ಬಿಜೆಪಿಗೆ ಮತ ಹಾಕೋ ಮೂಲಕ ತಂಗಡಗಿಗೆ ಕಪಾಳಕ್ಕೆ ಹೊಡೆದಂತಾಗಬೇಕು: ಬಿವೈ ವಿಜಯೇಂದ್ರ

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತಯಾಚನೆ ಮಾಡಿದರು. ಬಳಿಕ ಮಾತನಾಡಿದ ಅವರು ಬಿಜೆಪಿಗೆ ವೋಟ್ ಹಾಕುವ ಮೂಲಕ ಕನ್ನಡ & ಸಂಸ್ಕೃತಿ ಸಚಿವ ತಂಗಡಗಿಗೆ ಕಪಾಳಕ್ಕೆ ಹೊಡೆದಂತಾಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​​ ಪಕ್ಷದ ಮುಖಂಡರು ದೀಪ ಆರುವಾಗ ಉರಿಯುವ ರೀತಿ ಕಾಂಗ್ರೆಸ್​ನವರು ಹಾರಾಡುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿಗೆ ಮತ ಹಾಕೋ ಮೂಲಕ ತಂಗಡಗಿಗೆ ಕಪಾಳಕ್ಕೆ ಹೊಡೆದಂತಾಗಬೇಕು: ಬಿವೈ ವಿಜಯೇಂದ್ರ
ಬಿಜೆಪಿಗೆ ಮತ ಹಾಕೋ ಮೂಲಕ ತಂಗಡಗಿಗೆ ಕಪಾಳಕ್ಕೆ ಹೊಡೆದಂತಾಗಬೇಕು: ಬಿವೈ ವಿಜಯೇಂದ್ರ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on:May 04, 2024 | 11:28 AM

ಕೊಪ್ಪಳ, ಮೇ 03: ಜಿಲ್ಲೆಯ ಕಾರಟಗಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಮತಯಾಚನೆ ಮಾಡಿದರು. ಎಪಿಎಂಸಿಯಿಂದ ಪಟ್ಟಣ ಪಂಚಾಯಿತಿವರೆಗೆ ರೋಡ್​ಶೋ ಮಾಡಿದ್ದು, ರೋಡ್​ಶೋನಲ್ಲಿ ಶಾಸಕ ಜನಾರ್ದನರೆಡ್ಡಿ, ಎಂಎಲ್​ಸಿ ಹೇಮಲತಾ ಭಾಗಿ ಆಗಿದ್ದರು. ರೋಡ್​ಶೋ ಬಳಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಬಿಜೆಪಿಗೆ ವೋಟ್ ಹಾಕುವ ಮೂಲಕ ಕನ್ನಡ & ಸಂಸ್ಕೃತಿ ಸಚಿವ ತಂಗಡಗಿಗೆ (Shivaraj Tangadagi) ಕಪಾಳಕ್ಕೆ ಹೊಡೆದಂತಾಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್​​ ಪಕ್ಷದ ಮುಖಂಡರು ದೀಪ ಆರುವಾಗ ಉರಿಯುವ ರೀತಿ ಕಾಂಗ್ರೆಸ್​ನವರು ಹಾರಾಡುತ್ತಿದ್ದಾರೆ. ಜೂನ್ 4ರ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಆಟ ನಡೆಯುವುದಿಲ್ಲ. ಬಿಜೆಪಿಯಲ್ಲಿ ಟಿಕೆಟ್​ ಸಿಕ್ಕಿಲ್ಲ ಅಂತಾ ಕೆಲವರು ಪಕ್ಷ ಬಿಟ್ಟು ಹೋಗಿದ್ದಾರೆ. ಅವರಿಗೂ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಕಿಡಿಕಾರಿದ್ದಾರೆ.

ಶಿವರಾಜ ತಂಗಡಗಿ ಕ್ಷೇತ್ರ ಕಾರಟಗಿಯಲ್ಲೇ ಜನಾರ್ದನ ರೆಡ್ಡಿ ವಾಗ್ದಾಳಿ

ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ತಂಗಡಗಿ ನನ್ನ ಬಳಿ ಹಣ ತೆಗೆದುಕೊಂಡು ಬಂದು ಚುನಾವಣೆಯಲ್ಲಿ ಗೆದ್ದಿದ್ದ. ಶಿವರಾಜ ತಂಗಡಗಿಯನ್ನು ಮೊದಲ ಬಾರಿಗೆ ಮಂತ್ರಿಮಾಡಿದ್ದು ನಾನು. ಶಿವರಾಜ ತಂಗಡಗಿ ಅಧಿಕಾರದ ಮದದಿಂದ ವರ್ತನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಕೆಣಕಿದರೆ ಸುಮ್ಮನಿರಲ್ಲ ಅಂತ ಹೇಳುವ ಕುಮಾರಸ್ವಾಮಿ ನಾಗರಹಾವೇ ಇಲ್ಲ ಹೆಬ್ಬಾವೇ? ಚಲುವರಾಯಸ್ವಾಮಿ

ಮೋದಿ ಮೋದಿ ಅಂದ್ರೆ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿದ್ದಾನೆ. ತಮ್ಮ ತಂಗಡಗಿ.. ನಾನು ಕಾರಟಗಿ ಬಸ್ ನಿಲ್ದಾಣದ ಮುಂದೆ ನಿಂತಿದ್ದೇನೆ. ನಮ್ಮ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗ್ತಿದ್ದಾರೆ, ನಿನಗೆ ಧಮ್ ಇದ್ರೆ ಬಂದು ಬಿಜೆಪಿ ಕಾರ್ಯಕರ್ತರ ಕಪಾಳಕ್ಕೆ ಹೊಡಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರಿಗೆ ತಟ್ಟಿದ ಉತ್ತರ ಕರ್ನಾಟಕದ ಬಿಸಿಲಿನ ಝಳ: 1 ಗಂಟೆ ಮತದಾನದ ಅವಧಿ ವಿಸ್ತರಣೆಗೆ ಮನವಿ

ತಂಗಡಗಿ ಕೇವಲ ನೀನೊಬ್ಬ ಮಂತ್ರಿ, ಮೋದಿ ಬಗ್ಗೆ ಮಾತನಾಡುತ್ತೀಯಾ? ತಂಗಡಗಿ ನನ್ನನ್ನು ಬೆತ್ತಲು ಮಾಡುವುದಾಗಿ ಹೇಳಿಕೆ ನೀಡಿದ್ದಾನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ನನ್ನನ್ನು ಏನುಮಾಡಲು ಆಗಿಲ್ಲ. ತಂಗಡಗಿ ಸಚಿವಸ್ಥಾನ ಕಿತ್ತಾಕಲು ಬಸವರಾಜ ರಾಯರೆಡ್ಡಿ ಸಿದ್ಧನಿದ್ದಾನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:32 pm, Fri, 3 May 24

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ