ಕೊಪ್ಪಳ: ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದ ಎಂದು ದಂಡ ಹಾಕಿದ್ದ ಐವರ ಬಂಧನ

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ದೂರು ಆಧರಿಸಿ ಕನಕಪ್ಪ ಪೂಜಾರಿ, ಹನುಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ, ಹಾಗೂ ಶರಣಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಪ್ಪಳ: ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದ ಎಂದು ದಂಡ ಹಾಕಿದ್ದ ಐವರ ಬಂಧನ
ದಲಿತ ವ್ಯಕ್ತಿ ದೇಗುಲ ಪ್ರವೇಶ ಮಾಡಿದ್ದಕ್ಕೆ ದಂಡ; ಎಂಟು ಜನರ ವಿರುದ್ಧ ಪ್ರಕರಣ ದಾಖಲು

ಕೊಪ್ಪಳ: ಮಿಯಾಪೂರದಲ್ಲಿ ದಲಿತ ಬಾಲಕ ದೇವಸ್ಥಾನ ಪ್ರವೇಶಿದ್ದಕ್ಕೆ ದಂಡ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಕುಷ್ಟಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿಚಾರಣೆ ನಡೆಯುತ್ತಿದೆ.  ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ದೂರು ಆಧರಿಸಿ ಕನಕಪ್ಪ ಪೂಜಾರಿ, ಹನುಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ, ಹಾಗೂ ಶರಣಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸೆಪ್ಟೆಂಬರ್ 4 ರಂದು ತನ್ನ ಹುಟ್ಟು ಹಬ್ಬ ಇದ್ದ ಕಾರಣ ನಾಲ್ಕು ವರ್ಷದ ದಲಿತ ಚೆನ್ಮದಾಸರ ಸಮುದಾಯದ ಬಾಲಕ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಯಾಪೂರ ಗ್ರಾಮದಲ್ಲಿನ ದೇವಸ್ಥಾನಕ್ಕೆ ಪ್ರವೇಶಿಸಿದ್ದ. ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದೇವಸ್ಥಾನದ ಅರ್ಚಕ ಹಾಗೂ ಗ್ರಾಮಸ್ಥರು ದೇವಾಲಯಕ್ಕೆ ಸ್ಯಾನಿಟೈಸರ್ ಹೊಡೆಯಲು 10 ಸಾವಿರ ಹಾಘೂ 25 ಸಾವಿರ ದಂಡ ಹಾಕಿದ್ದರು.

ಇದಾದ ಬಳಿಕ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳು, ಪೊಲೀಸರು ಶಾಂತಿ ಸಭೆ ಮಾಡಿದ್ರು. ವಿಷಯ ಗಂಭೀರವಾಗಿದ್ರೂ ಬಾಲಕನ ತಂದೆ ದೂರು ಕೊಡಲು ನಿರಾಕರಿಸಿದ್ರು. ಬಾಲಕನ ತಂದೆ ನಿರಾಕರಣೆ ಮಾಡಿದ ಹಿನ್ನಲೆ ಸಮಾಜ ಕಲ್ಯಾಣ ಅಧಿಕಾರಿಗಳಿಂದ ದೂರು ದಾಖಲಿಸಿದ್ದರು. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ದ  IPC ಸೆಕ್ಷನ್ 504, 149, SC-ST ಆ್ಯಕ್ಟ್ 2005ರಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಟಿವಿ9ಗೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಮಿಯಾಪೂರ ಗ್ರಾಮಕ್ಕೆ ಅಧಿಕಾರಿಗಳ ದಂಡು ಭೇಟಿ ನೀಡಿದೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್, ಎಸ್ ಪಿ.ಟಿ ಶ್ರೀಧರ್ ಭೇಟಿ ನೀಡಿ ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಇದೊಂದು ನಾಚಿಕೆಗೇಡಿತನ ಸಂಗತಿ. ತೀರಾ ಅನಿಷ್ಟ ಪದ್ದತಿ ಎಂದು ಮುಖಂಡರ ಸಭೆಯಲ್ಲಿ ವಿಕಾಸ್ ಕಿಶೋರ್ ಗರಂ ಆಗಿದ್ದಾರೆ. ಹಾಗೂ ಮೊದಲು ನಮ್ಮ ಮನಸ್ಸನ್ನು ಸ್ವಚ್ಚಗೊಳಿಸಬೇಕೆಂದು ಗ್ರಾಮದ ಜನರಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಬಾಲಕನಿಗೆ ದಂಡ ಹಾಕಿದ ಗ್ರಾಮಸ್ಥರು, ಸಭೆ ಮಾಡಿ ದೇಗುಲ ಪ್ರವೇಶಿಸಿದ ದಲಿತ ಸಮುದಾಯದ ಜನ

ಕೊಪ್ಪಳ: ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ದಲಿತರ ಪರದಾಟ

Read Full Article

Click on your DTH Provider to Add TV9 Kannada