ಕೊಪ್ಪಳದಲ್ಲಿ ಹೆಡ್​ ಕಾನ್ಸ್​ಟೇಬಲ್​ನಿಂದಲೇ ಗೌಪ್ಯ ಮಾಹಿತಿ ಸೋರಿಕೆ: ಹಣ ಕೊಟ್ಟರೇ ಸಿಗುತ್ತೆ ಮೊಬೈಲ್ ನಂಬರ್​, ಟವರ್ ಲೋಕೇಶನ್

ಕೊಪ್ಪಳದಲ್ಲಿ ಹೆಡ್​ ಕಾನ್ಸ್​ಟೇಬಲ್​ನಿಂದಲೇ ಮೊಬೈಲ್ ನಂಬರ್​ಗಳ ಸಿಡಿಆರ್​, ಟವರ್ ಲೋಕೇಶನ್ ಗೌಪ್ಯ ಮಾಹಿತಿ ಸೋರಿಕೆ ಆಗಿರುವಂತಹ ಘಟನೆ ನಡೆದಿದೆ. ಮಾಹಿತಿ ಬಹಿರಂಗ ಮಾಡಿದ ನಗರದ ಸಿಇಎನ್ ಠಾಣೆ ಹೆಡ್ ಕಾನ್ಸ್​ಟೇಬಲ್​ ಕೊಟೇಪ್ಪ ವಿರುದ್ಧ ಸಿಇಎನ್ ಠಾಣೆಯ ಎಎಸ್ಐ ಕೇಸ್​ ದಾಖಲಿಸಿದ್ದು ಎಫ್​ಐಆರ್​ ದಾಖಲಾಗಿದೆ.

ಕೊಪ್ಪಳದಲ್ಲಿ ಹೆಡ್​ ಕಾನ್ಸ್​ಟೇಬಲ್​ನಿಂದಲೇ ಗೌಪ್ಯ ಮಾಹಿತಿ ಸೋರಿಕೆ: ಹಣ ಕೊಟ್ಟರೇ ಸಿಗುತ್ತೆ ಮೊಬೈಲ್ ನಂಬರ್​, ಟವರ್ ಲೋಕೇಶನ್
ಕೊಪ್ಪಳದಲ್ಲಿ ಹೆಡ್​ ಕಾನ್ಸ್​ಟೇಬಲ್​ನಿಂದಲೇ ಗೌಪ್ಯ ಮಾಹಿತಿ ಸೋರಿಕೆ: ಹಣ ಕೊಟ್ಟರೇ ಸಿಗುತ್ತೆ ಮೊಬೈಲ್ ನಂಬರ್​, ಟವರ್ ಲೋಕೇಶನ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 12, 2024 | 3:06 PM

ಕೊಪ್ಪಳ, ಸೆಪ್ಟೆಂಬರ್​​​ 12: ಹೆಡ್​ ಕಾನ್ಸ್​ಟೇಬಲ್​ನಿಂದಲೇ (head constable) ಮೊಬೈಲ್ ನಂಬರ್​ಗಳ ಸಿಡಿಆರ್​, ಟವರ್ ಲೋಕೇಶನ್ ಗೌಪ್ಯ ಮಾಹಿತಿ ಸೋರಿಕೆ ಆಗಿದೆ. ಹಾಗಾಗಿ ಮಾಹಿತಿ ಬಹಿರಂಗಪಡಿಸಿದ ನಗರದ ಸಿಇಎನ್ ಠಾಣೆ ಹೆಡ್ ಕಾನ್ಸ್​ಟೇಬಲ್​ ಕೊಟೇಪ್ಪ ವಿರುದ್ಧ ಸಿಇಎನ್ ಠಾಣೆಯ ಎಎಸ್ಐ ಕೇಸ್​ ದಾಖಲಿಸಿದ್ದಾರೆ. ಆದರೆ 20 ದಿನಗಳಿಂದ‌ ಕೊಟೇಪ್ಪ ನಾಪತ್ತೆಯಾಗಿದ್ದಾರೆ.

ಯಾವುದೇ ಮಾಹಿತಿ‌ ನೀಡಲು ಮೇಲಧಿಕಾರಿಗಳ ಅನುಮತಿ ಕಡ್ಡಾಯ. ಆದರೆ ಯಾರಾದರೂ ಹಣ ಕೊಟ್ಟರೇ  ಸಿಡಿಆರ್, ಟವರ್ ಲೋಕೇಶನ್ ಮಾಹಿತಿ ಮಾಹಿತಿ ನೀಡುತ್ತಿದ್ದರು ಹೆಚ್​ಸಿ ಕೊಟೇಪ್ಪ. 145 ಮೊಬೈಲ್​ ಸಿಡಿಆರ್, 9 ಟವರ್ ಡಂಪ್ ಮಾಹಿತಿ‌ ಸೋರಿಕೆ ಆಗಿದೆ.

ಇತ್ತ ಎಫ್​ಐಆರ್​ ದಾಖಲಾಗುತ್ತಿದ್ದಂತೆ ಹೆಡ್ ಕಾನ್ಸ್​ಟೇಬಲ್ ಪರಾರಿಯಾಗಿದ್ದು, ಕೊಟೇಪ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸಹಿ ನಕಲು ಆರೋಪ: ಮಡಿಕೇರಿ ತಹಶೀಲ್ದಾರ್​ ಕಚೇರಿಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಕೊಡಗು: ಮಡಿಕೇರಿ ತಹಶೀಲ್ದಾರ್​ ಕಚೇರಿಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಅಸ್ವಸ್ಥ ಎಫ್​ಟಿಎ ಪ್ರಜ್ವಲ್​ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕೇಂದ್ರದ ನಾಲ್ವರು ಜಿಎಸ್​ಟಿ ಅಧಿಕಾರಿಗಳ ಬಂಧನ: ಇಲ್ಲಿದೆ ಕಾರಣ?

ಪ್ರಜ್ವಲ್ ವಿರುದ್ಧ ತಹಶೀಲ್ದಾರ್ ಸಹಿ ನಕಲು ಮಾಡಿದ ಆರೋಪ ಕೇಳಿಬಂದಿದೆ. ಹೀಗಾಗಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಕಿ ಕೈಯಲ್ಲಿ ಲಾಕ್ ಆದ ಖತರ್ನಾಕ್ ಅಂತಾರಾಜ್ಯ ಕಳ್ಳಿ

ಚಾಮರಾಜನಗರ: ಮಹಿಳೆಯ ವ್ಯಾನಿಟಿ ಬ್ಯಾಗ್​ನಿಂದ ಕ್ಷಣಾರ್ಧದಲ್ಲಿ ಹಣ, ಚಿನ್ನಾಭರಣ ದೋಚುತ್ತಿದ್ದ ಚಾಲಾಕಿ ಅಂತಾರಾಜ್ಯ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಲಕ್ಷ್ಮೀ ಬಂಧಿತ ಕಳ್ಳಿ. ಈಕೆ ಬಸ್​ನಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದಳು.

ಕಳೆದ ತಿಂಗಳು ದಿನಾಂಕ 9ರಂದು ತಮಿಳುನಾಡಿನ ಸತ್ಯಮಂಗಲಕ್ಕೆ ಪುಷ್ಪಲತಾ ಎಂಬುವವರು ಹೊರಟಿದ್ದರು. ಮದುವೆ ಇದ್ದ ಕಾರಣ 540 ಗ್ರಾಂ ನಷ್ಟು ಚಿನ್ನಾಭರಣವನ್ನ ತಮ್ಮ ವ್ಯಾನಿಟಿ ಬ್ಯಾಗ್​ನಲ್ಲಿ ಕೊಂಡೊಯ್ಯುತ್ತಿದ್ದರು.

ಇದನ್ನೂ ಓದಿ: ಮಂಡ್ಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಭುಗಿಲೆದ್ದ ಗಲಭೆ: ನಿಷೇಧಾಜ್ಞೆ, ಶಾಲೆ-ಕಾಲೇಜುಗಳಿಗೆ ರಜೆ

ಪುಷ್ಟಲತಾ ಪ್ರಯಾಣಿಸುತ್ತಿದ್ದ ಬಸ್​ನಲ್ಲೇ ಆರೋಪಿ ಲಕ್ಷ್ಮೀ ಸಹ ಪ್ರಯಾಣ ಮಾಡುತ್ತಿದ್ದಳು. ಪುಷ್ಪಲತಾರ ಗಮನ ಬೇರೆಡೆ ಸೆಳೆದು ಬರೋಬ್ಬರಿ ಅರ್ಧ ಕೆಜಿ ಚಿನ್ನವನ್ನು ಲಕ್ಷ್ಮೀ ದೋಚಿದ್ದಳು. ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ಲಕ್ಷ್ಮೀಯನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ 430 ಗ್ರಾಂ ಚಿನ್ನಾಭರಣವನ್ನ ಪೊಲೀಸರು ಜಪ್ತಿ ಮಾಡಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.