ಗಂಗಾವತಿ ಬೀದಿ ದೀಪ ಕಂಬಗಳ ಅಳವಡಿಕೆ ವಿವಾದ; ಒಂದೇ ದಿನದಲ್ಲಿ ಎರಡೆರಡು ಆದೇಶ ಹೊರಡಿಸಿದ ತಹಶೀಲ್ದಾರ್

ಅದು ರಾಮನ ಬಂಟ ಹನುಮನ ಜನ್ಮಸ್ಥಳ ಇರುವ ತಾಲೂಕು ಪ್ರದೇಶ. ಅನೇಕ ಐತಿಹಾಸಿಕ ಸ್ಥಳಗಳು ಆ ನಗರದ ಸುತ್ತಮುತ್ತ ಇವೆ. ಇದೇ ಕಾರಣಕ್ಕೆ, ಪ್ರವಾಸಿಗರು ಬಂದಾಗ ಅವರಿಗೆ ಧಾರ್ಮಿಕ ಭಾವನೆ ಬರಲಿ ಎನ್ನುವ ಉದ್ದೇಶದಿಂದ ಬೀದಿ ದೀಪಗಳ ಕಂಬಗಳಲ್ಲಿ ಗದೆ, ಬಿಲ್ಲು-ಬಾಣ, ತಿರುಪತಿ ತಿಮ್ಮಪ್ಪನ ನಾಮದ ಸಂಕೇತಗಳನ್ನು ಅಳವಡಿಸಲಾಗಿತ್ತು. ಆದ್ರೆ, ಅದಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಕೆಲಸ ಸ್ಥಗತಗೊಂಡಿದ್ದು, ಯಾವುದೇ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಶಾಸಕ ಜನಾರ್ಧನ ರೆಡ್ಡಿ ಹಠಕ್ಕೆ ಬಿದ್ದಿದ್ದಾರೆ.

ಗಂಗಾವತಿ ಬೀದಿ ದೀಪ ಕಂಬಗಳ ಅಳವಡಿಕೆ ವಿವಾದ; ಒಂದೇ ದಿನದಲ್ಲಿ ಎರಡೆರಡು ಆದೇಶ ಹೊರಡಿಸಿದ ತಹಶೀಲ್ದಾರ್
, ಗಂಗಾವತಿ ಬೀದಿ ದೀಪ ಕಂಬಗಳ ಅಳವಡಿಕೆ ವಿವಾದ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 29, 2024 | 3:45 PM

ಕೊಪ್ಪಳ, ಆ.29: ಬೀದಿ ದೀಪದ ಕಂಬಗಳಲ್ಲಿ ಬಿಲ್ಲು ಬಾಣ, ಗದೆ ಮತ್ತು ತಿರುಪತಿ ತಿಮ್ಮಪ್ಪನ ಸಂಕೇತ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದಡೆ ಎಸ್​ಡಿಪಿಐ, ಕಂಬಗಳ ತೆರವಿಗೆ ಆಗ್ರಹಿಸುತ್ತಿದ್ದರೆ, ಇನ್ನೊಂದೆಡೆ ಶಾಸಕ ಜನಾರ್ಧನ ರೆಡ್ಡಿ (Janardhana Reddy) ಯಾವುದೇ ಕಾರಣಕ್ಕೂ ಕೂಡ ಕಂಬಗಳನ್ನು ತೆರವು ಮಾಡಲು ಬಿಡಲ್ಲ ಎಂದು ಹೇಳಿದ್ದರು. ಆದ್ರೆ, ಇದೀಗ ತಹಶೀಲ್ದಾರ್ ಅವರು ವಿವಾದಿತ ಕಂಬಗಳ ತೆರವು ಮಾಡಬೇಕು, ಜೊತೆಗೆ ಕಂಬ ಅಳವಡಿಸಿರುವ ಸಂಸ್ಥೆ ವಿರುದ್ದ ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಆದ್ರೆ, ಇದು ಮತ್ತೊಂದು ವಿವಾದ ಪಡೆಯುತ್ತಿದ್ದಂತೆ ತಹಶೀಲ್ದಾರ್ ತಾವೇ ಪೊಲೀಸರಿಗೆ ಬರೆದಿದ್ದ ಪತ್ರವನ್ನು ಹಿಂಪಡೆದಿದ್ದಾರೆ.

ಗಂಗಾವತಿಯಲ್ಲಿ ವಿವಾದ ಸ್ವರೂಪ ಪಡೆದ ಬೀದಿ ದೀಪ ಕಂಬಗಳ ಅಳವಡಿಕೆ

ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ರಸ್ತೆ ಪಕ್ಕದಲ್ಲಿ, ರಸ್ತೆಯ ಮಧ್ಯಭಾಗದಲ್ಲಿ ಬೀದಿ ದೀಪ ಕಂಬಗಳನ್ನು ನಿಲ್ಲಿಸಲಾಗುತ್ತದೆ. ಅನೇಕ ಕಡೆ ಜನರು ನಮ್ಮ ಏರಿಯಾದಲ್ಲಿ ರಸ್ತೆಗಳಲ್ಲಿ ಸ್ಟ್ರೀಟ್ ಲೈಟ್ ಕಂಬಗಳನ್ನು ಹಾಕಿ ಎಂದು ಆಗ್ರಹಿಸುತ್ತಲೇ ಇರುತ್ತಾರೆ. ಆದ್ರೆ, ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ವಿದ್ಯುತ್ ಕಂಬಗಳನ್ನು ಹಾಕುವುದರ ಜೊತೆಗೆ ಹಿಂದೂ ಧರ್ಮದ ಕೆಲ ದೇವರ ಸಂಕೇತಗಳನ್ನು ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಕಾಂಗ್ರೆಸ್​ನಲ್ಲಿ ಬಣ ಬಡಿದಾಟ: ಬಿಜೆಪಿ ಕಡೆಯಿಂದ ಗಂಗಾವತಿ ನಗರಸಭೆ ಅಧ್ಯಕ್ಷನಾದ ಮುಸ್ಲಿಂ ಸದಸ್ಯ

ಹೌದು, ಗಂಗಾವತಿ ಪಟ್ಟಣದ ಜುಲೈ ನಗರ ಕ್ರಾಸ್​ನಿಂದ ಸಿಬಿಎಸ್ ಸರ್ಕಲ್​ವರೆಗೆ ಹದಿನೈದಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಕೆಲ ದಿನಗಳ ಹಿಂದಷ್ಟೇ ಅಳವಡಿಸಲಾಗಿತ್ತು. ಆದ್ರೆ, ವಿದ್ಯುತ್ ಕಂಬಗಳ ಮೇಲ್ಬಾಗದಲ್ಲಿ ಒಂದೆಡೆ ಗದೆಯ ಚಿತ್ರ, ಇನ್ನೊಂದೆಡೆ ಬಿಲ್ಲು ಬಾಣದ ಹಾಗೂ ಮಧ್ಯಬಾಗದಲ್ಲಿ ತಿರುಪತಿ ತಿಮ್ಮಪ್ಪನ ನಾಮದ ಚಿತ್ರವಿತ್ತು. ಕಬ್ಬಿಣದಿಂದ ಮಾಡಿರುವ ಈ ಚಿತ್ರಗಳೇ ಅನೇಕರ ಆಕ್ಷೇಪಕ್ಕೆ ಕಾರಣವಾಗಿದ್ದವು.

ಕೋಮುಸೂಕ್ಷ್ಮ ನಗರವಾಗಿರುವ ಗಂಗಾವತಿಯಲ್ಲಿ ಒಂದೇ ಧರ್ಮದ ಚಿತ್ರಗಳನ್ನು ಹಾಕಿರುವುದು ಸರಿಯಲ್ಲ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ಎಸ್​ಡಿಪಿಐ ಸಂಘಟನೆಯವರು ಆಗ್ರಹಿಸಿದ್ದರು. ಈ ಬಗ್ಗೆ ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದು, ಕೂಡಲೇ ತರೆವುಗೊಳಿಸಬೇಕು ಎಂದು ಆಗ್ರಹಿಸಿದ್ದರು. ಇದೇ ಕಾರಣಕ್ಕೆ ಕೆಲಸವನ್ನ ಕೂಡ ಸ್ಥಗಿತಗೊಳಿಸಲಾಗಿತ್ತು. ಇನ್ನೊಂದೆಡೆ ಯಾವುದೇ ಕಾರಣಕ್ಕೂ ಕೂಡ ಕಂಬಗಳ ತೆರವಿಗೆ ಬಿಡೋದಿಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದರು. ಉಳಿದ ಕಾಮಗಾರಿಯನ್ನು ಕೂಡ ಆರಂಭಿಸೋದಾಗಿ ತಿಳಿಸಿದ್ದರು.

ಇದನ್ನೂ ಓದಿ:ಕೊಪ್ಪಳ: ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ

65 ಕೋಟಿ ರೂ. ವೆಚ್ಚದ ಕಾಮಗಾರಿ

ಇನ್ನು ನಗರ ಸೌಂದರ್ಯಿಕರಣ ಯೋಜನೆಯಡಿ 65 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಜುಲೈ ನಗರ ಸರ್ಕಲ್ ನಿಂದ ಆನೆಗೊಂದಿ ರಸ್ತೆವರೆಗೆ ಇದೇ ರೀತಿಯ ವಿದ್ಯುತ್ ಕಂಬಗಳನ್ನು ಅಳವಡಿಸಲು ಮುಂದಾಗಲಾಗಿತ್ತು. ಆದ್ರೆ, ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಕೇವಲ ಹದಿನೈದು ಕಂಬಗಳನ್ನು ಅಳವಡಿಸಿದ ನಂತರ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಈಗಾಗಲೇ ನಿಲ್ಲಿಸಿರುವ ಕಂಬಗಳನ್ನು ಕೂಡ ತೆರವುಗೊಳಿಸಬೇಕು ಎಂದು ಎಸ್​ಡಿಪಿಐ ಕಾರ್ಯಕರ್ತರು ಆಗ್ರಹಿಸುತ್ತಿದ್ದರೆ, ಇನ್ನೊದಂಡೆ ಹಿಂದೂ ಸಂಘಟನೆಗಳು, ಯಾವುದೇ ಕಾರಣಕ್ಕೂ ಕಂಬಗಳನ್ನು ತೆರವುಗೊಳಿಸಬಾರದೆಂದು ಆಗ್ರಹಿಸಿದ್ದರು.

ಜೊತೆಗೆ ಗಂಗಾವತಿ ತಾಲೂಕು, ರಾಮನ ಭಂಟ ಹನುಮನ ಜನ್ಮಸ್ಥಳವನ್ನು ಹೊಂದಿದೆ. ಇದೇ ತಾಲೂಕಿನಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳಿವೆ. ಐತಿಹಾಸಿಕ ಸ್ಥಳಗಳೂ ಇವೆ. ಇಂತಹ ಸ್ಥಳದಲ್ಲಿ ಬಿಲ್ಲು-ಬಾಣ, ಗದೆ, ತಿಮ್ಮಪ್ಪನ ನಾಮದ ಚಿತ್ರಗಳು ಇರೋ ಕಂಬಗಳನ್ನು ಹಾಕಿರುವುದು ತಪ್ಪಲ್ಲ. ತಿರುಪತಿ, ಧರ್ಮಸ್ಥಳ ಸೇರಿದಂತೆ ಅನೇಕ ಕಡೆ ಇದೇ ರೀತಿಯ ಅನೇಕ ಧಾರ್ಮಿಕ ಸಂಕೇತಗಳನ್ನು ಹೊಂದಿರುವ ದೀಪದ ಕಂಬಗಳನ್ನು ಅಳವಡಿಸಲಾಗಿದೆ. ಇಲ್ಲಿಯೂ ಕೂಡ ಅಳವಡಿಸಿದ್ರೆ ತಪ್ಪೇನು ಎಂದು ವಾಧಿಸಿದ್ದರು.

ಒಂದೇ ದಿನದಲ್ಲಿ ಎರಡು ಆದೇಶ ಹೊರಡಿಸಿದ ತಹಶೀಲ್ದಾರ್

ನಿನ್ನೆ ರಾತ್ರಿ ಗಂಗಾವತಿ ತಹಶೀಲ್ದಾರ್, ಗಂಗಾವತಿ ನಗರ ಠಾಣೆಯ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಈಗಾಗಲೇ ಅಳವಡಿಸಿರುವ ಕಂಬಗಳ ತೆರವು ಮಾಡಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಕಂಬಗಳನ್ನು ಅಲವಡಿಸಿರುವ ಕೆಆರ್​​ಐಡಿಎಲ್ ಅಧಿಕಾರಿಗಳ ವಿರುದ್ದ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಪತ್ರ ಬರೆದಿದ್ದರು. ಗಂಗಾವತಿ ತಹಶೀಲ್ದಾರ್ ನಾಗರಾಜ್ ಬರೆದ ಪತ್ರ ಮತ್ತೊಂದು ವಿವಾದವನ್ನು ಹುಟ್ಟುಹಾಕಿತ್ತು. ಸರ್ಕಾರದ ನಡೆಗೆ ರೆಡ್ಡಿ ಮತ್ತು ಸಿ.ಟಿ ರವಿ ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಕೆಲವೇ ಗಂಟೆಗಳಲ್ಲಿ ತಹಶೀಲ್ದಾರ್ ತಾವೇ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದ್ದಾರೆ.

ಈ ವಿಷಯವು ಗಂಗಾವತಿ ನಗರಸಭೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಈ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ನಗರಸಭೆ ತೀರ್ಮಾನ ಕೈಗೊಳ್ಳುವ ನಿರ್ಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ತಾವು ನೀಡಿದ್ದ ಪತ್ರವನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು ಎರಡು ಧರ್ಮೀಯರ ನಡುವೆ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಆದ್ರೆ ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತದೆ, ಕಾಮಗಾರಿಯನ್ನು ಮುಂದುವರಿಸುತ್ತಾರಾ ಅಥವಾ ಬೇರೆ ರೀತಿಯ ವಿದ್ಯುತ್ ಕಂಬಗಳನ್ನು ಹಾಕುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ