಗೆ ಬೇರೆ ರೂಪ ಕೊಡಲು ಯತ್ನಿಸುತ್ತಿದೆ. ಬಿಜೆಪಿ ಹಾಗೂ ಮೋದಿ ಸರ್ಕಾರ ಇದಕ್ಕೆಲ್ಲ ಅವಕಾಶ ನೀಡಲ್ಲ. ತಮಿಳುನಾಡು ಸಂಸ್ಕೃತಿ ಹಾಳು ಮಾಡಲು ಬಿಜೆಪಿ ಬಿಡುವುದಿಲ್ಲ ಎಂದು ಕೋಲಾರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ರು.

ಕೋಲಾರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Sun, 8 May 22

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ