AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಪರ್ ಪಾರಿವಾಳ ತಂದ ಅವಾಂತರ: ಮೊದಲ ಮಹಡಿಯಿಂದ ಬಿದ್ರೂ ಬದುಕುಳಿದ 5ರ ಬಾಲಕ

ಕೊಪ್ಪಳದ ಹಮಾಲರ ಕಾಲೋನಿಯಲ್ಲಿ 5 ವರ್ಷದ ಬಾಲಕ ಮೊದಲನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಾನೆ. ಬಿದ್ದ ರಭಸಕ್ಕೆ ಬಾಲಕನ ತಲೆಗೆ ಪೆಟ್ಟಾಗಿದ್ದು, ವೈದ್ಯರ ಪರೀಕ್ಷೆಯಲ್ಲಿ ಬಿರುಕು ಪತ್ತೆಯಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕ ಬಿಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್​​ ಎನ್ನುವಂತಿದೆ.

ಪೇಪರ್ ಪಾರಿವಾಳ ತಂದ ಅವಾಂತರ: ಮೊದಲ ಮಹಡಿಯಿಂದ ಬಿದ್ರೂ ಬದುಕುಳಿದ 5ರ ಬಾಲಕ
ಮಹಮ್ಮದ್ ಹ್ಯಾರಿಸ್
ಶಿವಕುಮಾರ್ ಪತ್ತಾರ್
| Edited By: |

Updated on:Dec 22, 2025 | 7:34 PM

Share

ಕೊಪ್ಪಳ, ಡಿಸೆಂಬರ್​ 22: ಐದು ವರ್ಷ ಬಾಲಕ (Child) ಮನೆಯ ಮೊದಲನೇ ಮಹಡಿಯಿಂದ ಕೆಳಗೆ ಬಿದ್ದು (Fall) ಗಂಭೀರ ಗಾಯಗೊಂಡಿರುವಂತಹ ಘಟನೆ ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ. ಪವಾಡಸದೃಶವೆಂಬಂತೆ ಬಾಲಕ ಪಾರಾಗಿದ್ದಾನೆ. ಮಹಮ್ಮದ್ ಹ್ಯಾರಿಸ್​ ಸಾವು ಗೆದ್ದುಬಂದ ಬಾಲಕ. ಕೂಡಲೇ ಕೊಪ್ಪಳ ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಆದರೆ ವೈದ್ಯರ ಪರೀಕ್ಷೆ ವೇಳೆ ಮಹಮ್ಮದ್ ಹ್ಯಾರಿಸ್ ತಲೆಯಲ್ಲಿ ಬಿರುಕು ಕಂಡುಬಂದಿದೆ. ಬಾಲಕ ಮೊದಲನೇ ಮಹಡಿಯಿಂದ ಕೆಳೆಗ ಬಿಳ್ಳುವ ದೃಶ್ಯ ಸೆರೆಯಾಗಿದ್ದು, ಎದೆ ಝಲ್ ಅನ್ನಿಸುತ್ತದೆ.

ನಡೆದದ್ದೇನು?

ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ಐದು ವರ್ಷದ ಬಾಲಕ ಮಹಮ್ಮದ್ ಹ್ಯಾರಿಸ್ ನಿನ್ನೆ ಮಧ್ಯಾಹ್ನ ಮೊದಲನೇ ಮಹಡಿಯಲ್ಲಿ ಪೇಪರ್​ನಿಂದ ಪಾರಿವಾಳ ಮಾಡಿ ಆಟವಾಡುತ್ತಿದ್ದ. ಅದನ್ನು ಗಾಳಿ ತೂರಿ ಹಿಡಿಯಲು ಹೋದಾಗ ಮೊದಲನೇ ಮಹಡಿಯಿಂದ ಕೆಳಗಡೆ ಬಿದ್ದಿದ್ದಾನೆ. ಮಹಮ್ಮದ್ ಕೆಳಗಡೆ ಬಿಳ್ಳುವ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ಆಟವಾಡುತ್ತಿದ್ದ ಬಾಲಕನ ಮೇಲೆ ಇದೆಂತಾ ವಿಕೃತಿ?: ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತೆ

ಮನೆಯ ಕೆಳಗಡೆ ಮಹಮ್ಮದ್ ಹ್ಯಾರಿಸ್ ಸಹೋದರಿ ಕೂಡ ಆಟವಾಡುತ್ತಿದ್ದು, ಮಹಮ್ಮದ್ ಬಿದ್ದ ತಕ್ಷಣ ಮೇಲೆ ಎತ್ತಿದ್ದಾಳೆ. ಒಳಗಡೆಯಿಂದ ಪೋಷಕರು ಕಿರುಚುತ್ತಾ ಓಡೋಡಿ ಬಂದಿದ್ದಾರೆ. ಕೆಳಗಡೆ ಬಿದ್ದ ಮಗುವನ್ನ ಕೂಡಲೇ ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಹಮ್ಮದ್​​ಗೆ 2 ಗಂಟೆಯೊಳಗೆ ಆಪರೇಷನ್ ಮಾಡಿದ್ದಾರೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿಯಿಂದ ಹಲ್ಲೆ: ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ

ಒಟ್ಟಾರೆ ಮೊದಲನೇ ಮಹಡಿಯಿಂದ ಬಾಲಕ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ್ದಾನೆ. ಆತನ ಹಣೆ ಬರಹ ಗಟ್ಟಿಯಿರುವ ಕಾರಣ ಬದುಕಿಳಿದಿದ್ದಾನೆ. ಸದ್ಯ ಮಹಮ್ಮದ್​ಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:29 pm, Mon, 22 December 25

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ