ಕೊಪ್ಪಳ: ಸವರ್ಣೀಯರು- ದಲಿತರ ನಡುವೆ ಘರ್ಷಣೆ, 101 ಆರೋಪಿಗಳು ಅಪರಾಧಿಗಳು

ಇಡೀ ದೇಶದ ಗಮನ ಸೆಳದಿದ್ದ ಕೊಪ್ಪಳ ಜಿಲ್ಲೆಯಲ್ಲಿನ ದಲಿತರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಆರೋಪಿಗಳನ್ನು ಕೋರ್ಟ್​ ಅಪರಾಧಿಗಳು ಎಂದು ತೀರ್ಪು ಪ್ರಕಟಿಸಿದೆ. ಅಟ್ರಾಸಿಟಿ ಪ್ರಕರಣದಲ್ಲಿ ಏಕಕಾಲದಲ್ಲಿ ಬರೋಬ್ಬರಿ 101 ಆರೋಪಿಗಳನ್ನು ಕೋರ್ಟ್​ ಅಪರಾಧಿಗಳು ಎಂದು ತೀರ್ಪು ನೀಡಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಹಾಗಾದ್ರೆ, ಏನಿದು ಪ್ರಕರಣ? ಸವರ್ಣೀಯರು ಮತ್ತು ದಲಿತರ ನಡುವಿನ ಘರ್ಷಣೆಗೆ ಕಾರಣವೇನು? ಎನ್ನುವ ಡಿಟೇಲ್ ಇಲ್ಲಿದೆ.

ಕೊಪ್ಪಳ: ಸವರ್ಣೀಯರು- ದಲಿತರ ನಡುವೆ ಘರ್ಷಣೆ, 101 ಆರೋಪಿಗಳು ಅಪರಾಧಿಗಳು
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 22, 2024 | 4:30 PM

ಕೊಪ್ಪಳ, (ಅಕ್ಟೋಬರ್ 22): ಜಿಲ್ಲೆಯ  ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ಅಸ್ಪ್ರಶ್ಯತೆ ವಿಚಾರದಲ್ಲಿ ಶುರುವಾದ ವೈಷಮ್ಯ ಸಿನಿಮಾ ಟಿಕೆಟ್ ವಿಚಾರದಲ್ಲಿ ಜಗಳವಾಗಿದೆ. ಅದು ವಿಕೋಪಕ್ಕೆ ಹೋಗಿದ್ದು, ಬಳಿಕ ಗ್ರಾಮದ ಅನೇಕ ದಲಿತ ಕುಟುಂಬಗಳ ಮೇಲೆ ಸವರ್ಣಿಯರು ದಾಳಿ ಮಾಡಿ, ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಅಂದು ನಡೆದಿದ್ದ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಆದ್ರೆ ಇದೇ ಪ್ರಕರಣದಲ್ಲಿ ಇದೀಗ 101 ಜನ ಆರೋಪಿಗಳನ್ನು ಕೊಪ್ಪಳ ನ್ಯಾಯಾಲಯ ಅಪರಾಧಿಗಳು ಎಂದು ತೀರ್ಪು ನೀಡಿದೆ. ಈ ಮೂಲಕ ಅಟ್ರಾಸಿಟಿ ಪ್ರಕರಣದಲ್ಲಿ ಏಕಕಾಲದಲ್ಲಿ 101 ಆರೋಪಿಗಳು ಅಪರಾಧಿಗಳು ಎಂದು ಕೋರ್ಟ್​ ಆದೇಶಿಸಿರುವುದು ಇದೇ ಮೊದಲು ಎನ್ನಲಾಗಿದೆ. ಇನ್ನು ಇದೇ ಅಕ್ಟೋಬರ್ 24ರಂದು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿಸುವುದಾಗಿ ಕೋರ್ಟ್ ತಿಳಿಸಿದೆ.

ಪ್ರಕರಣದ ವಿವರ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಆಗಸ್ಟ್ 28, 2014 ರಂದು ಇಡೀ ದೇಶವೇ ಬೆಚ್ಚಿಬೀಳಿಸುವಂತಹ ಘಟನೆ ನಡೆದಿತ್ತು. ದಲಿತರ ಕೇರಿಗೆ ನುಗ್ಗಿದ್ದ ಗ್ರಾಮದ ನೂರಾರು ಸವರ್ಣೀಯರು, ದಲಿತರಿಗೆ ಸೇರಿದ್ದ ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಅನೇಕರ ಮೇಲೆ ಸಿಕ್ಕಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದರು. ಬೆಂಕಿ ಅವಘಡದಲ್ಲಿ ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದವು. ಅಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ರು ಕೂಡಾ ಗುಡಿಸಲುಗಳು ಭಸ್ಮವಾಗಿ ಹೋಗಿದ್ದವು. ಅದೃಷ್ಟವೆನ್ನುವಂತೆ ಗುಡಿಸಲುಗಳಲ್ಲಿ ಯಾರು ಇಲ್ಲದೇ ಇದ್ದಿದ್ದರಿಂದ ಅಂದು ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಕೇವಲ ಬೆಂಕಿ ಹಚ್ಚಿದ್ದು ಮಾತ್ರವಲ್ಲ ಅಂದು 27 ದಲಿತರ ಮೇಲೆ ಹಲ್ಲೆಯಾಗಿತ್ತು. ಈ ಬಗ್ಗೆ ಅಂದು ಘಟನೆಯಲ್ಲಿ ಗಾಯಗೊಂಡವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸವರ್ಣೀಯರ ವಿರುದ್ದ ಜಾತಿ ನಿಂದನೆ (ಅಟ್ರಾಸಿಟಿ), ಕೊಲೆಗೆ ಯತ್ನ ಸೇರಿದಂತೆ ಅನೇಕ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದು, ಬರೋಬ್ಬರಿ 117 ಸವರ್ಣೀಯರ ಮೇಲೆ ಎಫ್​ಐಆರ್ ದಾಖಲಾಗಿತ್ತು.

ಇದನ್ನೂ ಓದಿ: ಕೊಪ್ಪಳ: ಹಾಲವರ್ತಿ ಗ್ರಾಮದಲ್ಲಿ ಅಸ್ಪಶ್ಯತೆ ಜೀವಂತ, ದಲಿತರ ಕಟಿಂಗ್​ಗೆ ನಿರಾಕರಣೆ, ಹೋಟೆಲ್​​ನಲ್ಲಿ ತಟ್ಟೆ ನೀಡದ ಸಿಬ್ಬಂದಿ

ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ನಡೆದಿದ್ದ ದೌರ್ಜನ್ಯ, ದೇಶಾದ್ಯಂತ ಸುದ್ದಿಯಾಗಿತ್ತು. ಘಟನೆ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಎಲ್ಲರು ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದ್ರೆ ಕಳೆದ ಹತ್ತು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಲೇ ಇತ್ತು. ಆರಂಭದಲ್ಲಿ ಕೊಪ್ಪಳ ಸೆಷನ್ ಕೋರ್ಟ್ ನಲ್ಲಿದ್ದ ವಿಚಾರಣೆ ನಂತರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ಬಗ್ಗೆ ನಿನ್ನೆ(ಅ.21) ವಿಚಾರಣೆ ನಡೆಸಿದ ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ಅಂದು ಘಟನೆಯಲ್ಲಿ ಬಾಗಿಯಾಗಿದ್ದ 101 ಜನರು ಅಪರಾಧಿಗಳು ಎಂದು ಆದೇಶ ಹೊರಡಿಸಿದ್ದಾರೆ. ಹೌದು 117 ಜನರ ಪೈಕಿ ಈಗಾಗಲೇ ಅನೇಕರು ಬಾರದ ಲೋಕಕ್ಕೆ ಹೋಗಿದ್ದು, ಉಳಿದ 101 ಜನರು ಅಪರಾಧಿಗಳು ಎಂದು ತೀರ್ಪು ನೀಡಿದ್ದಾರೆ.

ಇನ್ನು ಕೋರ್ಟ್​ ತೀರ್ಪು ಹೊರಬೀಳುತ್ತಿದ್ದಂತೆಯೇ ಕೊಪ್ಪಳ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದ 100 ಅಪರಾಧಿಗಳನ್ನು ಪೊಲೀಸರು ಬಂಧಿಸಿ, ಕೊಪ್ಪಳ ಜಿಲ್ಲಾ ಉಪ ಕಾರಾಗೃಹಕ್ಕೆ ಕೊರೆದೊಯ್ದಿದ್ದಾರೆ. ಇನ್ನೋರ್ವ ಆರೋಪಿಯನ್ನು ಬಂಧನಕ್ಕಾಗಿ ಕೂಡಾ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನು ಇದೇ ಅಕ್ಟೋಬರ್ 24 ರಂದು 101 ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಘೋಷಣೆ ಮಾಡುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ದೂರುದಾರರ ಪರವಾಗಿ ಕಾನೂನು ಹೋರಾಟ ನಡೆಸಿದ್ದ ಸರ್ಕಾರಿ ಅಭಿಯೋಜಕಿ ಅರ್ಪಣಾ ಅವರು ಪ್ರತಿಕ್ರಿಯಿಸಿ. ಅಟ್ರಾಸಿಟಿ ಪ್ರಕರಣದಲ್ಲಿ ಏಕಕಾಲದಲ್ಲಿ ಇಷ್ಟೊಂದು ಜನರು ಅಪರಾಧಿಗಳು ಎಂದು ಘೋಷಣೆಯಾಗಿದ್ದು ಐತಿಹಾಸಿಕವಾಗಿದೆ ಎಂದಿದ್ದಾರೆ.

ಸವರ್ಣೀಯರು-ದಲಿತರ ನಡುವಿನ ಘರ್ಷಣೆಗೆ ಕಾರಣವೇನು?

ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ದೊಡ್ಡ ಮಟ್ಟದ ಘರ್ಷಣೆಗೆ ಕಾರಣ, ಗ್ರಾಮದಲ್ಲಿದ್ದ ಅಸ್ಪ್ರಶ್ಯತೆ. ಹೌದು.. ಗ್ರಾಮದಲ್ಲಿ ಸವರ್ಣೀಯರು ನಡೆಸುತ್ತಿದ್ದ ಅಸ್ಪ್ಪಶ್ಯತೆಯನ್ನು ಗ್ರಾಮದ ದಲಿತರು ಖಂಡಿಸಿದ್ದರು. ಇದರಿಂದ ಸವರ್ಣೀಯರು ಮತ್ತು ದಲಿತರ ನಡುವೆ ಆರೋಪ, ಪ್ರತ್ಯಾರೋಪ, ದೂರು ಪ್ರತಿದೂರು ನೀಡುವುದು ನಡದೇ ಇತ್ತು. ಆದ್ರೆ ಆಗಸ್ಟ್ 28 , 2014 ರಂದು ಗಂಗಾವತಿ ನಗರದಲ್ಲಿರುವ ಶಿವ ಚಿತ್ರಮಂದಿರದಲ್ಲಿ ಇದೇ ಮರಕುಂಬಿ ಗ್ರಾಮದ ಮಂಜುನಾಥ ಮತ್ತು ಸ್ನೇಹಿತರು ಪವರ್ ಸಿನಿಮಾ ನೋಡಲು ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ಪಡೆಯೋ ವಿಚಾರದಲ್ಲಿ ಜಗಳ ಆರಂಭವಾಗಿತ್ತು. ಮಂಜುನಾಥ್ ಮತ್ತು ಸ್ನೇಹಿತರು, ನಮ್ಮೂರಿನ ದಲಿತರು ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಅಂತ ಗ್ರಾಮದಲ್ಲಿ ಹೇಳಿದ್ದ. ಇದು ಸವರ್ಣೀಯ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಅಂದು ಸಂಜೆ ಗ್ರಾಮದ ಸವರ್ಣೀಯರು, ದಲಿತರ ಕೇರಿಗೆ ನುಗ್ಗಿ ದಾಂದಲೆ ಮಾಡಿ, ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು.

ಘಟನೆ ನಂತರ ಗ್ರಾಮದಲ್ಲಿ ಅನೇಕ ತಿಂಗಳ ಕಾಲ ಪೊಲೀಸರು ಬೀಡು ಬಿಟ್ಟಿದ್ದರು. ಶಾಂತಿ ಸಭೆಗಳು ನಡೆದಿದ್ದವು. ಘಟನೆ ನಂತರ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರು ಹಳೆಯ ವೈಷಮ್ಯ ಮರೆತು ಸಹೋದರರಂತೆ ಬದುಕುತ್ತಿದ್ದಾರೆ. ಆದ್ರೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರಿಂದ, ನಿನ್ನೆ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾದೀಶರು, ಅಂದು ಕೃತ್ಯದಲ್ಲಿ ಬಾಗಿಯಾಗಿದ್ದ 101 ಜನರು ಅಪರಾಧಿಗಳು ಅಂತ ತೀರ್ಪು ನೀಡಿದ್ದಾರೆ. ಸದ್ಯ ನಾವು ಎಲ್ಲರು ಬಾಂಧವ್ಯದಿಂದ ಇದ್ದೇವೆ. ಆದ್ರೆ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥ ಮಾಡಿಕೊಳ್ಳಲು ನಾವು ಯತ್ನಿಸಿದರು, ಗ್ರಾಮದ ಕೆಲ ಸವರ್ಣೀಯರು ಒಪ್ಪಿಲಿಲ್ಲ. ಇದೀಗ ನ್ಯಾಯಾಲಯದ ಆದೇಶವಾಗಿದೆ. ನ್ಯಾಯಾಲಯದ ಆದೇಶವನ್ನು ಎಲ್ಲರು ಪಾಲಿಸಬೇಕಾಗುತ್ತದೆ ಅಂತಾರೆ ಗ್ರಾಮದ ಬಸವರಾಜ್.

ಸದ್ಯ 101 ಜನರು ಅಪರಾಧಿಗಳು ಎಂದು ನ್ಯಾಯಲಯ ತೀರ್ಪು ನೀಡಿದ್ದು, ಇದೇ ಅಕ್ಟೋಬರ್ 24 ರಂದು 101 ಜನ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಘೋಷಣೆ ಮಾಡಲಿದ್ದಾರೆ. ಹೀಗಾಗಿ ಕೋರ್ಟ್ ಏನು ಶಿಕ್ಷೆ ನೀಡುತ್ತೆ ಎಂದು ಅಪರಾಧಿಗಳಿಗೆ ಆತಂಕ ಶುರುವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ