ಕೊಪ್ಪಳದ ಗ್ರಾಮವೊಂದರಲ್ಲಿ ಮದ್ಯ, ಬೀಡಿ, ಗುಟ್ಕಾ ಮಾರಾಟ ಮತ್ತು ಹೊಟೇಲ್​ಗಳಿಗೆ ನಿಷೇಧ

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಯಾವುದೇ ಹೋಟೆಲ್ ಇಲ್ಲ. ಬೀಡಿ, ಗುಟ್ಕಾ, ಸಿಗರೇಟ್ ಕೂಡ ಮಾರಾಟ ಮಾಡುವಂತಿಲ್ಲ. ಸುಸ್ಥಿರ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಈ ಗ್ರಾಮ, ಅಪ್ಪಟ ಗಾಂಧೀಜಿ ತತ್ವಗಳನ್ನು ಅನುಸರಿಸುತ್ತಿದೆ.

ಕೊಪ್ಪಳದ ಗ್ರಾಮವೊಂದರಲ್ಲಿ ಮದ್ಯ, ಬೀಡಿ, ಗುಟ್ಕಾ ಮಾರಾಟ ಮತ್ತು ಹೊಟೇಲ್​ಗಳಿಗೆ ನಿಷೇಧ
ಕಾಮನೂರ ಹಳ್ಳಿ
Follow us
| Updated By: ವಿವೇಕ ಬಿರಾದಾರ

Updated on: Oct 02, 2024 | 12:47 PM

ಕೊಪ್ಪಳ, ಅಕ್ಟೋಬರ್​ 02: ಕೊಪ್ಪಳ (Koppal) ತಾಲೂಕಿನ ಕಾಮನೂರು ಆಧುನಿಕ ಭಾರತದ ಗಾಂಧಿ ಗ್ರಾಮದಂತೆ ಇದೆ. ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿದ್ದು, ಮೂರು ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಇಂತಹ ಗ್ರಾಮದಲ್ಲಿ ಒಂದೇ ಒಂದು ಹೋಟೆಲ್ ಇಲ್ಲ. ಗ್ರಾಮದಲ್ಲಿ ಮದ್ಯ (Alcohol) ಮಾರಾಟಕ್ಕೆ ಅವಕಾಶವಿಲ್ಲ. ಗ್ರಾಮದಲ್ಲಿರುವ ಕಿರಾಣಿ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಗುಟ್ಕಾ, ಬಿಡಿ, ಸಿಗರೇಟ್, ಪಾನ್ ಮಸಾಲಾ ಮಾರಾಟ ಮಾಡುವಂತಿಲ್ಲ. ಇಂತಹದೊಂದು ಅಲಿಖಿತ ನಿಮಯವನ್ನು ಗ್ರಾಮದ ಜನರು ಕಳೆದ ಮೂರು ದಶಕಗಳಿಗಿಂತ ಪಾಲಿಸಿಕೊಂಡು ಬರುತ್ತಿದ್ದಾರೆ.

ಕಾಮನೂರು ಗ್ರಾಮದಲ್ಲಿ ಕೂಡ ಈ ಮೊದಲು ಬಿಡಿ, ಸಿಗರೇಟ್, ಮದ್ಯ ಮಾರಾಟವಿತ್ತು. ಆದರೆ, ಗ್ರಾಮದ ಜನರು ದುಶ್ಟಟಗಳ ದಾಸರಾಗಿ, ದುಡಿಮೆಯಿಂದ ವಿಮುಕ್ತರಾಗುತ್ತಿದ್ದರು. ಕುಟುಂಬಗಳ ನೆಮ್ಮದಿ ಕೂಡಾ ಹಾಳಾಗಿತ್ತು. ಹೀಗಾಗಿ ಮೂರು ದಶಕಗಳ ಹಿಂದೆಯೇ ಗ್ರಾಮದ ಜನರು ಒಟ್ಟಾಗಿ ಕೂತು ಚರ್ಚಿಸಿ, ಗ್ರಾಮದಲ್ಲಿ ಮದ್ಯ ಗುಟ್ಕಾ, ಬೀಡಿ, ಸಿಗರೇಟ್​ನ್ನು ನಿಷೇಧ ಮಾಡಿದ್ದಾರೆ. ಯಾರು ಕೂಡ ಯಾವುದೇ ಕಾರಣಕ್ಕೂ ಇವುಗಳನ್ನು ಮಾರಾಟ ಮಾಡಬಾರದು ಅಂತ ಅಲಿಖಿತ ನಿಯಮ ರೂಪಿಸಿದ್ದಾರೆ.

ಅಂದು ರೂಪಿಸಿರುವ ನಿಯಮವನ್ನು ಇಂದಿಗೂ ಗ್ರಾಮದ ಜನರು ಪಾಲಿಸಿಕೊಂಡು ಬಂದಿದ್ದಾರೆ. ಇದನ್ನು ಹೊರತು ಪಡಿಸಿಯೂ ಯಾರಾದರು ಅನಧಿಕೃತವಾಗಿ ಮಾರಾಟ ಮಾಡಿದರೆ, ಅವರನ್ನು ಪತ್ತೆ ಮಾಡಿ, ಅವರಿಗೆ ದಂಡ ಹಾಕುವ ಮೂಲಕ ಅಕ್ರಮ ಕೆಲಸಕ್ಕೆ ಗ್ರಾಮಸ್ಥರು ಬ್ರೇಕ್ ಹಾಕುತ್ತಿದ್ದಾರೆ.

ಇದನ್ನೂ ಓದಿ: ಶವ ಸಂಸ್ಕಾರಕ್ಕೂ ಪರದಾಟ, ರಸ್ತೆ ಇಲ್ಲದೆ ಭತ್ತದ ಗದ್ದೆ ಮೂಲಕ ಸ್ಮಶಾನ ತಲುಪುವ ಸ್ಥಿತಿ

ಗಾಂಧೀಜಿ ತತ್ವಗಳನ್ನು ಗೊತ್ತಿದ್ದೋ, ಗೊತ್ತಿಲದೆಯೋ ಪಾಲಿಸಿಕೊಂಡು ಬರುವ ಕೆಲಸವನ್ನು ಗ್ರಾಮದ ಜನರು ಮಾಡುತ್ತಿದ್ದಾರೆ. ತಮ್ಮೂರಿನ ಜನರ ಶಾಂತಿಗಾಗಿ, ಜನರ ಒಳತಿಗಾಗಿ ಇಂತಹದೊಂದು ಕ್ರಮ ಕೈಗೊಳ್ಳಲಾಗಿದೆ. ಇಂದರಿಂದ ಜನರು ಶಾಂತಿಯುತ ಮತ್ತು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.

ಗಾಂಧೀಜಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ಇಂದು (ಅ.02) ಕೊಪ್ಪಳದಿಂದ ನೂರಾರು ಗಾಂಧಿ ಅಭಿಮಾನಿಗಳು ಆಗಮಿಸಿ ಚಿಂತನ ಮಂಥನ ಸಬೆ ನಡೆಸಿದರು. ಗ್ರಾಮದ ಜನರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಮನೂರು ಗ್ರಾಮ ಹತ್ತಾರು ವಿಶೇಷತೆಗಳೊಂದಿಗೆ ಉಳಿದ ಗ್ರಾಮಗಳಿಗೆ ಆದರ್ಶವಾಗಿದೆ. ಅಶಾಂತಿಯ ತಾಣಗಳಾಗಿರುವ ಗ್ರಾಮಗಳಲ್ಲಿ ಗಾಂಧಿ ತತ್ವಗಳನ್ನು ಜಾರಿಗೆ ತಂದರೆ ಗ್ರಾಮಗಳು ಶಾಂತಿಯ ಕೇಂದ್ರಗಳಾಗುತ್ತವೆ. ಈ ನಿಟ್ಟಿನಲ್ಲಿ ಕಾಮನೂರು ಗ್ರಾಮ ಉಳಿದ ಗ್ರಾಮಗಳಿಗೆ ಮಾದರಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ